ಬೆಂಗಳೂರಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಮಹಿಳೆಯ ಸರಗಳ್ಳತನ ಮಾಡಲು ಯತ್ನಿಸಲಾಗಿದೆ. ಅದೃಷ್ಟವಶಾತ್ ಸ್ವಲ್ಪದರಲ್ಲೇ ಮಹಿಳೆ ಪಾರಾಗಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಾಪುರದಲ್ಲಿ ನಡೆದಿದೆ.
ಕಳೆದ ಜೂನ್ 25 ರ 7. 30 ರ ಸುಮಾರಿಗೆ ಘಟನೆ ನಡೆದಿದ್ದು, ರಸ್ತೆಯಲ್ಲಿ ನಡೆದುಕೊಂಡು ಬರ್ತಿದ್ದ ಸ್ವಪ್ನ ಎಂಬ ಮಹಿಳೆಯ, ಸರ ಕಸಿದು ಪರಾರಿಯಾಗಲು ಯತ್ನಿಸಲಾಗಿದೆ. ಆದರೆ ಸರಗಳ್ಳತನ ಯತ್ನ ವಿಫಲವಾಗಿದ್ದು, ತಕ್ಷಣ ಚೀರಿಕೊಂಡ ಮಹಿಳೆಯಿಂದ ಸರಗಳ್ಳ ಓಡಿ ಹೋಗಿದ್ದಾನೆ.
ಎದುರಿನಿಂದ ಬರ್ತಿದ್ದ ಸ್ವಪ್ನ ತಾಯಿ ಮತ್ತು ಸಹೋದರು ಸರಗಳ್ಳನನ್ನ ಹಿಡಿಯಲು ಯತ್ನಿಸಿದರು. ಆದರೆ ಮಾರಕಾಸ್ತ್ರ ತೋರಿಸಿ ಆರೋಪಿ ಪರಾರಿ ಆಗಿದ್ದಾನೆ.
ಈ ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


