ವರದಿ: ಮಲಾರ ಮಹದೇವಸ್ವಾಮಿ
ಹೆಚ್.ಡಿ.ಕೋಟೆ: ತಾಲೂಕಿನ ಕುಡಾಂಚಿನ ಹಾಡಿಯಾದ ಮಾಳದ ಹಾಡಿ ಶಾಲಾ ಮಕ್ಕಳಿಗೆ ಇಂದು ಅಗತ್ಯ ವಸ್ತುಗಳನ್ನು ನೀಡಿ ಮಾಹಿತಿ ತಂತ್ರ ಜ್ಞಾನ ಉದ್ಯೋಗಿ ಪ್ರದೋಶ್ ಮಾನವೀಯತೆ ಮೆರೆದರು.
ಪ್ರದೋಶ್ ಬೆಂಗಳೂರಿಂದ ಒಮ್ಮೆ ಕೋಟೆಯ ವನಸಿರಿಯನ್ನು ಮತ್ತು ಇಲ್ಲಿನ ಕಾಡು ಪ್ರಾಣಿಗಳನ್ನು ನೋಡುವ ಕುತೂಹಲದಿಂದ ಸಾಫರಿಗೆ ಬಂದಿದ್ದರು. ಸಾಫರಿಗೆ ಬಂದಂತ ಸಂದರ್ಭದಲ್ಲಿ ಕಾಡನ್ನು ವೀಕ್ಷಣೆ ಮಾಡುತ್ತ ದೂರದಲ್ಲಿ ಕಂಡ ಹಾಡಿಯ ಬಗ್ಗೆ ಜೊತೆಗಿದ್ದ ತನ್ನ ಪರಿಚಯಸ್ಥ N ಬೆಳತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮಾಲಿಂಗಯ್ಯ ಆಲಿಯಾಸ್ ಇಂದ್ರೇಶ್ ರವರನ್ನು ಕೇಳಿ ತಿಳಿದುಕೊಂಡು ಹಾಡಿಗೆ ಭೇಟಿ ನೀಡಿದರು.
ಅಲ್ಲಿ ಇವರ ಕಣ್ಣಿಗೆ ಒಂದು ಪುಟ್ಟದಾದ ಶಾಲೆಯೊಂದು ಕಣ್ಣಿಗೆ ಬೀಳುತ್ತದೆ. ಅಲ್ಲಿ ಮಕ್ಕಳಲ್ಲಿ ಮಕ್ಕಳಾಗಿ ತಾಯಂತೆ ಮಕ್ಕಳಿಗೆ ಆಟೋಟ ಗಳನ್ನು ಹೇಳಿಕೊಡುತ್ತ ಕುಳಿತಿದ್ದ ಶಾಲೆಯ ಮುಖ್ಯಶಿಕ್ಷಕಿ ಮಮತಾಳನ್ನು ಮಾಲಿಂಗಯ್ಯ ಜೊತೆಗೂಡಿ ಭೇಟಿಯಾಗಿ ಶಾಲೆಯ ಬಗ್ಗೆ ವಿಚಾರಿಸಿ, ಕೆಲವು ಮೂಲಭೂತ ಸೌಕರ್ಯದ ಕೊರತೆಯ ಬಗ್ಗೆ ತಿಳಿದುಕೊಂಡು ನಾನು ಹಂತ ಹಂತವಾಗಿ ಮಕ್ಕಳಿಗೆ ಉಪಯುಕ್ತ ವಸ್ತುಗಳನ್ನು ಒದಗಿಸುತ್ತೇನೆ ಎಂದು ಹೇಳಿದರಲ್ಲದೇ, ಇಂದು ಪ್ರದೋಶ್ ರವರು ಮತ್ತು ಅವರ ತಾಯಿ ಪದ್ಮಜಾ ಹಾಗೂ ಹಾಡಿಯ ಹಿರಿಯ ಮುಖಂಡ ರಾಜಣ್ಣ, ಯುವ ಮುಖಂಡ ದೇವೇಶ (ಗಣೇಶ್ )ಸಂಶೋಧಕಿ ಸುಶೀಲ, ಛಾಯಾಗ್ರಾಹಕ ಮುರಳಿಧರ್ ಸಮ್ಮುಖದಲ್ಲಿ ಮಕ್ಕಳಿಗೆ ವಿತರಣೆ ಮಾಡಲು ನೀರಿನ ಬಾಟಲಿಗಳು, ತಟ್ಟೆಗಳು, ಲೋಟಗಳು ಬಾಲ್ ಮತ್ತು ಬ್ಯಾಟ್ ಹಾಗೂ ಇನ್ನಿತರ ವಸ್ತುಗಳನ್ನು ಮುಖ್ಯಶಿಕ್ಷಕಿ ಮಮತಾ ರವರಿಗೆ ಹಸ್ತಾಂತರಿಸಿದರು
ಬಡಜನರಿಗೆ ನೇರವಾಗುವ ಬದಲು ಬಡಜನರನ್ನು ಸುಲಿಗೆಮಾಡುವ ಈ ಕಾಲದ ಜನರಿಗೆ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಇವರ ನಿಸ್ವಾರ್ಥ ಸೇವಾ ಕಾರ್ಯ ಮಾದರಿ ಅಲ್ಲವೇ? ಇವರ ಸಾಮಾಜಿಕ ಕಳಕಳಿಯನ್ನು ನೋಡಿ ಹಾಡಿಯ ಜನರು ಹರ್ಷ ವ್ಯಕ್ತ ಪಡಿಸಿದರು.
ನಾನು ಯಾವುದೇ ಪ್ರಚಾರಕ್ಕಾಗಿ ಈ ಕಾರ್ಯವನ್ನು ಮಾಡಿಲ್ಲ ನನ್ನಂತೆ ಎಷ್ಟೋ ಜನರಿಗೆ ಸೇವೆ ಮಾಡುವ ಅವಕಾಶ ಇರುತ್ತದೆ. ನಾವು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರೆ ಮುಂದೆ ಅವರ ಭವಿಷ್ಯ ರೂಪಿಸಿದಂತೆ ಆಗುತ್ತದೆ. ನಾವು ಬಡವಿದ್ಯಾರ್ಥಿಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂಬುದು ನನ್ನ ಉದ್ದೇಶ
— ಪ್ರದೋಶ್ ಮಾಹಿತಿ. ತಂತ್ರಜ್ಞಾನ ಉದ್ಯೋಗಿ
ದೇವರು ನಮಗೆ ಸಹಾಯ ಮಾಡುವ ಶಕ್ತಿ ನೀಡಿದ್ದಾನೆ ಅಂದ ಮೇಲೆ ನಾವು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೇರವಾಗಿ ದೇವರನ್ನು ಕಾಣಬೇಕು, ಇದು ಯಾವುದೇ ಪ್ರಚಾರಕಲ್ಲ.
— ಪದ್ಮಜಾ, ಪ್ರದೋಶ್ ತಾಯಿ
ಎಷ್ಟೋ ಸಂಘ ಸಂಸ್ಥೆಗಳು ಸಮಾಜ ಸೇವಕರು ಆಶ್ವಾಸನೆ ಕೊಟ್ಟು ಹೋಗುತ್ತಾರೆ ಅಷ್ಟೇ, ಆದರೆ ಪ್ರದೋಶ್ ರವರು ನಾವು ಹೇಳಿದ ಕೆಲವೇ ದಿನದಲ್ಲಿ ಕಾರ್ಯರೂಪಕ್ಕೆ ತಂದಿರುವುದು ತುಂಬಾ ಸಂತೋಷ ತಂದಿದೆ ಪ್ರದೋಶ್ ರವರಿಗೆ ಇನ್ನೂ ಹೆಚ್ಚು ಸಹಾಯ ಮಾಡುವ ಶಕ್ತಿಯನ್ನು ಭಗವಂತ ಕರುಣಿಸಲಿ, ನಮ್ಮ ಹಾಡಿ ಮಕ್ಕಳಿಗೆ ಸಹಾಯ ಮಾಡಿರೋದು ನಮ್ಗ ತುಂಬಾ ಖುಷಿಯಾಗಿದೆ
— ರಾಜಣ್ಣ , ಮಾಳದ ಹಾಡಿ ನಿವಾಸಿ ಹಿರಿಯ ಮುಖಂಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4