ಮುಂಬೈ: ಮದುವೆ ಅಂದರೆ ಶಾಸ್ತ್ರ, ಸಂಪ್ರದಾಯ ಹಾಗೂ ಜೊತೆಜೊತೆಗೆ ಆಯಾ ಟ್ರೆಂಡ್ ಗೆ ತಕ್ಕ ಹಾಗೆ ಸಂಭ್ರಮ, ಸಂತೋಷ ಇತ್ಯಾದಿ ಇತ್ಯಾದಿ. ಭಾರತದ ಟಾಪ್ ಕಂಪನಿಯ ಒಡೆಯ ಎನಿಸಿಕೊಂಡಿರುವ ಮುಕೇಶ್ ಅಂಬಾನಿ- ನೀತಾ ಅಂಬಾನಿ ದಂಪತಿಯ ಕಿರಿ ಮಗ ಅನಂತ್- ರಾಧಿಕಾ ಮದುವೆಗೆ ಮುಂಚಿನ ಶಾಸ್ತ್ರ- ಸಂಪ್ರದಾಯದ ಆಚರಣೆಗಳು ನಿತ್ಯವೂ ಸೋಷಿಯಲ್ ಮೀಡಿಯಾ, ಮೈಕ್ರೋಬ್ಲಾಗಿಂಗ್ ಸೈಟ್ ಗಳಲ್ಲಿ ವೈರಲ್ ಆಗುತ್ತಿವೆ.
ಜುಲೈ ಹನ್ನೆರಡನೇ ತಾರೀಕು ಮದುವೆ. ಅದಕ್ಕೂ ಮುಂಚೆ ಹಾಗೂ ನಂತರದಲ್ಲಿ ಹಲವು ಕಾರ್ಯಕ್ರಮಗಳ ವೇಳಾಪಟ್ಟಿ ಸಿದ್ಧವಾಗಿದ್ದು, ಇದೀಗ ಮುಂಬೈನಲ್ಲಿ ನಡೆದ ಅರಿಶಿಣದ ಶಾಸ್ತ್ರ (ಉತ್ತರ ಭಾರತದಲ್ಲಿ ಹಳದಿ ಕಾರ್ಯಕ್ರಮ ಅಂತಾರೆ) ಸಾಂಪ್ರದಾಯಿಕವಾಗಿಯೂ ಅದೇ ವೇಳೆ ಅದ್ಧೂರಿಯಾಗಿಯೂ ಮುಗಿದಿದೆ.
ಅದಕ್ಕೂ ಮುಂಚೆ ಸಂಗೀತ್ ಕಾರ್ಯಕ್ರಮ, ವರನ ತಾಯಿ ಮನೆಯ ತವರಿನವರಿಂದ ನಡೆಯುವ ಕಾರ್ಯಕ್ರಮ ಹಾಗೂ ಆರಂಭದಲ್ಲಿ ಸಾಮೂಹಿಕ ವಿವಾಹ ಸಮಾರಂಭ, ದಾನ- ಧರ್ಮ ಇತ್ಯಾದಿಗಳು ನಡೆದವು.
ಅರಿಶಿಣದ ಶಾಸ್ತ್ರ ನಡೆದದ್ದು ಮುಂಬೈ ಅಷ್ಟೇ ಅಲ್ಲ, ಜಗತ್ತಿನಲ್ಲಿಯೇ ಹೆಸರಾದ ಆಂಟಿಲಿಯಾ ಮನೆಯಲ್ಲಿ. ಸಲ್ಮಾನ್ ಖಾನ್, ರಣವೀರ್ ಸಿಂಗ್, ಸಾರಾ ಅಲಿ ಖಾನ್, ಅನನ್ಯಾ ಪಾಂಡೆ, ಜಾನ್ಹವಿ ಕಪೂರ್ ಸೇರಿದಂತೆ ಬಾಲಿವುಡ್ ನ ತಾರಾ ಬಳಗವೇ ಈ ಕಾರ್ಯಕ್ರಮದಲ್ಲಿ ಭಾಗೀ ಆಗಿತ್ತು. ಇದರಲ್ಲಿ ಸ್ಟಾರ್ ಗಳ ಹೆಸರು ಅನ್ನೋದಕ್ಕಿಂತ ಆಂಟಿಲಿಯಾದಲ್ಲಿ ನಕ್ಷತ್ರಗಳ ಗ್ಯಾಲಕ್ಸಿಯೇ ಸೇರಿತ್ತು. ಸಾಂಪ್ರದಾಯಿಕ ಕಾರ್ಯಕ್ರಮವಾದ್ದರಿಂದ ಅನಿಲ್ ಅಂಬಾನಿ ಹಾಗೂ ಅವರ ಪತ್ನಿ ಟೀನಾ ಅವರ ಸಹ ಇದ್ದರು. ಉದ್ಧವ್ ಠಾಕ್ರೆ, ಅವರ ಪತ್ನಿ ರಶ್ಮಿ, ಮಗ ಆದಿತ್ಯ ಸಹ ಬಂದಿದ್ದರು.
ಜುಲೈ ಹನ್ನೆರಡನೇ ತಾರೀಕು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ಇರುವ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ಅನಂತ್— ರಾಧಿಕಾ ಮದುವೆ ಕಾರ್ಯಕ್ರಮ ನಡೆಯಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA