ಬೆಳಗಾವಿ: ಅಂಗನವಾಡಿ ಸಹಾಯಕಿಯ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಕತಿ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಕಲ್ಲಪ್ಪ ಅಲಿಯಾಸ್ ಕಲ್ಯಾಣಿ ಮೋರೆ(44) ಬಂಧಿತ ಆರೋಪಿ.
ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದಲ್ಲಿ ಜ.1ರಂದು ಮಕ್ಕಳು ಆರೋಪಿ ಮನೆ ಮುಂದಿರುವ ಹೂ ಕಿತ್ತಿದ್ದಕ್ಕೆ ಅಂಗನವಾಡಿ ಸಹಾಯಕಿ ಸುಗಂಧಾ ಎಂಬುವವರ ಮೇಲೆ ಹಲ್ಲೆ ಮಾಡಿ ಅವಾಚ್ಯವಾಗಿ ಬೈದು, ಮೂಗು ಕಟ್ ಮಾಡಿದ್ದ. ಸದ್ಯ ಗಾಯಗೊಂಡಿದ್ದ ಸುಗಂಧಾ ಮೋರೆ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


