ಮೈಸೂರು: ಹೆಚ್ ಡಿ ಕೋಟೆ ತಾಲೂಕಿನ ತೆಲಗುಮಸಳ್ಳಿ ಗ್ರಾಮದಲ್ಲಿ ದಿಢೀರ್ ಕುಸಿದ ಅಂಗನವಾಡಿ ಮೇಲ್ಛಾವಣಿಯಿಂದಾಗಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಅಂಗನವಾಡಿಯಲ್ಲಿ ಊಟ ಮುಗಿಸಿ ಆರು ಮಕ್ಕಳು ನಿದ್ರಿಸುತ್ತಿದ್ದ ವೇಳೆ ಈ ಅವಘಡ ನಡೆದಿದೆ.
ಘಟನೆಯಲ್ಲಿ ಪೂರ್ಣಿಮಾ ಮತ್ತು ದಿಶಾಂತ ಎಂಬ ಮಕ್ಕಳ ತಲೆಗೆ ಪೆಟ್ಟಾಗಿದ್ದು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೇಲ್ಛಾವಣಿ ಕುಸಿದ ವಿಷಯ ತಿಳಿಯುತ್ತಿದ್ದಂತೆ ಅಂಗನವಾಡಿಗೆ ಶಾಸಕ ಅನಿಲ ಚಿಕ್ಕಮಾದು, ಶಿಶು ಅಭಿವೃದ್ಧಿ ಇಲಾಖೆಯ ಡಿ ಡಿ ಬಸವರಾಜು ಹಿರಿಯ ಅಧಿಕಾರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


