ಸರಗೂರು: ಅಂಗವಿಕಲತೆ ಎಂಬುದು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂದು ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಬಿ. ನಂದ್‌ಕುಮಾರ್ ಅವರು ಹೇಳಿದರು.
ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಾಗೂ ಸಮುದಾಯದ ಸಂಘ-ಸಂಸ್ಥೆಗಳ ಸಹಭಾಗಿತ್ವದೊಂದಿಗೆ ವಿಶೇಷ ಚೇತನ ವ್ಯಕ್ತಿಗಳ ನಾಯಕತ್ವ ಮತ್ತು ಭಾಗವಹಿಸುವಿಕೆ ಎಂಬ ಘೋಷ ವಾಕ್ಯದೊಂದಿಗೆ ಅಂತರರಾಷ್ಟ್ರೀಯ ವಿಶೇಷಚೇತನರ ದಿನಾಚರಣೆಯನ್ನು ಆಚರಿಸಲಾಯಿತು.
ಬಳಿಕ ಮಾತನಾಡಿದ ಅಂತರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಬಿ.ಆನಂದ್‌ಕುಮಾರ್ ಅವರು, ಅಂಗವಿಕಲತೆ ಎಂಬುದು ಕೇವಲ ಶಾಪವಲ್ಲ, ಅದೊಂದು ದೇವರ ವರ. ಅಂಗವಿಕಲತೆ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು ಸಮಾಜದಲ್ಲಿ ಗುರುತಿಸಿಕೊಳ್ಳುವಂತಹ ಕೆಲಸಗಳನ್ನು ಮಾಡಬೇಕು ಎಂದರು.
ಗ್ರಾಮೀಣ ಮಟ್ಟದಲ್ಲಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವಂತಹ ಅಂಗವಿಕಲ ಯುವಕರುಗಳಿಗೆ, ಮುಂದಿನ ದಿನಗಳಲ್ಲಿ ಕ್ರೀಡಾ ತರಬೇತಿಯನ್ನು ನೀಡಲಾಗುವುದು. ಹಾಗೂ ಯಾವುದೇ ಕಾರಣಕ್ಕೂ ಗುರಿ ತಲುಪುವ ವರೆಗೂ ಯುವಕರು ಕುಗ್ಗ ಬೇಡಿ, ಎಂದು ಧೈರ್ಯ ತುಂಬಿದರು.
ನಂತರ ವಡುವಲು ವಿರಕ್ತ ಮಠದ ಮಠಾಧ್ಯಕ್ಷರಾದ ಶ್ರೀ ಶ್ರೀ ಮಹಾದೇವಸ್ವಾಮಿಗಳು ಮಾತನಾಡಿ, ವಿಶೇಷಚೇತನರಿಗೆ ಅನುಕಂಪ ತೋರಿಸುವ ಬದಲು ಅವಕಾಶಗಳನ್ನು ನೀಡಿ, ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತಹ ಕೆಲಸಗಳನ್ನು ಇಂದು ಮಾಡಬೇಕಿದೆ ಎಂದರು.
ವಿಶೇಷಚೇತನರಿಗೆ ಸರ್ಕಾರದಿಂದ ಹಲವಾರು ಯೋಜನೆಗಳು ಬರುತ್ತಿವೆ. ಇವುಗಳನ್ನು ವಿಶೇಷಚೇತನರು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವಿಶೇಷಚೇತನರಿಗೆ ವಿಶೇಷ ಕಾಳಜಿ ವಹಿಸಿ, ಸಮಾಜದಲ್ಲಿ ಗುರುತಿಸುವಂತಹ ಕೆಲಸಗಳನ್ನು ಮಾಡುತ್ತಿದೆ. ಇಂತಹ ಕೆಲಸಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಯಲ್ಲಿ ಎಂದು ಆಶಿಸಿದ್ದರು.
ಇದೇ ಸಂಧರ್ಭದಲ್ಲಿ ಮುಳ್ಳೂರು ಗ್ರಾಮದ ಮಹದೇವಪ್ಪ ಅವರು ಬಸ್ ಪಾಸ್‌ಗಾಗಿ ವಿಶೇಷಚೇತನರನ್ನು ಅಲೆದಾಡಿಸುವುದು ಬೇಡ. ವಿಶೇಷಚೇತನರಿಗೆ ಜನವರಿ ತಿಂಗಳಲ್ಲಿ ದಯವಿಟ್ಟು ಬಸ್ ಪಾಸ್ ನೀಡಬೇಕು ಎಂದು ಆಗ್ರಹಿಸಿದರು.
ಅಂತರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಬಿ.ಆನಂದ್ ಕುಮಾರ್ ಅವರನ್ನು ಸನ್ಮಾನಿಸಿ. ಹೈರಿಗೆ ಗ್ರಾಮದ ವಿಕಲಚೇತನರಿಂದ ಉತ್ಪಾದಿಸಲಾದ ಸ್ಯಾನಿಟೈಸರ್ ಹಾಗೂ ಇನ್ನಿತರರ ಉತ್ಪನ್ನಗಳಿಗೆ ಚಾಲನೆ ನೀಡಿದರು.
ಇದೇ ವೇಳೆ ತಹಶೀಲ್ದಾರ್ ಚೆಲುವರಾಜು, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಚಂದ್ರಕಾಂತ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸತೀಶ್, ಮೂಳೆ ಮತ್ತು ಕೀಲು ರೋಗ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ.ಎಂ ಆರ್.ಸೀತಾರಾಂ ಹಾಗೂ ಇನ್ನಿತರರು ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy