ಸರಗೂರು: ಪ್ರಾಣಿ ಬಲಿ ನಿಷೇಧಿಸುವಂತೆ ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಚಿಕ್ಕದೇವಮ್ಮನ ಜಾತ್ರೆಯಲ್ಲಿ ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ತಡೆಗಟ್ಟಲಾಯಿತು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಬಸವ ಧರ್ಮ ಜ್ಞಾನಪೀಠ ಅಧ್ಯಕ್ಷ ದಯಾನಂದ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಪಟ್ಟಣ ಪೋಲಿಸ್ ಠಾಣೆಯಲ್ಲಿ ಬುಧವಾರ ದಂದು ಪ್ರಾಣಿ ಬಲಿ ನಿಷೇಧ ಜಾಗೃತಿ ನಿರ್ಮೂಲನಾ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳದೆ ವರ್ಷದಿಂದ ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಕೈಗೊಂಡ ನಿರಂತರ ಪ್ರಯತ್ನದಿಂದಾಗಿ ಬಹುತೇಕ ಪ್ರಾಣಿ ಬಲಿ 95% ಭಾಗದಷ್ಟು ಯಶಸ್ವಿಯಾಗಿದೆ. ಹೀಗಾಗಿ ಪ್ರತಿ ಜಾತ್ರೆಯಲ್ಲಿಯೂ ರಕ್ತ ಮುಕ್ತ ಸುಕ್ಷೇತ್ರವಾಗಿ ಮಾರ್ಪಟ್ಟಿಸುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.
ಮೂರು ದಿನಗಳ ಕಾಲ ಜಾತೆಯಲ್ಲಿ ಪ್ರಾಣಿ ಬಲಿ ತಡೆ ಕುರಿತು ವ್ಯಾಪಕ ಜನ ಜಾಗೃತಿ ಮೂಡಿಸಲಾಯಿತು. ಪ್ರಾಣಿ ಬಲಿ ತಡೆದು ಅರಿಶಿನ ಕುಂಕುಮ ಧೂಪ, ದೀಪ, ತೆಂಗಿನಕಾಯಿ, ಕುಂಬಳಕಾಯಿ, ನಿಂಬೆಹಣ್ಣು ಮೊದಲಾದ ಸಾತ್ವಿಕ ಮಂಗಳ ದ್ರವ್ಯಗಳ ಮೂಲಕ ಅಹಿಂಸಾತ್ಮಕವಾಗಿ ದೇವಿಗೆ ಪೂಜೆ ಸಲ್ಲಿಸಬೇಕು ಎಂದು ಮನವಿ ಮಾಡಲಾಗಿದೆ’ಎಂದರು.
ದೇವಾಲಯಗಳು ವಧಾಲಯಗಳಾಗದೆ ದಿವ್ಯಾಲಯವಾಗಬೇಕು, ಜಾತ್ರಾ ಪರಿಸರಗಳ ಧಾರ್ಮಿಕ ಸ್ಥಾನಗಳು ಕಟುಕರ ಕೇರಿಗಳಾಗಬಾರದು, ಜೀವ ತೆಗೆಯುವ ಮೃತ್ಯು ಕೂಪವಾಗಬಾರದು, ಪ್ರಾಣಿಹಿಂಸೆ ಮತ್ತು ಮದ್ಯ — ಮಾದಕ ಪದಾರ್ಥಗಳಿಂದ ಮುಕ್ತವಾಗಿರಬೇಕು, ಅಹಿಂಸೆ ಕರುಣೆ, ಪ್ರೇಮ, ಜೀವದಯೆ, ಮಾನವೀಯತೆ, ಆಧ್ಯಾತ್ಮಿಕತೆ ಮುಂತಾದ ದಿವ್ಯ ಮೌಲ್ಯಗಳನ್ನು ಸಾರುವ ಸುಸಂಸ್ಕಾರ ನೀಡುವ ದಿವ್ಯ ಧಾಮಗಳಾಗಬೇಕು, ಸಧ್ಬಕ್ತಿ, ಸುಜ್ಞಾನ ಮತ್ತು ಸದಾಚಾರಗಳ ತ್ರಿವೇಣಿ ಸಂಗಮವಾಗಬೇಕು, ಈ ಹಿನ್ನೆಲೆಯಲ್ಲಿ ಭಕ್ತಾದಿಗಳು, ಸಮಾಜ, ದೇವಾಲಯದ ಆಡಳಿತ ಮಂಡಳಿ ಹಾಗೂ ಸರ್ಕಾರ ಮತ್ತು ಸುದ್ದಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು ಎಂದು ವಿನಂತಿ ಮಾಡಿಕೊಂಡರು.
ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್ ಮಾತನಾಡಿ ಜೀವ ಹಿಂಸಾತ್ಮಕ ಹಕರೆಗಳನ್ನು ಕೈಬಿಟ್ಟು ಜೀವದಯಾ ಪರವಾದ ಹರಕೆಗಳನ್ನು ಭಕ್ತರು ಕೈಗೊಳ್ಳಬೇಕು. ಇದರಂತೆ ಅವರು ನಡೆದುಕೊಂಡಿದ್ದಾರೆ. ಭಕ್ತರು ಇದೇ ರೀತಿ ಮುಂದುವರಿಸಬೇಕು. ಆ ಮೂಲಕ ಪ್ರಾಣಿ ಬಲಿ ತಡೆಗಟ್ಟುವಲ್ಲಿ ಮುಂದಾಗಬೇಕು’ ಎಂದು ಸಲಹೆ ನೀಡಿದರು.
ಸ್ವಾಮೀಜಿ ಸಮ್ಮುಖದಲ್ಲಿ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಗೂ ಹಾಲುಗಡ ಜಾತ್ರಾ ಮಾಳ ಹಾಗೂ ಇಟ್ನ ಗ್ರಾಮ ಮತ್ತು ಅಕ್ಕಪಕ್ಕದ ಗ್ರಾಮಗಳಿಗೆ ಭೇಟಿ ನೀಡಿ ಪ್ರಾಣಿ ಬಲಿ ನಿಷೇಧ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಉಪನಿರೀಕ್ಷಕ ಆರ್ ಕಿರಣ್, ಜಾತ್ರಾ ಸಮಿತಿ ಅಧ್ಯಕ್ಷ ದೊಡ್ಡವೀರನಾಯಕ, ಕಂದಾಯ ಇಲಾಖೆ ಆರ್ ಐ ರವಿಚಂದ್ರನ್,ವಿ ಎ ಕುಮಾರ್,ಪೂಲೀಸ್ ಸಿಬ್ಬಂದಿಗಳಾದ ಇಮ್ರಾನ್ ,ಜಗದೀಶ್, ಪುರುಷೋತ್ತಮ್, ಕೃಷ್ಣಯ್ಯ , ಶಿವಪ್ಪ,ಮುಖಂಡರು ಮುಳ್ಳೂರು ಪುಟ್ಟಸ್ವಾಮಿ,ಶಿವಚನ್ನಪ್ಪ, ನಿಂಗರಾಜು ,ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು..
ಪ್ರಾಣಿಗಳ ಮೇಲೆ ಅತಿ ಕ್ರೂರವಾಗಿ ವರ್ತಿಸಿ ಹಿಂಸೆ ನೀಡುವ ಜನರಲ್ಲಿ ಜಾಗೃತಿ ಮೂಡಿಸಬೇಕು. ಪ್ರಾಣಿಗಳ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳಿವೆ. ಅವುಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು.
ಅವರು ತಮ್ಮ ವರ್ತನೆ ತಿದ್ದಿಕೊಳ್ಳಲು ಸಾಧ್ಯ’ ಎಂದರು. ಪ್ರಾಣಿಗಳಿಗೆ ಕರುಣೆ ತೋರಬೇಕು. ಈ ಭೂಮಿ ನಮ್ಮದು ಮಾತ್ರವಲ್ಲ. ಭೂಮಿಯಲ್ಲಿನ ಪ್ರತಿ ಪ್ರಾಣಿಗೂ ಬದುಕುವ ಹಕ್ಕಿದೆ. ಅದನ್ನು ಜನರು ಮನಗಾಣಬೇಕು ಎಂದು ಜಾಥಾದಲ್ಲಿ ಹೇಳಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


