ತುಮಕೂರು: ಆಂಜನೇಯಸ್ವಾಮಿ ಜಾತ್ರಾ ರಥೋತ್ಸವದಲ್ಲಿ ಹಿಂದೂ ಮುಸಲ್ಮಾನರ ಸಾಮರಸ್ಯ ಸಾರಿದರು.ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದ ಆಂಜನೇಯಸ್ವಾಮಿ ಜಾತ್ರಾ ರಥೋತ್ಸವದಲ್ಲಿ ಈ ಘಟನೆ ನಡೆಯಿತು.
ಆಂಜನೇಯ ಸ್ವಾಮಿ ರಥೋತ್ಸವದ ವೇಳೆ ಮಾರ್ಗಮಧ್ಯೆ ಸಿಕ್ಕ ಮಸೀದಿ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮುಸ್ಲಿಂ ಬಾಂಧವರು ಆಂಜನೇಯ ಸ್ವಾಮಿ ಗೆ ವಿಶೇಷ ಅರ್ಚನೆ ಮಾಡಿಸುವ ಮೂಲಕ ಸಾಮರಸ್ಯ ಸಂದೇಶ ಸಾರಿದರು.
ಮಸೀದಿ ಮುಂಭಾಗ ಆಂಜನೇಯ ಸ್ವಾಮಿ ರಥವನ್ನು ಹಿಂದೂ ಮುಸಲ್ಮಾನರು ಜೊತೆಯಾಗಿ ಎಳೆಯುವ ಮೂಲಕ ಸಾಮರಸ್ಯದ ಸಂದೇಶ ಸಾರಿದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy