ತಮಿಳುನಾಡಿನ ಅಣ್ಣಾ ಡಿಎಂಕೆಯ ನಾಯಕತ್ವಕ್ಕಾಗಿ ವಿಚಾರವಾಗಿ ಇಂದು ನಡೆದ ಬೆಳವಣಿಗೆಗಳು ಹಾದಿ-ಬೀದಿ ರಂಪಕ್ಕೆ ಸಾಕ್ಷಿಯಾಗಿದೆ. ಪಕ್ಷದ ಹಂಗಾಮಿ ಪ್ರಧಾನ ಕಾಂiiದರ್ಶಿಯಾಗಿ ಎಡಪ್ಪಾಡಿ ಪಳನಿ ಸ್ವಾಮಿ ಆಯ್ಕೆಯಾದ ಬೆನ್ನಲ್ಲೇ ಈ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಮುಖ್ಯಮಂತ್ರಿ ಪಳನಿ ಸ್ವಾಮಿ ಬಣದ ಆಕ್ರೋಶ ಭುಗಿಲೆದ್ದಿದೆ. ಪನ್ನೀರ್ ಸೆಲ್ವಂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸುವ ನಿuಯವನ್ನು ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಚೆನ್ನೈನಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಮಾಜಿ ಸಚಿವ ಆರ್.ಬಿ. ಉದಯ್‌ಕುಮಾರ್ ಹಂಗಾಮಿ ಅಧ್ಯಕ್ಷರಾಗಿ ಎಡಪ್ಪಾಡಿ ಪಳನಿ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.
ಈ ಮೂಲಕ ಕಾನೂನು ಹೋರಾಟದಲ್ಲಿ ಪಳನಿ ಸ್ವಾಮಿ ಮೇಲುಗೈ ಸಾಧಿಸಿದ್ದು, ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನರಾದ ಐದೂವರೆ ವರ್ಷದ ಬಳಿಕ ಪಳನಿ ಸ್ವಾಮಿ ಅವರು ಅಣ್ಣಾ ಡಿಎಂಕೆ ಪಕ್ಷವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅಣ್ಣಾ ಡಿಎಂಕೆ ಸಾಮಾನ್ಯ ಮಂಡಳಿ ಸಭೆಗೆ ತಡೆ ನೀಡುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಪನ್ನಿರ್ ಸೆಲ್ವಂ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದ್ದ ಬೆನ್ನಲ್ಲೇ ಪಳನಿ ಸ್ವಾಮಿ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಇದರಿಂದಾಗಿ ಸಾಮಾನ್ಯ ಮಂಡಳಿ ಸಭೆಯಲ್ಲಿ ಪ್ರತಿಸ್ಪರ್ಧಿ ಮುಖಂಡ ಎಡಪ್ಪಾಡಿ ಅವರನ್ನು ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲು ನ್ಯಾಯಾಲಯ ಅನುವು ಮಾಡಿಕೊಟ್ಟಿತ್ತು.ನ್ಯಾಯಮೂರ್ತಿ ಕೃಷ್ಣನ್ ಅವರು ಇಂದು ಬೆಳಿಗ್ಗೆ ತೀರ್ಪು ನೀಡಿದ್ದರಿಂದ ಪಕ್ಷದ ಸಾಮಾನ್ಯ ಮಂಡಳಿ ಸಭೆ ನಡೆಸಲು ಪಳನಿಸ್ವಾಮಿ ಬಣಕ್ಕೆ ಅನುಮತಿ ನೀಡಿದ್ದರು.
ಈ ತಿಂಗಳ ೮ ರಂದು ಪಳನಿಸ್ವಾಮಿ ಹಾಗೂ ಎಡಪ್ಪಾಡಿ ಬಣದ ವಕೀಲರ ವಾದ ಪ್ರತಿವಾದ ಅಲಿಸಿದ ನಂತರ ನ್ಯಾಯಮೂರ್ತಿಗಳು ಇಂದಿಗೆ ತೀರ್ಪು ಕಾಯ್ದಿರಿಸಿದ್ದರು.
ಈ ಮೊದಲು ೪ ತಿಂಗಳ ಅವಧಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಆಯ್ಕೆಗಾಗಿ ಚುನಾವಣೆ ನಡೆಸಲು ಸಾಮಾನ್ಯ ಮಂಡಳಿ ಸಭೆ ಮುಂದಾಗಿದ್ದ ಸಂದರ್ಭದಲ್ಲಿ ಪನ್ನಿರ್ ಸೆಲ್ವಂ ಈ ಸಭೆಯನ್ನು ಬಹಿಷ್ಕರಿಸಿದ್ದರು.ಭ್ರಷ್ಟಚಾರದ ಪ್ರಕರಣದಲ್ಲಿ ಜಯಲಲಿತ ಮುಖ್ಯಮಂತ್ರಿಯಾಗಿದ್ದ ವೇಳೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಪನ್ನಿರ್ ಸೆಲ್ವಂ ಅವರು ಎರಡು ಬಾರಿ ಮುಖ್ಯ ಹುದ್ದೆಯನ್ನು ಅಲಂಕರಿಸಿದ್ದರು. ಆದರೆ ಈಗ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುವಲ್ಲಿ ವಿಫಲರಾಗಿದ್ದಾರೆ.
ಬೆಂಬಲಿಗರ ನಡುವೆ ಮಾರಾಮಾರಿ
ಪಳನಿ ಸ್ವಾಮಿ ಹಾಗೂ ಪನ್ನಿರು ಸೆಲ್ವಂ ಬಣಗಳ ನಡುವೆ ಮಾರಾಮಾರಿ ನಡೆದಿದ್ದು, ಚೆನ್ನೈನ ಪಕ್ಷದ ಕಚೇರಿಯ ಮುಂಭಾಗ ಹೈಡ್ರಾಮಾಕ್ಕೆ ಸಾಕ್ಷಿಯಾಗಿತ್ತು. ಎರಡು ಗುಂಪಿನ ಕಾರ್ಯಕರ್ತರು ರಸ್ತೆಯಲ್ಲೇ ಬಡಿದಾಡಿಗೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಾಯಕತ್ವ ವಿಚಾರವಾಗಿ ಕಲ್ಲು, ದೊಣ್ಣೆಗಳಿಂದ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಉದ್ರಿಕ್ತ ಕಾರ್ಯಕರ್ತರು ಕಚೇರಿ ಬಾಗಿಲನ್ನು ಧ್ವಂಸಗೊಳಿಸಿದ್ದಾರೆ.
ತಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿರುವ ಕ್ರಮಕ್ಕೆ ಪನ್ನಿರ್ ಸೆಲ್ವಂ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ನಿರ್ಧಾರ ಏಕಪಕ್ಷೀಯವಾಗಿದೆ. ಈ ಕ್ರಮ ಪಕ್ಷದ ಕ್ರಮ ವಿರುದ್ಧವಾಗಿದೆ ಎಂದು ಗುಡುಗಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy