ಬೀದರ್: “ಅನ್ನ ಭಾಗ್ಯ” ಯೋಜನೆಯಡಿ ಸರ್ಕಾರದಿಂದ ವಿತರಿಸಲಾದ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಸಂಗ್ರಹಿಸಿಟ್ಟ ಅಕ್ಕಿಯನ್ನು ಬೀದರ್ ಜಿಲ್ಲೆಯ“ ಧನ್ನೂರ ಪೊಲೀಸರು ಜಪ್ತಿ” ಮಾಡಿದ್ದಾರೆ.
ಹಿರಿಯ ಅಧಿಕಾರಿಯವರ ಮಾರ್ಗದರ್ಶನದಂತೆ, ಹುಣಜಿ–ಕೆ ಗ್ರಾಮದಲ್ಲಿ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಉಚಿತವಾಗಿ ನೀಡುವ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಖಚಿತ ಮಾಹಿತಿಯ ಮೇರೆಗೆ ನಡೆಸಿದ ಧನ್ನೂರ ಪೊಲೀಸ್ ಠಾಣೆಯ ಪಿ.ಎಸ್.ಐ, ವಿಶ್ವರಾದ್ಯ, ಠಾಣೆಯ ಸಿಬ್ಬಂದಿ ಸಂಜೀವ, ಬಕ್ಕಯ್ಯಾ ಸ್ವಾಮಿ, ಪ್ರಶಾಂತರೆಡ್ಡಿ, ವೆಂಕಟರಾವ್ ತಂದೆ ಗಣಪತರಾವ ಬಿರಾದಾರ, ಆಹಾರ ಸಿರಸ್ತೆದಾರ ಭಾಲ್ಕಿ ಅಧಿಕಾರಿಗಳ ತಂಡ ದಾಳಿ ನಡೆಸಿತು.
ದಾಳಿಯ ವೇಳೆ 1,0,8000 ರೂಪಾಯಿ ಮೌಲ್ಯದ 36 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಲಾಯಿತು. ಸಂಬಂಧಪಟ್ಟ ಆರೋಪಿಗಳ ವಿರುದ್ಧ ಪ್ರಕರಣ ಕೂಡ ದಾಖಲಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯ ವನ್ನು ಸಾರ್ವಜನಿಕರು ಶ್ಲಾಘಿಸಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ ಬೀದರ್


