ಬೀದರ್: ಜಿಲ್ಲೆಯ ಕಮಲನಗರ ತಾಲೂಕಿನ ಹೊರಂಡಿ ಗ್ರಾಮದಲ್ಲಿ ಸಾಹಿತ್ಯ ರತ್ನ ಲೋಕಶಾಹಿರ ಅಣ್ಣಾಭಾವು ಸಾಠೆ ಅವರ 105ನೇ ಜಯಂತ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಮಾದಿಗ ಸಮುದಾಯದ ಯುವ ಮುಖಂಡ ಸುಧಾಕರ್ ಕೊಳ್ಳುರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಣ್ಣಾಭಾವು ಸಾಠೆ ಅವರ ಸಾಹಿತ್ಯ ಕಥೆ ಕಾದಂಬರಿಗಳು ಇಡೀ ವಿಶ್ವ ವಿಖ್ಯಾತವಾಗಿದೆ. ಅವರ ಕಾದಂಬರಿಗಳ ಮೇಲೆ ಅನೇಕ ರಾಷ್ಟ್ರಗಳಲ್ಲಿ ಅಧ್ಯಯನಗಳ ನಡೆಸಿ ಡಾಕ್ಟರೇಟ್ ಪದವಿ ಪಡೆಯುತ್ತಿದ್ದಾರೆ. ಮಾದಿಗ ಸಮುದಾಯದ ಯುವಕರು ಶಿಕ್ಷಕರಾಗಬೇಕು. ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಮತ್ತು ಎಲ್ಲರೊಂದಿಗೆ ಪರಸ್ಪರ ಪ್ರೀತಿ ವಿಶ್ವಾಸ ಸೌಹಾರ್ದತೆಯಿಂದ ಬದುಕಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಬಾಬುರವ ಪಾಟೀಲ ವಹಿಸಿಕೊಂಡು ಮಾತನಾಡಿದರು, ಪಾಂಡುರಂಗ ಸೂರ್ಯವಂಶಿ ಉಪನ್ಯಾಸ ಮಂಡಿಸಿದರು, ದಿಲೀಪ್ ಬಿರಾದಾರ, ರಾಜಕುಮಾರ್ ಕೊಂಡೆ, ಶಾಂಗಶೆಟ್ಟಿ, ದಿಲೀಪ ಡೊಂಗಳೆ, ಶರತ, ಶಾಲಿವನ್ ಬಿರಾದರ್, ತುಳಸಿರಾಮ್ ಜಕ್ಕತೆ, ಗೋಪಾಲ್ ಗಾಯಕ್ವಾಡ್, ಚಂದ್ರಕಾಂತ್ ಸೂರ್ಯವಂಶಿ, ಶಿಕಂದರ, ದೇವೇಂದ್ರ, ಅನಿಲ, ನಾಗನಾಥ್ ಗಾಯಕೋಡ್, ಸುದರ್ಶನ್, ಅಂಬಾದಾಸ, ಮುಂತಾದರೂ ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


