ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ನೀಡುವ ‘ಜೀವಮಾನ ಸಾಧನೆ’ ಪುರಸ್ಕಾರಕ್ಕೆ ಆಂಕ್ ಲಂಗ್ ವಾದಕಿ ಎಚ್.ಎಸ್. ಅನಸೂಯ ಕುಲಕರ್ಣಿ, ‘ಕಲಾಜ್ಯೋತಿ ಪ್ರಶಸ್ತಿ’ ಗೆ ಮೈಸೂರಿನ ಖ್ಯಾತ ಪಿಟೀಲು ವಾದಕ ಕೆ. ನರಸಿಂಹಮೂರ್ತಿ ಮತ್ತು ‘ನಾದಜ್ಯೋತಿ ಪುರಸ್ಕಾರ’ಕ್ಕೆ ಗಾಯಕಿ ರಂಜನಿ ವಾಸುಕಿ ಆಯ್ಕೆಯಾಗಿದ್ದಾರೆ.
‘ಜೀವಮಾನ ಸಾಧನೆ’, ‘ಕಲಾಜ್ಯೋತಿ ಪ್ರಶಸ್ತಿ’ಯು ತಲಾ ₹ 20 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ‘ನಾದಜ್ಯೋತಿ ಪುರಸ್ಕಾರ’ವು ₹ 15 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.


