ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತಂದ ಚಿರತೆಗಳ ಪೈಕಿ ಒಂದು ಚಿರತೆ ಸಾವನ್ನಪ್ಪಿದೆ. ಇದರೊಂದಿಗೆ ಸತ್ತ ಚಿರತೆಗಳ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ. 2022 ರಲ್ಲಿ, ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ 20 ಚಿರತೆಗಳನ್ನು ತರಲಾಯಿತು. ನಮೀಬಿಯಾದಿಂದ ತರಲಾದ ಶೌರ್ಯ ಎಂಬ ಚಿರತೆ ಇಂದು ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿಗೆ ಕಾರಣ ತಿಳಿಯಬಹುದು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಮಧ್ಯಾಹ್ನ 3.17ರ ಸುಮಾರಿಗೆ ಚಿರತೆ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ. ಬೆಳಗ್ಗೆ ಚಿರತೆ ಶವವಾಗಿ ಪತ್ತೆಯಾಗಿದೆ. ಸಿಪಿಆರ್ ಗೆ ಪ್ರತಿಕ್ರಿಯಿಸಿಲ್ಲ ಎಂದು ಅವರು ಹೇಳಿದರು.


