ಬೀಜಿಂಗ್ : 5 ವರ್ಷಗಳ ಹಿಂದೆ ಇಡೀ ವಿಶ್ವವನ್ನೇ ಸಂಕಷ್ಟಕ್ಕೆ ದೂಡಿದ್ದ ಪ್ರಳಯಾಂತಕ ಕೊವಿಡ್ 19 ಚೀನಾದಲ್ಲಿ ಹುಟ್ಟಿಕೊಂಡಿತ್ತು. ಇದೀಗ ಮತ್ತೊಂದು ವೈರಸ್ ಎಚ್ಎಂಪಿವಿ ಅಂದರೆ ಹ್ಯೂಮನ್ ಮೆಟಾನ್ಯುಮೊವೈರಸ್ ಚೈನಾದಲ್ಲಿ ತಾಂಡವವಾಡುತ್ತಿದ್ದು, ವಿಶ್ವಾದ್ಯಂತ ಹರಡುವ ಭೀತಿ ಸೃಷ್ಟಿಯಾಗಿದೆ.
ಕೊರೊನಾ ಮಾದರಿಯ ಲಕ್ಷಣಗಳನ್ನೇ ಈ ವೈರಸ್ ಕೂಡಾ ಹೊಂದಿದ್ದು, ಪ್ರಮುಖವಾಗಿ ಮಕ್ಕಳಿಗೆ ಮತ್ತು ರೋಗ ನಿರೋಧಕ ಶಕ್ತಿ ಕಮ್ಮಿ ಇರುವವರಿಗೆ ವೇಗವಾಗಿ ಹರಡುತ್ತದೆ. ಈ ಹೊಸ ವೈರಸ್ ಅನ್ನು ಎದುರಿಸಲು ತೆಗೆದುಕೊಳ್ಳಬೇಕಾದ ವೈದ್ಯಕೀಯ ಕ್ರಮಗಳ ಬಗ್ಗೆ ಚೀನಾ ಸರ್ಕಾರ, ತನ್ನ ಆರೋಗ್ಯ ಇಲಾಖೆಗೆ ಸೂಚಿಸಿದೆ ಎಂದು ವರದಿಯಾಗಿದೆ.
ಚೀನಾದಲ್ಲಿ ಈ ಹೊಸ ವೈರಸ್ ಹರಡಲು ಆರಂಭಿಸುತ್ತಿದ್ದಂತೆಯೇ, ಅಕ್ಕಪಕ್ಕದ ಕೆಲವು ರಾಷ್ಟ್ರಗಳು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮತ್ತು ಪ್ರತ್ಯೇಕ ಪ್ರೊಟೋಕಾಲ್ ಘೋಷಿಸಲು ಮುಂದಾಗಿದೆ. ಚೀನಾದ ಉತ್ತರ ಭಾಗದಲ್ಲಿ 15ವರ್ಷಕ್ಕಿಂತ ಕಮ್ಮಿ ವಯಸ್ಸಿನ ಮಕ್ಕಳ ಮೇಲೆ ಈ ವೈರಸಿನ ಅಟ್ಯಾಕ್ ಹೆಚ್ಚಾಗುತ್ತಿದೆ.
ಇನ್ನೂ, ವೈರಸ್ ಹಾವಳಿ ಹೆಚ್ಚಾಗುತ್ತಿರುವುದು, ಆಸ್ಪತ್ರೆ ತುಂಬಿ ತುಳುಕುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ, ಚೀನಾ ಅಧಿಕಾರಿಗಳಾಗಲಿ ಅಥವಾ ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಮೆಡಿಕಲ್ ಎಮರ್ಜೆನ್ಸಿಯನ್ನು ಘೋಷಿಸಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx