nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: 20 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್‌

    April 6, 2026

    ಒಳ ಮೀಸಲಾತಿ ಜಾರಿ ಮಾಡದ ಸರ್ಕಾರಕ್ಕೆ ಅಂಬೇಡ್ಕರ್, ಜಗಜೀವನ್ ರಾಂ ಜಯಂತಿ ಆಚರಿಸುವ ಅರ್ಹತೆ ಇಲ್ಲ: ದಲಿತ ಸಂಘರ್ಷ ಸಮಿತಿ ಆಕ್ರೋಶ

    April 6, 2026

    ತಿಪಟೂರು: ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಜಯಂತಿ ಆಚರಣೆ; ಜಾತಿ ತಾರತಮ್ಯದ ವಿರುದ್ಧ ಹೋರಾಟಕ್ಕೆ ಕರೆ

    April 6, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: 20 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್‌
    • ಒಳ ಮೀಸಲಾತಿ ಜಾರಿ ಮಾಡದ ಸರ್ಕಾರಕ್ಕೆ ಅಂಬೇಡ್ಕರ್, ಜಗಜೀವನ್ ರಾಂ ಜಯಂತಿ ಆಚರಿಸುವ ಅರ್ಹತೆ ಇಲ್ಲ: ದಲಿತ ಸಂಘರ್ಷ ಸಮಿತಿ ಆಕ್ರೋಶ
    • ತಿಪಟೂರು: ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಜಯಂತಿ ಆಚರಣೆ; ಜಾತಿ ತಾರತಮ್ಯದ ವಿರುದ್ಧ ಹೋರಾಟಕ್ಕೆ ಕರೆ
    • ಕೊರಟಗೆರೆ: ಜನವಸತಿ ಪ್ರದೇಶದಲ್ಲಿ ಕರಡಿ ಪ್ರತ್ಯಕ್ಷ: ಪಟ್ಟಣದ ಜನತೆಯಲ್ಲಿ ಹೆಚ್ಚಿದ ಆತಂಕ
    • ಸಿದ್ದಗಂಗಾ ಮಠದಲ್ಲಿ ಸಂಭ್ರಮದ ನಾಮಕರಣ ಮಹೋತ್ಸವ: 119 ಮಕ್ಕಳಿಗೆ ‘ಶಿವಕುಮಾರ’ ನಾಮಕರಣ
    • ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ
    • ಡಾ.ಬಾಬು ಜಗಜೀವನರಾಮ್’ರವರ119ನೇ ಜಯಂತಿ ಆಚರಣೆ
    • ತಿಪಟೂರು: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ನಗರಸಭೆ ಮುಂದೆ ಪ್ರತಿಭಟನೆ: ಕೆ.ಟಿ.ಶಾಂತಕುಮಾರ್ ಎಚ್ಚರಿಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
    ರಾಜ್ಯ ಸುದ್ದಿ February 17, 2022

    13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

    By adminFebruary 17, 2022No Comments3 Mins Read
    bangalore

    ಬೆಂಗಳೂರು: ಕರ್ನಾಟಕ ಸರ್ಕಾರವು ಪ್ರತಿ ವರ್ಷ ನಡೆಸುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಯೋಗದೊಂದಿಗೆ ನಡೆಸಿಕೊಡುತ್ತಿದೆ. 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ  ಮಾರ್ಚ್ 3ರಿಂದ 10ರವರೆಗೆ  ಬೆಂಗಳೂರಿನಲ್ಲಿ ನಡೆಯಲಿದೆ.

    ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮಾ ಸಂಸ್ಕೃತಿಯನ್ನು ಪಸರಿಸುವ ಪ್ರಮುಖ ಕೇಂದ್ರವಾಗಿದೆ. ಕರ್ನಾಟಕ ಸಾಹಿತ್ಯ, ಕಲೆ, ಶಿಲ್ಪಕಲೆ ಹಾಗೂ ಸಿನಿಮಾಗೆ ಸಂಬಂಧಪಟ್ಟಂತೆ  ಶ್ರೀಮಂತ ಪರಂಪರೆಯನ್ನು ಹೊಂದಿರುವ ಹೆಮ್ಮೆಯ ರಾಜ್ಯ. 87 ವರ್ಷ ಇತಿಹಾಸವಿರುವ ಕನ್ನಡ ಚಲನಚಿತ್ರರಂಗ ಗುಣಮಟ್ಟದ ದೃಷ್ಟಿಯಿಂದ ಜಗತ್ತಿನ ಗಮನ ಸೆಳೆದಿದೆ. ಈ ದಿನಗಳಲ್ಲಿ ವರ್ಷಕ್ಕೆ ಇನ್ನೂರಕ್ಕೂ ಹೆಚ್ಚು ಚಿತ್ರಗಳನ್ನು ತಯಾರಿಸಿ ತನ್ನ ಮಾರುಕಟ್ಟೆ ವಿಸ್ತರಿಸಿಕೊಂಡಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳು ನಿರಂತರವಾಗಿ ಭಾಗವಹಿಸುತ್ತಿವೆ. ಜೊತೆಗೆ ಅಂತಾರಾಷ್ಟ್ರೀಯ ಪುರಸ್ಕಾರಗಳನ್ನ, ಮಾನ್ಯತೆ ಮತ್ತು ಜನಮನ್ನಣೆಯನ್ನ ಪಡೆಯುತ್ತಿವೆ.


    Provided by
    Provided by

    13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಈ ಬಾರಿ ಚಲನಚಿತ್ರ ನಿರ್ಮಾಪಕರ ಸಂಘಗಳ ಅಂತರರಾಷ್ಟ್ರೀಯ ಒಕ್ಕೂಟ (FIAPF) ಮಾನ್ಯತೆ ದೊರಕಿರುವುದು ಸಂತೋಷದ ವಿಚಾರ. 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಕೆಳಕಂಡ ವಿಭಾಗಗಳಿರುತ್ತವೆ.

    ಸಮಕಾಲೀನ ವಿಶ್ವ ಸಿನಿಮಾಗಳು

    ಏಷಿಯನ್ ಸಿನಿಮಾಗಳ ಸ್ಪರ್ಧಾ ವಿಭಾಗ

    ಚಿತ್ರ ಭಾರತಿ (ಭಾರತೀಯ ಸಿನಿಮಾ) ಸ್ಪರ್ಧಾ ವಿಭಾಗ

    ಕನ್ನಡ ಸಿನಿಮಾಗಳ ಸ್ಪರ್ಧಾ ವಿಭಾಗ

    ಜನಪ್ರಿಯ ಕನ್ನಡ ಸಿನಿಮಾಗಳ ಸ್ಪರ್ಧಾ ವಿಭಾಗ

    ಅಂತಾರಾಷ್ಟ್ರೀಯಸಿನಿಮಾ ವಿಮರ್ಶಕರ ಆಯ್ಕೆಯ ಸಿನಿಮಾಗಳು

    ಚಿತ್ರರಂಗದ ಗಣ್ಯರ ಸ್ಮರಣೆ

    ವಿಶೇಷ ವಿಭಾಗ – ಸ್ವಾತಂತ್ರ್ಯ ಹೋರಾಟದ ಅಮೃತಮಹೋತ್ಸವ

    ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಚಲನಚಿತ್ರಗಳನ್ನು ಸಿನಿಮಾ ತಜ್ಞರ ಸಮಿತಿ ಆಯ್ಕೆ ಮಾಡುತ್ತದೆ. ಸ್ಪರ್ಧಾತ್ಮಕ ಚಲನಚಿತ್ರಗಳನ್ನು ಹೊರತುಪಡಿಸಿ ವಿಶ್ವ ಸಿನಿಮಾಗಳನ್ನು ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡುತ್ತದೆ. ವಿಶ್ವದ ಇತರೆಡೆ ನಡೆಯುವ ಚಲನಚಿತ್ರೋತ್ಸವದ ಸಮಿತಿಯ ಸದಸ್ಯರು, ಚಿತ್ರರಂಗದ ಗಣ್ಯರು, ಸಲಹಾ ಸದಸ್ಯರು, ಪತ್ರಕರ್ತರು ಹಾಗೂ ಸಿನಿಮಾ ತಜ್ಞರು, ವಿಮರ್ಶಕರ ನೆರವಿನಿಂದ ಈ ಆಯ್ಕೆ ನಡೆಯುತ್ತದೆ. ಹೆಸರಾಂತ ಚಲನಚಿತ್ರ ನಿರ್ದೇಶಕರ ಸಿನಿಮಾಗಳು, ವಿವಿಧ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದ ಚಿತ್ರಗಳನ್ನು ಪರಿಗಣಿಸಲಾಗುತ್ತದೆ.

    ಈಗಿನ 2021ನೇ ಸಾಲಿನ ಏಷಿಯನ್, ಭಾರತೀಯ ಮತ್ತು ಕನ್ನಡ ಸಿನಿಮಾ ಸ್ಪರ್ಧಾತ್ಮಕ ವಿಭಾಗಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆವ ಚಲನಚಿತ್ರಗಳು ಆಕರ್ಷಕ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ಪಡೆಯಲಿವೆ. ಹಾಗೆಯೇ, 2020ರ ಸಾಲಿನ ಏಶಿಯನ್, ಭಾರತೀಯ ಮತ್ತು ಕನ್ನಡ ಸಿನಿಮಾಗಳ ಪ್ರಶಸ್ತಿ ವಿಭಾಗಗಳಿಗೆ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಆಯ್ಕೆಯಾದ ಚಲನಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದ್ದು ಪ್ರಶಸ್ತಿಗೆ ಭಾಜನವಾಗುವ ಚಲನಚಿತ್ರಗಳಿಗೆ, ಇದೇ ಆವೃತ್ತಿಯಲ್ಲಿ ಪ್ರತ್ಯೇಕವಾಗಿ ಪ್ರಶಸ್ತಿಗಳನ್ನ ನೀಡಲಾಗುವುದು.

    ಚಿತ್ರೋತ್ಸವದಲ್ಲಿ ಹಲವಾರು ಶೈಕ್ಷಣಿಕ ಚಟುವಟಿಕೆಗಳೂ ನಡೆಯುತ್ತವೆ. ಚಲನಚಿತ್ರ ನಿರ್ಮಾಣ, ನಿರ್ದೇಶನ ಹಾಗೂ ಸಿನಿಮಾ ಕಲೆ ಸಂಬಂಧಿತ ಚಲನಚಿತ್ರ ರಸಗ್ರಹಣ ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳು, ಉಪನ್ಯಾಸಗಳು ನಡೆಯುತ್ತವೆ. ಚಲನಚಿತ್ರ ನಿರ್ದೇಶಕರು, ನಿರ್ಮಾಪಕರು, ಚಲನಚಿತ್ರ ವಿದ್ಯಾರ್ಥಿಗಳು ಹಾಗೂ ಸಿನಿಮಾಸಕ್ತರಿಗೆ ಇದು ನೆರವಾಗಲಿದೆ. ಚಲನಚಿತ್ರ ಲೋಕದಲ್ಲಿ ಇಂದು ಸಮಕಾಲೀನವಾಗಿ ನಡೆಯುತ್ತಿರುವ ಬೆಳವಣಿಗೆ, ಬದಲಾಗುತ್ತಿರುವ ತಂತ್ರಜ್ಞಾನ, ಧ್ವನಿ ವಿನ್ಯಾಸ ಮೊದಲಾದ ಆಧುನಿಕ ಸಿನಿಮಾ ನಿರ್ಮಾಣ ಸಂಬಂಧಿತ ಸಂಗತಿಗಳೆಲ್ಲಾ ಇಲ್ಲಿ ಚರ್ಚಿತವಾಗಲಿವೆ. ಸಿನಿಮಾ ಉದ್ಯಮ ಮತ್ತು ಮಾಧ್ಯಮದಲ್ಲಿ ತೊಡಗಿಸಿಕೊಂಡವರಿಗೆ ಇದು ಉಪಯುಕ್ತ ಮಾರ್ಗದರ್ಶಿಯಾಗಲಿದೆ. ಚಲನಚಿತ್ರೋತ್ಸವದಲ್ಲಿ ಭಾಗವಹಿಸುವ ಆಸಕ್ತರಿಗೆ ನೋಂದಣಿ ಮೂಲಕ ಪ್ರತಿನಿಧಿ ಕಾರ್ಡ್ ನೀಡಲಾಗುವುದು. ನೋಂದಣಿ ಶುಲ್ಕವನ್ನು ಚಲನಚಿತ್ರೋತ್ಸವದ ಸಂಘಟನಾ ಸಮಿತಿ ನಿರ್ಧರಿಸುತ್ತದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ನಮ್ಮ ವೆಬ್ ಸೈಟ್ www.biffes.org ಮತ್ತು ಚಲನಚಿತ್ರೋತ್ಸವದ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗುವುದು.

    ಜೊತೆಗೆ, ಸಿನಿಮಾಸಕ್ತರು ತಮ್ಮ ಸಲಹೆ ಸೂಚನೆಗಳನ್ನು contact@biffes.in ಗೆ ಕಳುಹಿಸಬಹುದು. ಸರ್ಕಾರದ ಕೋವಿಡ್-19 ನಿಯಮಾವಳಿಗಳು ಮತ್ತು ಮಾರ್ಗಸೂಚಿಗಳಿಗನುಗುಣವಾಗಿ ನಡೆಯುವ ಈ ಬಾರಿಯ ಚಿತ್ರೋತ್ಸವದ ವಿಶೇಷತೆ, ಇದು ಆನ್ಲೈನ್ ಮತ್ತು ಚಿತ್ರಮಂದಿರಗಳಲ್ಲಿ ಪ್ರದರ್ಶನ ಎರಡನ್ನೂ ಒಳಗೊಂಡಿರುತ್ತದೆ ಚಿತ್ರರಂಗದವರು, ಸಿನಿಮಾ ತಯಾರಕರು, ಸಿನಿಮಾ ವಿಮರ್ಶಕರು, ಸಿನಿ ಪ್ರಿಯರು, ವಿದ್ಯಾರ್ಥಿಗಳು ಮತ್ತು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಿನಿಮಾ ವಿತರಕರು, ಸಂಸ್ಥೆಗಳು ಭಾಗವಹಿಸಿ ಕನ್ನಡದ, ಭಾರತದ ಮತ್ತು ವಿಶ್ವದ ಅತ್ಯುತ್ತಮ ಸಿನಿಮಾಗಳನ್ನು ನೋಡುತ್ತಾ, ಆಸ್ವಾದಿಸುತ್ತಾ ಸಂಭ್ರಮಿಸುತ್ತಾರೆಂಬ ವಿಶ್ವಾಸದೊಂದಿಗೆ ಈ ಬಾರಿಯ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಸಂಬಂಧಿಸಿದ ಮೇಲ್ಕಂಡ ಮಾಹಿತಿಗಳನ್ನು ತಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    “ತಿಂದ ಮನೆಗೆ ಕನ್ನ ಹಾಕಬೇಡಿ, ಗಂಟುಮೂಟೆ ಕಟ್ಟಿ ಹೊರಡಿ”: ರಾಜ್ಯಪಾಲರ ವಿರುದ್ಧ ಕರವೇ ನಾರಾಯಣಗೌಡ ಆಕ್ರೋಶ

    April 4, 2026

    ಐಪಿಎಲ್ ಪಂದ್ಯದ ವೇಳೆ ಮೊಬೈಲ್ ಕಳ್ಳತನ: 9 ಅಪ್ರಾಪ್ತರು ಸೇರಿ 13 ಮಂದಿ ಜಾರ್ಖಂಡ್ ಖದೀಮರ ಬಂಧನ

    April 4, 2026

    ಗ್ಯಾಸ್ ಸಮಸ್ಯೆ ಬಗೆಹರಿಸದ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ತಮಟೆ ಚಳುವಳಿ

    April 4, 2026

    Leave A Reply Cancel Reply

    Our Picks

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು: 20 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್‌

    April 6, 2026

    ತುಮಕೂರು: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಹಟ್ಟಿ ಮತ್ತು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಸುಮಾರು 20…

    ಒಳ ಮೀಸಲಾತಿ ಜಾರಿ ಮಾಡದ ಸರ್ಕಾರಕ್ಕೆ ಅಂಬೇಡ್ಕರ್, ಜಗಜೀವನ್ ರಾಂ ಜಯಂತಿ ಆಚರಿಸುವ ಅರ್ಹತೆ ಇಲ್ಲ: ದಲಿತ ಸಂಘರ್ಷ ಸಮಿತಿ ಆಕ್ರೋಶ

    April 6, 2026

    ತಿಪಟೂರು: ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಜಯಂತಿ ಆಚರಣೆ; ಜಾತಿ ತಾರತಮ್ಯದ ವಿರುದ್ಧ ಹೋರಾಟಕ್ಕೆ ಕರೆ

    April 6, 2026

    ಕೊರಟಗೆರೆ: ಜನವಸತಿ ಪ್ರದೇಶದಲ್ಲಿ ಕರಡಿ ಪ್ರತ್ಯಕ್ಷ: ಪಟ್ಟಣದ ಜನತೆಯಲ್ಲಿ ಹೆಚ್ಚಿದ ಆತಂಕ

    April 6, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.