ತುಮಕೂರು: ಮಾತೃಭೂಮಿ ಸೇವಾ ಟ್ರಸ್ಟ್ ವತಿಯಿಂದ ನಡೆದ ‘ಕನ್ನಡ ಸಂಭ್ರಮ ಹಬ್ಬ‘ ಕಾರ್ಯಕ್ರಮದಲ್ಲಿ ನಮ್ಮ ತುಮಕೂರು ಮಾಧ್ಯಮದ ಬೆಂಗಳೂರು ವರದಿಗಾರರಾದ ಆಂಟೋನಿ ರಾಜು ಎ. ಅವರಿಗೆ ಮಾತೃ ಭೂಮಿ ಸೇವಾ ರತ್ನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸತತ ನಾಲ್ಕು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಕೆಲಸ ಮಾಡುತ್ತಿರುವ ಆಂಟೋನಿ ರಾಜು ಎ. ಅವರು ನಮ್ಮತುಮಕೂರು ಮಾಧ್ಯಮದಿಂದ ರಾಜ್ಯಾದ್ಯಂತ ಪರಿಚಯಿಸಲ್ಪಟ್ಟರು. ತಮ್ಮ ವೃತ್ತಿಯ ಜೊತೆಗೆ ಸಾಮಾಜಿಕ ಬದ್ಧತೆಗೆ ಇಂದು ಪ್ರಶಸ್ತಿ ಸಂದಿದೆ.

ನಮ್ಮತುಮಕೂರು ಮಾಧ್ಯಮದ ಪ್ರಧಾನ ಸಂಪಾದಕರಾದ ನಟರಾಜ್ ಜಿ.ಎಲ್. ಅವರ ವಿಶೇಷ ಮಾರ್ಗದರ್ಶನದಲ್ಲಿ ಜನಸ್ನೇಹಿ, ವಿಭಿನ್ನ ಸುದ್ದಿಗಳನ್ನು ನೀಡುವ ಮೂಲಕ ಮಾಧ್ಯಮರಂಗದಲ್ಲಿ ವಿಶಿಷ್ಠ ಸಾಧನೆ ಮಾಡಿದ ಆಂಟೋನಿ ರಾಜು ಎ. ಅವರ ಪ್ರತಿಭೆಯನ್ನು ಡಾ.ಜ್ಯೋತಿ ಶ್ರೀನಿವಾಸ್ ಗುರುತಿಸಿ, ಮಾತೃಭೂಮಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿರುವ ಆಂಟೋನಿ ರಾಜು ಎ. ಅವರು, ಉತ್ತಮ ಅವಕಾಶ ನೀಡಿದ ನಮ್ಮತುಮಕೂರು ಮಾಧ್ಯಮ ಹಾಗೂ ತಮ್ಮನ್ನು ಗುರುತಿಸಿದ ಮಾತೃಭೂಮಿ ಸೇವಾ ಟ್ರಸ್ಟ್ ಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


