ಸರಗೂರು: ಬಿಜೆಪಿ ಸರ್ಕಾರ ಅನುದಾನ ನೀಡುವ ವಿಚಾರದಲ್ಲಿ ಸಾಕಷ್ಟು ತಾರತಮ್ಯ ಮಾಡಿದ್ದು, ನಮ್ಮ ಹಿಂದುಳಿದ ತಾಲ್ಲೂಕಿಗೆ ಅನುದಾನವನ್ನು ನೀಡದೆ, ನಂಜುಂಡಪ್ಪರವರ ವರದಿಯನ್ನು ಗಾಳಿಗೆ ತೂರಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಬೇಸರ ವ್ಯಕ್ತಪಡಿಸಿದರು.
ಸರಗೂರು ತಾಲ್ಲೂಕಿನ ವ್ಯಾಪ್ತಿಯ ಪಟ್ಟಣದ 11ನೇ ಮತ್ತು 5ನೇ ವಾರ್ಡಿನ ಶಾಲಾ ಕಟ್ಟಡ ನಿರ್ಮಾಣ, ಹಳಿಯೂರು, ಲಿಂಗೇನಹಳ್ಳಿ, ವಲ್ಲಹಳ್ಳಿ ರಸ್ತೆ, ಕಾಡಬೇಗೂರು ಲಂಬಾಣಿ ತಾಂಡ ಸಂಪರ್ಕ ರಸ್ತೆ, ಕೆಂಚನಹಳ್ಳಿ ರಸ್ತೆ ಅಭಿವೃದ್ಧಿ, ಕೆಂಪನಹಾಡಿ ಮತ್ತು ಗಂಡತ್ತೂರು ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆ ಸುಮಾರು 5ಕೋಟಿ 87ಲಕ್ಷದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮತ್ತು ಪಂಚಾಯಿತ್ ರಾಜ್ಯ ಇಲಾಖೆಯ ಅನುಧಾನದ ಸುಮಾರು 40 ಲಕ್ಷದ ಅಭಿವೃದ್ಧಿ ಕಾಮಗಾರಿಗಳು ಮತ್ತು ಶಾಸಕರ ಅನುದಾನದ 5 ಲಕ್ಷ ವೆಚ್ಚದ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಿಂದುಳಿದ ತಾಲ್ಲೂಕಾದ ನಮ್ಮ ಕ್ಷೇತ್ರಕ್ಕೆ ಅನುದಾನದ ಹಂಚಿಕೆಯ ವಿಚಾರವಾಗಿ ಸಾಕಷ್ಟು ತಾರತಮ್ಯ ಮಾಡುತ್ತಿದೆ. ನಮ್ಮ ಕ್ಷೇತ್ರದಲ್ಲಿ ಸುಮಾರು 300-350 ಹಳ್ಳಿಗಳಿವೆ. ಅದರಲ್ಲಿ ಸಾಕಷ್ಟು ಹಳ್ಳಿಗಳು ದೊಡ್ಡ ದೊಡ್ಡ ಗ್ರಾಮಗಳಾದರೆ ಬಹುತೇಕ ಗ್ರಾಮಗಳು ಕಾಡಂಚಿನಲ್ಲಿವೆ. ಒಂದು ಗ್ರಾಮದ ಸಮಗ್ರ ಅಭಿವೃದ್ಧಿಗೆ 10 ರಿಂದ 15 ಕೋಟಿ ಅನುದಾನದ ಅಗತ್ಯವಿದೆ. ಆದರೆ ಸರ್ಕಾರ ಸರಿಯಾದ ರೀತಿಯಲ್ಲಿ ಅನುದಾನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದಿಂದ ನಮ್ಮಲ್ಲಿರುವ ಯಾವುದೇ ಇಲಾಖೆಗೂ ಸಹ ಸರಿಯಾದ ಅನುದಾನಗಳು ಸಿಗುತ್ತಿಲ್ಲ ಸಾಕಷ್ಟು ಅನುದಾನದ ಕೊರತೆ ಇದೆ. ಆದರೂ ಸಹ ನನ್ನ ಶಕ್ತಿ ಮೀರಿ ಅನುದಾನಗಳನ್ನು ತಂದು ಅಭಿವೃದ್ಧಿಗೆ ಕೆಲಸಗಳನ್ನು ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಮುಂದಿನ ದಿನಗಳಿಲ್ಲಿ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುವ ಭರವಸೆ 100ಕ್ಕೆ 100ರಷ್ಟಿದೆ. ಆಗ ಮತ್ತಷ್ಟು ಹೆಚ್ಚಿನ ಅನುದಾನವನ್ನು ತಂದು ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಅವರು ಇದೇ ವೇಳೆ ಭರವಸೆ ನೀಡಿದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನರಸೀಪುರ ರವಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಎಸ್.ರಾಧಿಕಾ, ಮುಖ್ಯಾಧಿಕಾರಿ ಬಿ.ಜಿ.ಸತೀಶ್, ಸದಸ್ಯರಾದ ಶ್ರೀನಿವಾಸ್, ಚಲುವಕೃಷ್ಣ, ಪಿಡಬ್ಲ್ಯೂಡಿ ಇಂಜಿನಿಯರ್ ಗಳಾದ ರಾಜಯ್ಯ, ಮಹೇಶ್, ಧ್ರುವರಾಜ್, ಕಾಂಗ್ರೆಸ್ ಮುಖಂಡರಾದ ಎಸ್.ಎಸ್.ಪ್ರಭುಸ್ವಾಮಿ,ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಅಶೋಕ್ ಮಂಜುನಾಥ್ ಮೂಳ್ಳೂರು, ಮಲ್ಲೇಶ್ ಜಕ್ಕಹಳ್ಳಿ, ನಾಗೇಂದ್ರ ನರಸೀಪುರ, ಬಸವರಾಜು ಕಳ್ಳಸೂರು, ಅಶೋಕ್, ಹಾದನೂರು ಪುಟ್ಟಸ್ವಾಮಿ, ಪ್ರಕಾಶ್ ಹೂವಿನಕೊಳ ಮತ್ತಿತರರು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy