ಅಕ್ಕ ಧಾರಾವಾಹಿ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ, ರಿಯಾಲಿಟಿ ಶೋ ನಿರೂಪಕಿ ಅನುಪಮಾ ಗೌಡ ಹೊಸ ಟ್ಯಾಟೋ ಹಾಕಿಸಿಕೊಂಡಿದ್ದು, ತನ್ನ ತಂದೆಯ ನೆನಪಿಗಾಗಿ ಈ ಟ್ಯಾಟೋ ಹಾಕಿಸಿಕೊಂಡಿದ್ದಾರಂತೆ!
ಅಪ್ಪ. ನನ್ನ ಜೊತೆ ದೈಹಿಕವಾಗಿ ಇಲ್ಲದಿದ್ದರೂ ನನ್ನ ಬೆನ್ನ ಹಿಂದೆ ಸದಾ ಇರುತ್ತಾರೆ. ನನ್ನ ಟ್ಯಾಟ್ಯೂ ಅದ್ಭುತವಾಗಿ ಮೂಡಿ ಬಂದಿದೆ. ನನ್ನ ಜೀವನ ಪೂರ್ತಿ ಈ ಟ್ಯಾಟೂ ಜೊತೆಯಾಗಿ ಇರುತ್ತದೆ ಎಂದು ಫೋಟೋ ಶೇರ್ ಮಾಡಿಕೊಂಡು ಅನುಪಮಾ ಗೌಡ ಬರೆದುಕೊಂಡಿದ್ದಾರೆ.
ತಮ್ಮ ತಂದೆಯ ಜೊತೆ ಬಾಲ್ಯದಲ್ಲಿ ಕ್ಲಿಕ್ ಮಾಡಿಕೊಂಡಿರುವ ಫೋಟೋದ ಔಟ್ ಲೈನ್ ನ ತಮ್ಮ ಬೆನ್ನ ಹಿಂದೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ತುಂಬಾ ಸರಳವಾಗಿದ್ದರು, ಅದ್ಭುತವಾಗಿದೆ ಎಂದು ಫಾಲೋವರ್ಸ್ ಕಾಮೆಂಟ್ ಮಾಡಿದ್ದಾರೆ.
ಇತ್ತೀಚೆಗೆ ಹೊಸ ಮನೆ ಗೃಹ ಪ್ರವೇಶ ಮಾಡಿದ್ದ ಅನುಪಮಾ ಗೌಡ ಸುದ್ದಿಯಲ್ಲಿದ್ದರು. ಈ ಮನೆಗೆ ನಮ್ಮನೆ ಎಂದು ಹೆಸರಿಟ್ಟಿದ್ದಾರೆ. ಗೃಹ ಪ್ರವೇಶ ದಿನ ತಂದೆ ಇಲ್ಲ ಎನ್ನುವುದು ಮನಸಿಗ ಬರಬಾರದು ಅಂತ ಟ್ಯಾಟೋ ಹಾಕಿಸಿಕೊಂಡಿದ್ದಾರೆ ಅಂತ ನೆಟ್ಟಿಗರು ಹೇಳುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296