ಗುಡಿಸಿಲಿನ ಮೆಲೆ ಕಲ್ಲಿದಲು ಸಾಗಿಸುತ್ತಿದ್ದ ಟ್ರಕ್ ನಿಯಮತ್ರಣ ತಪ್ಪಿ ಬಿದ್ದ ಕಾರಣ ಮೂವರು ಅಪ್ರಾಪ್ತ ಸೋದರಿಯರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಕಲ್ಲಿದ್ದಲು ಇಳಿಸುತ್ತಿದ್ದಾಗ ಕಂಟೈನರ್ ಟ್ರಕ್ ವಾಲಿ ಸ್ಥಳದಲದಲಿ ಮಲಗಿದ್ದ ಮೂವರು ಸೋದರಿಯರ ಮೇಲೆ ಬಿದ್ದಿದ್ದೆ. ಪರಿಣಾಮ ಮೂವರೂ ಬಾಲಕಿಯರೂ ಸ್ಥಳದಲೆ ಸಾವನ್ನಪ್ಪಿದ್ದಾರೆ.
ಬಾಲಕೀಯರ ಪೋಷಕರು ಇಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇಟ್ಟಿಗೆ ಬಟ್ಟಿ ಸುಡಲು ಕಲ್ಲಿದ್ದಲನ್ನ ಇಳಿಸಲಾಗುತ್ತಿತ್ತು. ಮೃತ ಬಾಲಕಿಯರು 3 ರಿಮದ 7 ವರ್ಷದವರಾಗಿದ್ದಾರೆ.
ಇಟ್ಟಿಗೆ ಭಟ್ಟಿ ಮಾಲಿಕರಾದ ಗೋಪಿನಾಥ್ ಟ್ರಕ್ ಚಾಲಕ ತೌಫಿಕ್ ಶೇಖ್ ಎಂಬುವವರನ್ನ ಬಂದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತಿದ್ದ ದಂಪತಿಗಳಿಗೆ ನಾಲ್ವರು ಮಕ್ಕಳಿದ್ದು ಮೂರು ಮಕ್ಕಳು ಗುಡಿಸಿಲಿನಲ್ಲಿ ಮಲಗಿದ್ದರು. 2 ವರ್ಷದ ಮಗುವನ್ನ ಗುಡಿಸಿಲಿನಿಂದ ದೂರದ ಮರಕ್ಕೆ ತೊಟ್ಟಿಲು ಕಟ್ಟಿ ಮಲಗಿಸಿದ್ದರು. ಈ ಮಗು ದೂರ ಇದ್ದ ಕಾರಣ ಬದುಕುಳಿದಿದೆ..
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy