ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಳಿಯಾರ್ ರಸ್ತೆಯಲ್ಲಿನ ಪೌದಿಯಮ್ಮ(ಭಗವತಿ) ಅಮ್ಮನ ದೇವಸ್ಥಾನಕ್ಕೆ ತಿರುಗುವ ತಿರುವಿನಲ್ಲಿರುವ ಸೇತುವೆ ಭೂಮಿಯಿಂದ ಬೇರ್ಪಟ್ಟು ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಾಮಿಸಿತ್ತು. ಈ ಸಂಬಂಧ ನಮ್ಮತುಮಕೂರು.ಕಾಂನ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಇದೀಗ ಸೇತುವೆ ಕಾಮಗಾರಿ ಆರಂಭಿಸಿದ್ದಾರೆ.
ಮಾಧ್ಯಮ ವರದಿಯ ಬೆನ್ನಲ್ಲೇ ಹಿರಿಯೂರು ನಗರ ಸಭೆ ಆಡಳಿತ ಮಂಡಳಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಇದೀಗ ಕೆಲಸ ಆರಂಭವಾಗಿದೆ. ಪ್ರಮುಖ ರಸ್ತೆಯಲ್ಲೇ ಸೇತುವೆ ಬಾಯ್ದೆರೆದು ಪ್ರಾಣ ಬಲಿಗಾಗಿ ಕಾಯುತ್ತಿತ್ತು. ಆದರೆ, ಈ ಬಗ್ಗೆ ಸಂಬಂಧಪಟ್ಟವರು ಬೇಜಾವಬ್ದಾರಿವಹಿಸಿದ್ದರು. ಈ ಸಂಬಂಧ ಸವಿವರವಾದ ವರದಿಯನ್ನು ನಮ್ಮತುಮಕೂರು.ಕಾಂ ವರದಿ ಮಾಡಿದ್ದು, ಈ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಇದೀಗ ರಸ್ತೆ ದುರಸ್ತಿ ಕಾರ್ಯ ಆರಂಭಿಸಿದ್ದಾರೆ.
ಇಲ್ಲಿನ ರಸ್ತೆ ಕೂಡ ಹೊಂಡ, ಗುಂಡಿಗಳಿಂದ ತುಂಬಿದ್ದು, ವಾಹನ ಪ್ರಯಾಣಿಕರ ಪ್ರಾಣದ ಜೊತೆಗೆ ಚೆಲ್ಲಾಟ ಆಡುವಂತಿತ್ತು. ಶಾಲಾ ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಈ ರಸ್ತೆ ಅವ್ಯವಸ್ಥೆಯಿಂದ ಕಂಗೆಟ್ಟಿದ್ದರು. ಇದೀಗ ನಮ್ಮ ತುಮಕೂರು.ಕಾಂ ವರದಿಯಿಂದ ಎಚ್ಚೆತ್ತುಕೊಂಡಿದ್ದು, ಸಾರ್ವಜನಿಕರ ಸುರಕ್ಷತೆ ಕ್ರಮಕೈಗೊಳ್ಳಲಾಗಿದೆ.
ಹಲವು ವರ್ಷಗಳಿಂದ ಇಲ್ಲಿ ಈ ಸಮಸ್ಯೆ ಇಲ್ಲಿ ಜೀವಂತವಾಗಿತ್ತು. ನಮ್ಮತುಮಕೂರು ಮಾಧ್ಯಮವು ಸಾರ್ವಜನಿಕರ ಹಿತಾಸಕ್ತಿಯಿಂದ ಈ ವರದಿ ಪ್ರಕಟ ಮಾಡುವ ಮೂಲಕ ಬಹುವರ್ಷಗಳಿಂದ ಸಾರ್ವಜನಿಕರು ಅನುಭವಿಸುತ್ತಿದ್ದ ಸಂಕಷ್ಟಕ್ಕೆ ಕೊನೆಗೂ ಮುಕ್ತಿ ದೊರಕಿದಂತಾಗಿದೆ.
ಕಾಮಗಾರಿ ಆರಂಭವಾದ ವೇಳೆ ನಗರಸಭೆ ಪೌರಾಯುಕ್ತರಾದ ಡಿ ಉಮೇಶ್, ಅಧ್ಯಕ್ಷರಾದ ಶಂಶದ್ ಉನ್ನಿಸಾ, ನಗರಸಭೆ ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್ ಸದಸ್ಯರಾದ ಜಗದೀಶ್, ಘಾಟ್ ರವಿ ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು ( ಚಿತ್ರದುರ್ಗ ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB