ತುಮಕೂರು: ತುಮುಲ್ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಿ ಪಾವಗಡ ಶಾಸಕ ವೆಂಕಟೇಶ್ ಅವರನ್ನು ಆಯ್ಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಬಿಜೆಪಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಪಾವಗಡದವರನ್ನ ನಾಮನಿರ್ದೇಶನ ಮಾಡಿ ಅಧ್ಯಕ್ಷನ ಮಾಡಿ ನಮ್ಮ ಮುಖದ ಮೇಲೆ ಕೆನ್ನೆಗೆ ಒಡೆದಂತಾಗಿದೆ. ಇದಕ್ಕಿಂತ ನಾಚಿಕೆಗೇಡಿನ ಸ್ಥಿತಿ ಒಕ್ಕೂಟ ವ್ಯವಸ್ಥೆಗೆ ಬರಬಾರದು. ಅವರೇನಾದ್ರು ಸಹಕಾರ ಮಂತ್ರಿ ಅನ್ನೋ ಯೋಗ್ಯತೆ ಇದ್ರೆ ಬಂದು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು, ನಾನು ಸಹಕಾರ ಕ್ಷೇತ್ರಕ್ಕೆ ಅಯೋಗ್ಯ ನಾನು, ಈ ಕ್ಷೇತ್ರಕ್ಕೆ ಯೋಗ್ಯನಲ್ಲ ಅಂತಾ ರಾಜೀನಾಮೆ ಕೊಡಬೇಕು ಎಂದು ಮಾಧುಸ್ವಾಮಿ ಕಿಡಿಕಾರಿದರು.
ನಾನು ಅಧಿಕಾರದಲ್ಲಿದ್ದಾಗ ನನ್ನದು ನಡೀತಾ ಇತ್ತು, ಒಂದು ದಿನ ಆ ವ್ಯವಸ್ಥೆಗೆ ಬಾಯಾಕಿಲ್ಲ. ನಾವು ನಮ್ಮ ಹಾಗೇ ಗೆದ್ದು ಬಂದಿದ್ದಾರೆ ಅವರ ಆಡಳಿತ ಅವರು ಮಾಡಲಿ ಎಂತಾ ಹೇಳಿದವರು ನಾವು. ರೈತ ಕೆನ್ನೆಮೇಲೆ ಒಡೆದಂಗೆ ಹತ್ತು ಜನರಲ್ಲಿ ಅವರು ಯಾರಿಗಾದ್ರು ಅಧ್ಯಕ್ಷ ಸ್ಥಾನ ಕೊಡಲಿ. ನಾವು ಯಾರಿಗೆ ಓಟ್ ಹಾಕಬೇಕು ಅಂತಾ ತೀರ್ಮಾನ ಮಾಡಿರಲಿಲ್ಲ. ನಮ್ಮ ಗುಂಪಿಗೆ ಶಕ್ತಿ ಇರಲಿಲ್ಲ ಕಾಂಗ್ರೆಸ್ ಅವರು ಆಗ್ತಾರ ಆಗಲಿ ಅಂತಾ. ಗೆದ್ದ ಹತ್ತು ಜನ ಆಚೇ ಇಟ್ಟು ನಾಮನಿರ್ದೇಶನ ಮಾಡಿ ಅಧ್ಯಕ್ಷ ಮಾಡ್ತಾರೆ ಅಂದ್ರೆ ಈ ಕಸರತ್ತು ನಾವು ಮಾಡಬೇಕಿತ್ತಾ ಎಂದು ಅವರು ಅವರು ಪ್ರಶ್ನಿಸಿದರು.
ಓಟ್ ಹಾಕಿಸಿಕೊಂಡು ಇಷ್ಟೇಲ್ಲಾ ಕಷ್ಟ ಪಟ್ರು ಗೆದ್ದೋರು ಯಾರು ಬೇಕಾಗಿಲ್ಲ. ಕೆಎಂಎಫ್ ಅಲ್ಲಿ ಇಂತಹದದ್ದೇ ಸ್ಥಿತಿ ಮುಚ್ಚು ಬಿಡ್ಲಿ ಕೆಎಂಎಫ್ ನಾ ಎಂದು ಚಿಕ್ಕನಾಯಕನಹಳ್ಳಿ ಅಭಿನಂದನಾ ಸಮಾರಂಭದಲ್ಲಿ ರಾಜಣ್ಣ ವಿರುದ್ಧ ಮಾಧುಸ್ವಾಮಿ ಹರಿಹಾಯ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: