ತುಮಕೂರು: ಜನವರಿ 26 ಗಣರಾಜ್ಯೋತ್ಸವ ದಿನದಂದು ನಗರದ ಬಿಜಿಎಸ್ ವೃತ್ತದಿಂದ ಎಸ್.ಪಿ. ಕಚೇರಿಯವರೆಗೆ ವಿವಿಧ ದಲಿತಪರ ಸಂಘಟನೆಗಳಿಂದ ಬೃಹತ್ ತಮಟೆ ಚಳುವಳಿಯನ್ನು ಹಮ್ಮಿಕೊಂಡಿದ್ದು ಆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿಯನ್ನು ಸಹ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ತುಮಕೂರು ನಗರದ ಎಂ.ಜಿ.ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ತುರುವೇಕೆರೆ ತಾಲೂಕು ಕಾಡಲಗೆರೆ ಕಾವಲ್ ಗ್ರಾಮದಲ್ಲಿ ದಲಿತರು ತೆಗೆದುಕೊಂಡಿರುವ ಜಮೀನಿನಲ್ಲಿ ಕಲ್ಲುಕಂಬ ಹೊಡೆದು ಹಾಕಿರುವ ವಿಚಾರವಾಗಿ ಮತ್ತು ಕಲ್ಲುಕಂಬ ಹೊಡೆದು ಹಾಕಿರುವ ರವರ ಮೇಲೆ ಕಾನೂನು ರೀತಿ ಅಟ್ರಾಸಿಟಿ ಕೇಸ್ ದಾಖಲಿಸದೆ ಇರುವ ಬಗ್ಗೆ ವಿವಿಧ ದಲಿತ ಸಂಘಟನೆಗಳು ಎರಡನೇ ಪೂರ್ವಭಾವಿ ಸಭೆಯನ್ನು ಕರೆದು ವಿವರವಾಗಿ ಚರ್ಚಿಸಿ ಈಗಾಗಲೇ ತುರುವೇಕೆರೆ ವೃತ್ತ ನಿರೀಕ್ಷಕರು ವರ್ಗಾವಣೆಗೊಂಡಿದ್ದು ನೂತನ ವೃತ್ತ ನಿರೀಕ್ಷಕರಿಗೆ ಅಧಿಕಾರ ಹಸ್ತಾಂತರ ಮಾಡದೆ ಇರುವುದು ಮತ್ತು ದಲಿತರು ಕೊಟ್ಟಿರುವ ದೂರಿಗೆ ಎಫ್ ಐಆರ್ ದಾಖಲಿಸಲು ಶಿಸ್ತು ಕ್ರಮ ಕೈಗೊಳ್ಳಲು ಕುಣಿಗಲ್ ಡಿವೈಎಸ್ಪಿ ರವರಿಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದೂರನ್ನು ವರ್ಗಾವಣೆ ಮಾಡಿದರು ಸಹ ಈವರೆಗೂ ಯಾವುದೇ ರೀತಿಯ ಪ್ರಕರಣ ದಾಖಲಿಸುವುದಿಲ್ಲ ಎಂದು ಆರೋಪಿಸಿದರು.
ಅದರಂತೆ ಕಾನೂನಾತ್ಮಕವಾಗಿ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅನುಮತಿಯನ್ನು ಕೋರಲಾಗಿದೆಯೆಂದು ಕರ್ನಾಟಕ ರಾಜ್ಯ ಮಾದಿಗ ಸಮಾಜದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ರಾಜೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿ ಕುಮಾರ್, ದಲಿತ ಮುಖಂಡರಾದ ಮೋಹನ್, ಕರ್ನಾಟಕ ರಾಜ್ಯ ಮಾದಿಗ ಸಮಾಜದ ಜಿಲ್ಲಾ ಗೌರವಾಧ್ಯಕ್ಷರಾದ ಟಿ.ಆರ್.ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ಜಿ.ಆರ್.ಗಿರೀಶ್, ದಲಿತ ಮುಖಂಡರಾದ ರಾಮಯ್ಯ, ಅಂಬೇಡ್ಕರ್ ಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಸುಮಾ, ಶೋಭಾ, ಸಿದ್ದರಾಜು, ರವಿಕುಮಾರ್, ಗಂಗಾಧರ್, ಲಕ್ಷ್ಮಿನಾರಾಯಣ್, ಚಂಗಾವಿ ನಾಗರಾಜು ಸೇರಿದಂತೆ ಇತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


