ತುಮಕೂರು: ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡದಲ್ಲಿರುವ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ 2025–26ನೇ ಸಾಲಿನ ಬಿ.ವಿ.ಎ.(ದೃಶ್ಯಕಲಾ)–ಚಿತ್ರಕಲಾ ಪದವಿ ತರಗತಿ ಪ್ರವೇಶಾತಿಗಾಗಿ ಆಸಕ್ತ ಪಿ.ಯು.ಸಿ / ಐಟಿಐ / ಡಿಪ್ಲೋಮಾ / 10+2 / ತತ್ಸಮಾನ ವಿದ್ಯಾರ್ಹತೆ ಹೊಂದಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಲ್ಲದೆ, ಹೊಸದಾಗಿ ಬಿ.ವಿ.ಎ.–ಅನಿಮೆಷನ್ ಪದವಿ ಮತ್ತು ಬಿವಿಎ–ಗ್ರಾಫಿಕ್ಸ್ ಡಿಸೈನ್ ಪದವಿ ಕೋರ್ಸುಗಳನ್ನು ಪ್ರಾರಂಭಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಈ ಪದವಿಗಳು ವಿವಿಧ ವೃತ್ತಿ ಕೌಶಲ್ಯಗಳನ್ನೊಳಗೊಂಡಿದ್ದು, ಪದವಿ ಪೂರ್ಣಗೊಂಡ ಬಳಿಕ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ ಅಥವಾ ಸ್ವಯಂ ಉದ್ಯೋಗ ಕೈಗೊಳ್ಳಬಹುದಾಗಿದೆ.
ದೃಶ್ಯಕಲಾ ಪದವಿಗಳು 4 ವರ್ಷದ ಅವಧಿಯ 8 ಸೆಮಿಸ್ಟರ್ಗಳಲ್ಲಿ ನಡೆಯಲಿದ್ದು, ಬಿ.ವಿ.ಎ–ಪೇಟಿಂಗ್, ಬಿ.ವಿ.ಎ–ಅನಿಮೇಶನ್, ಬಿ.ವಿ.ಎ–ಗ್ರಾಫಿಕ್ ಡಿಸೈನಿಂಗ್ ಪದವಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು.
ಪ್ರವೇಶಕ್ಕಾಗಿ ಆನ್ ಲೈನ್ / ಆಫ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಪ್ರವೇಶಾತಿ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 8147870998 / 9886744229ನ್ನು ಸಂಪರ್ಕಿಸಬಹುದಾಗಿದೆ ಎಂದು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————