ತುಮಕೂರು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ವಿವಿಧ ಟ್ರೇಡ್ ಗಳಲ್ಲಿ ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಬೆಂಗಳೂರಿನ ಹೆಚ್.ಎ.ಎಲ್. ಕಂಪನಿಯಲ್ಲಿ ಅಪ್ರೆಂಟಿಸ್ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
ಫಿಟ್ಟರ್, ಟರ್ನರ್, ಮೆಷಿನಿಸ್ಟ್, ಕೋಪಾ, ಕಾರ್ಪೆಂಟರ್, ಫೌಂಡ್ರಿಮ್ಯಾನ್, ಶೀಟ್ ಮೆಟಲ್ ವರ್ಕರ್, ಟೂಲ್ ಅಂಡ್ ಡೈ ಮೇಕರ್, ಸಿಎನ್ಸಿ ಪ್ರೋಗ್ರಾಮರ್ ಕಂ ಆಪರೇಟರ್, ಮೆಕ್ಯಾನಿಕ್ ರೆಫ್ರಿಜಿರೇಷನ್ ಅಂಡ್ ಏರ್ ಕಂಡೀಷನಿಂಗ್ ಟ್ರೇಡ್ ನಲ್ಲಿ ಐ.ಟಿ.ಐ. ಪಾಸಾದ ಅಭ್ಯರ್ಥಿಗಳು ತರಬೇತಿಗೆ ಅರ್ಜಿ ಸಲ್ಲಿಸಬಹುದು.
ಅರ್ಹ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಭಾವಚಿತ್ರ, ಎಸ್.ಎಸ್ಎಲ್.ಸಿ., ಐ.ಟಿ.ಐ. ಅಂಕ ಪಟ್ಟಿ, ಆಧಾರ್ ಕಾರ್ಡ್ ಪ್ರತಿ ಹಾಗೂ ಮೀಸಲಾತಿ ಪ್ರಮಾಣ ಪತ್ರ SC/ST/OBC/PH ಅನ್ನು ಲಗತ್ತಿಸಿ ಜನವರಿ 22ರೊಳಗಾಗಿ ಸಲ್ಲಿಸಬೇಕು.
ಅರ್ಜಿಯನ್ನು ಸಲ್ಲಿಸುವ ಮುನ್ನ www.apprenticeship.gov.in ನಲ್ಲಿ ಕಡ್ಡಾಯವಾಗಿ ಅಪ್ರೆಂಟಿಸ್ ನೋಂದಣಿ ಮಾಡಿಕೊಂಡು ನಂತರ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ: 0816–2278488ನ್ನು ಸಂಪರ್ಕಿಸಬೇಕೆಂದು ಜಿಲ್ಲಾ ಉದ್ಯೋಗಾಧಿಕಾರಿ ಕಿಶೋರ್ ಕುಮಾರ್ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx