ನಟ ಅಪ್ಪು ದೇವರ ಮಗು. ದಾನ ಮಾಡುವ ಗುಣಕ್ಕಾಗಿ ಜನರು ನಟ ಪುನೀತ್ ರನ್ನ ಪ್ರೀತಿಸಿದ್ರು. ಮೇರು ನಟರ ಸಾಲಿನಲ್ಲಿ ಪುನೀತ್ ನಿಲ್ಲುತ್ತಾರೆ ಎಂದು ಹಿರಿಯ ನಟ ರಜಿನಿಕಾಂತ್ ಗುಣಗಾನ ಮಾಡಿದರು.
ನಟ ದಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟ ರಜಿನಿಕಾಂತ್, ಬಾಲ್ಯದಲ್ಲಿ ಪುನೀತ್ ಶಬರಿ ಮಲೆ ಪ್ರವಾಸದ ಬಗ್ಗೆ ನೆನಪಿಸಿಕೊಂಡರು. 1979ರಲ್ಲಿ ಚೆನ್ನೈನಲ್ಲಿ 4 ವರ್ಷದ ಅಪ್ಪು ಭೇಟಿಯಾಗಿದ್ದೆ. ಅಪ್ಪು ಇಲ್ಲ ಎಂದುಕೊಳ್ಳಲು ಆಗುತ್ತಲೇ ಇಲ್ಲ. ಅಪ್ಪು ನಿಧನರಾದಾಗ ನಾನು ಐಸಿಯುನಲ್ಲಿದ್ದೆ ಮೂರು ದಿನಗಳ ನಂತರ ಗೊತ್ತಾಯಿತು.
ಅಪ್ಪು ಮೊದಲ ಚಿತ್ರ ನೋಡಲು ಆಹ್ವಾನಿಸಿದ್ದರು. ಅಪ್ಪು ಹಾಡು ಡ್ಯಾನ್ಸ್ ಅದ್ಬುತವಾಗಿತ್ತು. ಪುನೀತ್ ಗೆ 100 ದಿನದ ಸಮಾರಂಭದಲ್ಲಿ ಫಲಕ ನೀಡಿ ಗೌರವಿಸಿದೆ. ಇಂದು ಅಪ್ಪು ಇಲ್ಲ ಎಂದರೇ ನಂಬಲಾಗುತ್ತಿಲ್ಲ ನನ್ನ ಮನಸ್ಸಿನಲ್ಲಿ 4 ವರ್ಷದ ಅಪ್ಪು ಮುಖವೇ ಇದೆ. ಎಂಜಿ ಆರ್ ತಮಿಳುನಾಡು ಜನರ ಮನಸಲ್ಲಿ ಉಳಿದರು. ಎನ್ ಟಿಆರ್ ಆಂಧ್ರ ಜನರ ಮನಸಲ್ಲಿ ಉಳಿದರು. ಡಾ. ರಾಜ್ ಕುಮಾರ್ ಆದರ್ಶವಾಗಿ ಬದುಕಿದರು. ಅಶ್ವಿನಿ ಅವರು ಅಪ್ಪು ಕಳೆದುಕೊಂಡ ದುಃಖ ಹೇಗೆ ತಡೆದುಕೊಳ್ಳುತ್ತಾರೋ ಗೊತತ್ತಿಲ್ಲ. ಅಪ್ಪು ಈಗ ದೇವರ ಜೊತೆ ಇದ್ದಾನೆ ಎಂದು ಭಾವುಕರಾಗಿ ನುಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


