nammatumakuru

    Subscribe to Updates

    Get the latest creative news from FooBar about art, design and business.

    What's Hot

    2028ರ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ನನಗೂ ಅವಕಾಶ ಸಿಗಲಿ: ಪಿ.ಎನ್. ಕೃಷ್ಣಮೂರ್ತಿ

    September 25, 2026

    ತುಮಕೂರು: ಗಣೇಶ ವಿಸರ್ಜನೆ ವೇಳೆ ಸಿಂಹಾದ್ರಿ ಹತ್ಯೆ – ಸಂತ್ರಸ್ತ ಕುಟುಂಬಕ್ಕೆ ಸಿಪಿಐ(ಎಂ), ಸಿಐಟಿಯು ಹಾಗೂ ಪಿಯುಸಿಎಲ್ ನಿಯೋಗದಿಂದ ಸಾಂತ್ವನ

    September 25, 2026

    ಹಾವೇರಿ: ವಾಯವ್ಯ ಸಾರಿಗೆ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ – ಓರ್ವ ಪ್ರಯಾಣಿಕ ಸಾವು, 6 ಜನರಿಗೆ ಗಾಯ

    September 24, 2026
    Facebook Twitter Instagram
    ಟ್ರೆಂಡಿಂಗ್
    • 2028ರ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ನನಗೂ ಅವಕಾಶ ಸಿಗಲಿ: ಪಿ.ಎನ್. ಕೃಷ್ಣಮೂರ್ತಿ
    • ತುಮಕೂರು: ಗಣೇಶ ವಿಸರ್ಜನೆ ವೇಳೆ ಸಿಂಹಾದ್ರಿ ಹತ್ಯೆ – ಸಂತ್ರಸ್ತ ಕುಟುಂಬಕ್ಕೆ ಸಿಪಿಐ(ಎಂ), ಸಿಐಟಿಯು ಹಾಗೂ ಪಿಯುಸಿಎಲ್ ನಿಯೋಗದಿಂದ ಸಾಂತ್ವನ
    • ಹಾವೇರಿ: ವಾಯವ್ಯ ಸಾರಿಗೆ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ – ಓರ್ವ ಪ್ರಯಾಣಿಕ ಸಾವು, 6 ಜನರಿಗೆ ಗಾಯ
    • 100 ದಿನಗಳ ಸಾಧನೆ ತಿಳಿಯಲು 30 ಸಚಿವರು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಿ: ಶಾಸಕ ಸುನೀಲ್ ಕುಮಾರ್ ವಾಗ್ದಾಳಿ
    • ಮೈಸೂರು ದಸರಾ: ಸ್ತಬ್ಧಚಿತ್ರ ಪ್ರದರ್ಶನ 15 ಜಿಲ್ಲೆಗಳಿಗೆ ಸೀಮಿತ; ಡಿಸಿಎಂ ಪರಮೇಶ್ವರ್ ತವರು ತುಮಕೂರಿಗೆ ಅವಕಾಶವಿಲ್ಲ!
    • ಕಾವೇರಿ ಜಲ ವಿವಾದ: CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ
    • ಕೇಂದ್ರೀಯ ರೇಷ್ಮೆ ಮಂಡಳಿಯಲ್ಲಿ ಉದ್ಯೋಗಾವಕಾಶ: ಪದವಿಧರರಿಗೆ 17 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
    • ಅನುಕಂಪದ ಆಧಾರದ ಮೇಲೆ ನೇಮಕಗೊಂಡವರು ಉನ್ನತ ಹುದ್ದೆಗಳನ್ನು ಕೇಳುವಂತಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಏ.12ರಂದು ರಾಮನಗರದಿಂದ ಜನತಾ ಜಲಧಾರೆಗೆ ಚಾಲನೆ
    ರಾಜ್ಯ ಸುದ್ದಿ April 11, 2022

    ಏ.12ರಂದು ರಾಮನಗರದಿಂದ ಜನತಾ ಜಲಧಾರೆಗೆ ಚಾಲನೆ

    By adminApril 11, 2022No Comments2 Mins Read
    jaladhare

    ಜಲಶ್ಯಾಮಲದಿಂದ ಸಸ್ಯಶಾಮಲ ಎಂಬ ಧ್ಯೇಯದೊಂದಿಗೆ ಜೆಡಿಎಸ್ ಹಮ್ಮಿಕೊಳ್ಳಲಿರುವ ಮಹತ್ವದ ಜನತಾ ಜಲಧಾರೆ ಕಾರ್ಯಕ್ರಮದ ಸಿದ್ಧತೆ ಪೂರ್ಣ ಗೊಂಡಿದ್ದು, ಏ.12ರಂದು ರಾಮನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಚಾಲನೆ ನೀಡಲಾಗುತ್ತದೆ.

    ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಜಿ ಪ್ರಧಾನಿ ಎಚ್.ಡಿ.ದೇವೇ ಗೌಡರು ಜನತಾ ಜಲಧಾರೆ ಯಾತ್ರಾ ರಥಗಳಿಗೆ ಚಾಲನೆ ನೀಡಲಿದ್ದಾರೆ.

    ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಮಂಡ್ಯ, ತುಮಕೂರು ಜಿಲ್ಲೆಯ ಜೆಡಿಎಸ್ ಜಿಲ್ಲಾಧ್ಯಕ್ಷರು, ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಸಚಿವರು, ಶಾಸಕರು ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಹಾಗೂ ಪಕ್ಷದ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

    ವಿಶೇಷವಾಗಿ ವಿನ್ಯಾಸಗೊಳಿಸಿರುವ 15 ಗಂಗಾರಥಗಳು 31 ಜಿಲ್ಲೆಗಳ 184 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿವೆ. ರಾಮನಗರದಿಂದ ವಿವಿಧ ಜಿಲ್ಲೆಗಳಿಗೆ ತೆರಳುವ ರಥಗಳು ಏ.16ರಂದು ನಿಗದಿ ಮಾಡಿರುವ ಸ್ಥಳಗಳಲ್ಲಿ ಜಲಸಂಗ್ರಹ ಮಾಡಲಿವೆ.15 ನದಿಗಳಿಂದ ಏಕಕಾಲದಲ್ಲಿ ಪವಿತ್ರ ಜಲವನ್ನು ಸಂಗ್ರಹ ಮಾಡಲಾಗುತ್ತದೆ. ಔರಾದ್ ತಾಲ್ಲೂಕಿನ ಮಾಂಜ್ರಾ, ಆಲಮಟ್ಟಿ , ತುಂಗಭದ್ರಾ ಅಣೆಕಟ್ಟೆ, ಕೆಆರ್ ಎಸ್, ಕಬಿನಿ, ಎತ್ತಿನ ಹೊಳೆ, ಮೇಕೆದಾಟು, ವಿಧುರಾಶ್ವತ್ಥ, ಕಾಳಿನದಿ, ಭಾಗಮಂಡಲ, ಸೌಪರ್ಣಿಕಾ, ರಾಮದೇವರ ಕಟ್ಟೆ, ಕಣಕುಂಬಿ, ಸೊನ್ನಭೀಮ ಬ್ರಿಡ್ಜ್ ಕಂ ಬ್ಯಾರೇಜ್‍ನಲ್ಲಿ ಜಲವನ್ನು ಸಂಗ್ರಹಿಸಲಾಗುತ್ತದೆ. ನದಿನೀರಿನ ಸದ್ಬಳಕೆ, ಜಲಾ ಶಯಗಳ ಅಭಿವೃದ್ಧಿ, ನೀರಾವರಿ ಯೋಜನೆಗಳ ವೇಗ ಹೆಚಚಿಸುವುದು, ಪ್ರತಿ ಜಿಲ್ಲೆಯಲ್ಲೂ ನೀರಿನ ಸಮಾನತೆ ಸೇರಿದಂತೆ ವಿವಿಧ ಆಶಯಗಳನ್ನು ಜನತಾ ಜಲಧಾರೆ ಹೊಂದಿದೆ. ಜನತಾ ಜಲಧಾರೆ ರಥ ಸಂಚರಿಸುವ ಮಾರ್ಗದಲ್ಲಿ ರಾಜ್ಯದ ನೀರಾವರಿ ಯೋಜನೆಗಳ ವಿಚಾರದಲ್ಲಿ ಸರ್ಕಾರಗಳ ವೈಫಲ್ಯ ಹಾಗೂ ಜೆಡಿಎಸ್ ಅಕಾರಕ್ಕೆ ಬಂದರೆ ಅನುಷ್ಠಾನ ಮಾಡುವ ಭರವಸೆ ಯೊಂದಿಗೆ ಪ್ರಚಾರ ಮಾಡಲಾಗುತ್ತದೆ. ಪ್ರತಿ ರಥಕ್ಕೂ ಜೆಡಿಎಸ್‍ ನ ಒಬ್ಬರು ನಾಯಕರು ಸಾರಥ್ಯ ವಹಿಸುವರು. 15 ನದಿಗಳಿಂದ ಕಳಶಗಳ ಮೂಲಕ ಜಲವನ್ನು ಸಂಗ್ರಹಿಸಿ ಮೆರವಣಿಗೆ ಮೂಲಕ ಬೆಂಗಳೂರಿಗೆ ತರಲಾಗುತ್ತದೆ. ಈ ರೀತಿ ತಂದ ಜಲವನ್ನು ಬ್ರಹ್ಮಕಳಶದಲ್ಲಿ ಸಂಗ್ರಹಿಸಿ ಜೆಡಿಎಸ್ ಕಚೇರಿಯಲ್ಲಿ ಪ್ರತಿಷ್ಠಾಪನೆ ಮಾಡಿ ಒಂದು ವರ್ಷ ಕಾಲ ಬೆಳಗ್ಗೆ, ಸಂಜೆ ಗಂಗಾಪೂಜೆ ಮಾಡಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

    ಮೇ 8ರಂದು ಅರಮನೆ ಮೈದಾನದಲ್ಲಿ ದೊಡ್ಡ ಸಮಾವೇಶ ಮಾಡಿ ನೀರಾವರಿ ಯೋಜನೆಗಳ ಜಾರಿ ಬಗ್ಗೆ ಸಂಕಲ್ಪ ಮಾಡಲಾಗುತ್ತದೆ. ಕಳೆದ 75 ವರ್ಷಗಳಿಂದ ನೀರಾವರಿ ಯೋಜನೆ ವಿಚಾರದಲ್ಲಿ ಆಗಿರುವ ಅನ್ಯಾಯವನ್ನು ಜೆಡಿಎಸ್‍ಗೆ ಅಕಾರ ಕೊಟ್ಟ ಐದೇ ವರ್ಷದಲ್ಲಿ ಸರಿಪಡಿಸಲಾಗುವುದು ಎಂಬ ಭರವಸೆಯನ್ನು ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿದ್ದಾರೆ.

    ವರದಿ: ಆಂಟೋನಿ

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಹಾವೇರಿ: ವಾಯವ್ಯ ಸಾರಿಗೆ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ – ಓರ್ವ ಪ್ರಯಾಣಿಕ ಸಾವು, 6 ಜನರಿಗೆ ಗಾಯ

    September 24, 2026

    100 ದಿನಗಳ ಸಾಧನೆ ತಿಳಿಯಲು 30 ಸಚಿವರು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಿ: ಶಾಸಕ ಸುನೀಲ್ ಕುಮಾರ್ ವಾಗ್ದಾಳಿ

    September 24, 2026

    ಮೈಸೂರು ದಸರಾ: ಸ್ತಬ್ಧಚಿತ್ರ ಪ್ರದರ್ಶನ 15 ಜಿಲ್ಲೆಗಳಿಗೆ ಸೀಮಿತ; ಡಿಸಿಎಂ ಪರಮೇಶ್ವರ್ ತವರು ತುಮಕೂರಿಗೆ ಅವಕಾಶವಿಲ್ಲ!

    September 24, 2026

    Leave A Reply Cancel Reply

    Our Picks

    ಕಾವೇರಿ ಜಲ ವಿವಾದ: CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ

    September 24, 2026

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್

    September 23, 2026

    ಗಣೇಶೋತ್ಸವ ಅನ್ನದಾನದ ವೇಳೆ ಕುದಿಯುತ್ತಿದ್ದ ಸಾಂಬಾರ್‌ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು

    September 22, 2026

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    2028ರ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ನನಗೂ ಅವಕಾಶ ಸಿಗಲಿ: ಪಿ.ಎನ್. ಕೃಷ್ಣಮೂರ್ತಿ

    September 25, 2026

    ಕೊರಟಗೆರೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ…

    ತುಮಕೂರು: ಗಣೇಶ ವಿಸರ್ಜನೆ ವೇಳೆ ಸಿಂಹಾದ್ರಿ ಹತ್ಯೆ – ಸಂತ್ರಸ್ತ ಕುಟುಂಬಕ್ಕೆ ಸಿಪಿಐ(ಎಂ), ಸಿಐಟಿಯು ಹಾಗೂ ಪಿಯುಸಿಎಲ್ ನಿಯೋಗದಿಂದ ಸಾಂತ್ವನ

    September 25, 2026

    ಹಾವೇರಿ: ವಾಯವ್ಯ ಸಾರಿಗೆ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ – ಓರ್ವ ಪ್ರಯಾಣಿಕ ಸಾವು, 6 ಜನರಿಗೆ ಗಾಯ

    September 24, 2026

    100 ದಿನಗಳ ಸಾಧನೆ ತಿಳಿಯಲು 30 ಸಚಿವರು ಕನ್ನಡಿಯಲ್ಲಿ ಮುಖ ನೋಡಿಕೊಳ್ಳಿ: ಶಾಸಕ ಸುನೀಲ್ ಕುಮಾರ್ ವಾಗ್ದಾಳಿ

    September 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.