ತಿಪಟೂರು : ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹಟ್ಣ ಗ್ರಾಮದ ಗ್ರಾಮ ದೇವತೆ ಉಡುಸಲಮ್ಮ (ಕೆಂಪಮ್ಮ) ದೇವಿಯ ದೊಡ್ಡ ಜಾತ್ರೆಯೂ ಏ.15 ರಿಂದ ಏ.22 ರವರೆಗೆ ವಿಜೃಂಭಣೆಯಿಂದ ನೆರವೇರಲಿದೆ.
ಸುತ್ತಮುತ್ತಲ 33 ಹಳ್ಳಿಗಳ ಜನರು ಜಾತ್ರಾ ಮಹೋತ್ಸವದಲ್ಲಿ ಸೇರಲಿದ್ದು, ಏ.15 ರಂದು ಧ್ವಜಾರೋಹಣ ಹಾಗೂ ಕಟ್ಟಿಗೇನಹಳ್ಳಿ ಗ್ರಾಮಸ್ಥರಿಂದ ಆರತಿ ಉತ್ಸವ ಕಾರ್ಯಕ್ರಮ, ಏ.16 ರಂದು ಚಂದ್ರ ಮಂಡಲೋತ್ಸವ ಕಾರ್ಯಕ್ರಮ, ಏ.17 ರಂದು ಉಡುಸಲಮ್ಮ ( ಕೆಂಪಮ್ಮ) ದೇವಿಯ ರಥೋತ್ಸವ ಹಾಗೂ ಬಸವಣ್ಣ ದೇವರ ರಥೋತ್ಸವ, ಏ.18 ರಂದು ಜಾತ್ರೆಯ ವಿಶೇಷ ಹರಕೆ ತೀರಿಸುವ ಸಲುವಾರಿ ಮಕ್ಕಳ ಸಿಡಿ ಕಾರ್ಯಕ್ರಮ ನೆರವೇರಲಿದೆ. ನಂತರದಲ್ಲಿ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಏರ್ಪಡಿಸಲಾಗಿದೆ. ಏ.19 ರಂದು ಹಗಲು ಜಾತ್ರೆ ವಿಶೇಷವಾಗಿ 33 ಹಳ್ಳಿಗಳ ಜನರು ಸೇರಲಿದ್ದು ಅದ್ದೂರಿಯಿಂದ ಜಾತ್ರೆ ನಡೆಯಲಿದೆ.
ರಾತ್ರಿ ಕುದುರೆ ವಾಹನೋತ್ಸವ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೇವಿಕ ಕೃಪೆಗೆ ಪಾತ್ರರಾಗಬೇಕೆಂದು ಧರ್ಮದರ್ಶಿ ಮಂಡಳಿಯ ಮನವಿ ಮಾಡಿದ್ದಾರೆ.
ವರದಿ: ಆನಂದ, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy