nammatumakuru

    Subscribe to Updates

    Get the latest creative news from FooBar about art, design and business.

    What's Hot

    ವನ್ಯಜೀವಿಗಳ ಚಲನೆ ಬಗ್ಗೆ ಎಚ್ಚರಿಕೆ ನೀಡಲು AI ಸೈರನ್ ಅಳವಡಿಕೆ!

    June 1, 2025

    ಜನರ ತೆರಿಗೆ ಹಣ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ಬಳಕೆ: ಬಿ.ವೈ.ವಿಜಯೇಂದ್ರ ಕಿಡಿ

    June 1, 2025

    ಒಂದೇ ವರ್ಷದಲ್ಲಿ 700 ಬಾಲ್ಯ ವಿವಾಹ: ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಸಿಎಂ ಸಿದ್ದರಾಮಯ್ಯ

    June 1, 2025
    Facebook Twitter Instagram
    ಟ್ರೆಂಡಿಂಗ್
    • ವನ್ಯಜೀವಿಗಳ ಚಲನೆ ಬಗ್ಗೆ ಎಚ್ಚರಿಕೆ ನೀಡಲು AI ಸೈರನ್ ಅಳವಡಿಕೆ!
    • ಜನರ ತೆರಿಗೆ ಹಣ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ಬಳಕೆ: ಬಿ.ವೈ.ವಿಜಯೇಂದ್ರ ಕಿಡಿ
    • ಒಂದೇ ವರ್ಷದಲ್ಲಿ 700 ಬಾಲ್ಯ ವಿವಾಹ: ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಸಿಎಂ ಸಿದ್ದರಾಮಯ್ಯ
    • ಶಿಕ್ಷಕನ ಅಮಾನತು ಪ್ರಕರಣ: ಸರ್ಕಾರಿ ನೌಕರರಿಗೆ ಪ್ರತಿಭಟನೆ ಅವಕಾಶವಿಲ್ಲ: ಸಚಿವ ಮಧು ಬಂಗಾರಪ್ಪ
    • ಹೇಮಾವತಿ ಎಕ್ಸ್‌ ಪ್ರೆಸ್ ಲಿಂಕ್ ಕೆನಾಲ್ ವಿವಾದ ಸಿಎಂ ಸಿದ್ದರಾಮಯ್ಯ, ಸಚಿವ ಪರಮೇಶ್ವರ್ ಪ್ರತಿಕ್ರಿಯೆ
    • ಜನಿಸಿದ ಎರಡೇ ದಿನಕ್ಕೆ ಹೆಣ್ಣು ಮಗುವನ್ನು ಮಾರಾಟ ಮಾಡಿದ ತಂದೆ, ತಾಯಿ!
    • ನಿಷೇಧಾಜ್ಞೆ ಧಿಕ್ಕರಿಸಿ ಹೇಮಾವತಿ ಎಕ್ಸ್‌ ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿ ವಿರೋಧಿಸಿ ಹೋರಾಟ
    • ಹೇಮಾವತಿ ಲಿಂಕಿಂಗ್ ಕೆನಾಲ್ ಕಾಮಗಾರಿಗೆ ತಾತ್ಕಾಲಿಕ ಬ್ರೇಕ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಎಲ್ ಪಿಜಿ ಗ್ರಾಹಕರಿಗೆ ಬಿಗ್ ಶಾಕ್, ಏಪ್ರಿಲ್ ನಲ್ಲಿ ದುಪ್ಪಟ್ಟಾಗಲಿದೆ ಗ್ಯಾಸ್ ಬೆಲೆ
    ರಾಷ್ಟ್ರೀಯ ಸುದ್ದಿ February 23, 2022

    ಎಲ್ ಪಿಜಿ ಗ್ರಾಹಕರಿಗೆ ಬಿಗ್ ಶಾಕ್, ಏಪ್ರಿಲ್ ನಲ್ಲಿ ದುಪ್ಪಟ್ಟಾಗಲಿದೆ ಗ್ಯಾಸ್ ಬೆಲೆ

    By adminFebruary 23, 2022No Comments2 Mins Read
    gas

    ಬೆಲೆ ಏರಿಕೆಯ ನಡುವೆಯೇ ಜನಸಾಮಾನ್ಯರ ಮೇಲೆ ಮತ್ತೊಮ್ಮೆ ಹೊರೆ ಬೀಳಲಿದೆ. ಪೆಟ್ರೋಲ್, ಡೀಸೆಲ್ ನಂತರ ಈಗ ಎಲ್‌ಪಿಜಿ ( LPG Price Hike) ಕೂಡ ಗ್ರಾಹಕರ ಜೇಬು ಸುಡಲಿದೆ. ಏಪ್ರಿಲ್‌ನಿಂದ ಅಡುಗೆ ಅನಿಲ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಪ್ರಪಂಚದಾದ್ಯಂತ ಗ್ಯಾಸ್ ನಲ್ಲಿ ದೊಡ್ಡ ಕೊರತೆ ಕಂಡುಬಂದಿದೆ (Global Gas Crunch). ಏಪ್ರಿಲ್‌ನಿಂದ ಅದರ ಪರಿಣಾಮ ಭಾರತದ ಮೇಲೂ ಬೀಳುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಇಲ್ಲಿಯೂ ಗ್ಯಾಸ್ ಬೆಲೆಗಳು ದ್ವಿಗುಣಗೊಳ್ಳಬಹುದು (Domestic Gas Prices) .

    ಜಾಗತಿಕ ಅನಿಲ ಕೊರತೆ :


    Provided by

    ಜಾಗತಿಕ ಮಟ್ಟದಲ್ಲಿಯೇ ಅನಿಲದ ಕೊರತೆಯಿಂದಾಗಿ ಸಿಎನ್‌ಜಿ (CNG), ಪಿಎನ್‌ಜಿ ಮತ್ತು ವಿದ್ಯುತ್ ಬೆಲೆಗಳು (electricity bill) ಹೆಚ್ಚಾಗುತ್ತವೆ. ಇದರ ಜೊತೆಗೆ ಕಾರ್ಖಾನೆಗಳಲ್ಲಿ ಯಂತ್ರಗಳನ್ನು ನಡೆಸುವುದು ದುಬಾರಿಯಾಗಬಹುದು. ಅಲ್ಲದೆ, ಉತ್ಪಾದನಾ ವೆಚ್ಚವೂ ಹೆಚ್ಚಾಗಬಹುದು. ಸರ್ಕಾರದ ರಸಗೊಬ್ಬರ ಸಬ್ಸಿಡಿ ಮಸೂದೆಯಲ್ಲೂ ಹೆಚ್ಚಳ ಕಂಡು ಬರಬಹುದು (Fertilizer Subsidy Bill). ಒಟ್ಟಿನಲ್ಲಿ ಇವೆಲ್ಲದರ ಪರಿಣಾಮ ಸಾಮಾನ್ಯ ಗ್ರಾಹಕರ ಮೇಲೆ ಮಾತ್ರ ಆಗಲಿದೆ.

    ಬೇಡಿಕೆಯಂತೆ ಪೂರೈಕೆ ಇಲ್ಲ :

    ರಷ್ಯಾ ಯುರೋಪ್ ಗೆ ಅನಿಲ ಪೂರೈಸುವ ಪ್ರಮುಖ ಮೂಲವಾಗಿದೆ. ಉಕ್ರೇನ್ ಬಿಕ್ಕಟ್ಟಿನ ಕಾರಣದಿಂದಾಗಿ ಇದು ಪರಿಣಾಮ ಬೀರಬಹುದು (Ukraine crisis ). ಕರೋನಾ ಸಾಂಕ್ರಾಮಿದ (Coronavirus) ನಂತರ ಇದೀಗ ಜಾಗತಿಕ ಆರ್ಥಿಕತೆಯು ಹಳಿಗೆ ಮರಳಲು ಪ್ರಯತ್ನಿಸುತ್ತಿದೆ. ಆದರೆ ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಪವರ್ ಬೇಡಿಕೆಯಿಂದಾಗಿ, ಅದರ ಪೂರೈಕೆಯು ಕಡಿಮೆಯಾಗಬಹುದು. ಇದೇ ಕಾರಣಕ್ಕೆ ಗ್ಯಾಸ್ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ (LPG Price).

    ಅಡುಗೆ ಅನಿಲ ಸಿಲಿಂಡರ್ ಬೆಲೆಗಳಲ್ಲಿನ ಬದಲಾವಣೆಯ ನಂತರ ಗೋಚರಿಸಲಿದೆ ಪರಿಣಾಮ:

    ಉಕ್ರೇನ್ ಬಿಕ್ಕಟ್ಟಿನಿಂದಾಗಿ, ಯುದ್ಧದ ಪರಿಸ್ಥಿತಿ ಕಂಡುಬರುತ್ತಿದೆ. ಅದರ ಪರಿಣಾಮವು ಎಲ್ಲೆಡೆ ಗೋಚರಿಸುತ್ತದೆ. ಈಗ ಇದು ಅನಿಲ ಬೆಲೆಯ ಮೇಲೆ ಕೂಡಾ ಪರಿಣಾಮ ಬೀರಬಹುದು. ಜಾಗತಿಕ ಅನಿಲ ಕೊರತೆಯ ಪರಿಣಾಮವು ಏಪ್ರಿಲ್‌ನಿಂದ ಕಂಡು ಬರಲಿದೆ. ಆಗ ಸರ್ಕಾರವು ಅಡುಗೆ ಅನಿಲದ ಬೆಲೆಗಳನ್ನು ಬದಲಾಯಿಸುತ್ತದೆ. ತಜ್ಞರ ಪ್ರಕಾರ, ಇದನ್ನು ಪ್ರತಿ mmBtu ಗೆ $ 2.9 ರಿಂದ $ 6 ರಿಂದ 7 ಕ್ಕೆ ಹೆಚ್ಚಿಸಬಹುದು. ರಿಲಯನ್ಸ್ ಇಂಡಸ್ಟ್ರೀಸ್ ಪ್ರಕಾರ, ಆಳ ಸಮುದ್ರದಿಂದ ಹೊರತೆಗೆಯುವ ಅನಿಲದ ಬೆಲೆ $ 6.13 ರಿಂದ ಸುಮಾರು $ 10 ಕ್ಕೆ ಹೆಚ್ಚಾಗುತ್ತದೆ. ಕಂಪನಿಯು ಮುಂದಿನ ತಿಂಗಳು ಸ್ವಲ್ಪ ಗ್ಯಾಸ್ ಅನ್ನು ಹರಾಜು ಮಾಡಲಿದೆ. ಇದಕ್ಕಾಗಿ, ಇದು ಫ್ಲೋರ್ ಪ್ರೈಸ್ ಅನ್ನು ಕಚ್ಚಾ ತೈಲಕ್ಕೆ ಲಿಂಕ್ ಮಾಡಿದೆ. ಪ್ರಸ್ತುತ ಇದು ಪ್ರತಿ mmBtu ಗೆ $ 14 ಆಗಿದೆ.

    ವರದಿ: ಆಂಟೋನಿ ಬೇಗೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಅಡುಗೆ ಎಣ್ಣೆ ದರ ಇಳಿಕೆ ಸಾಧ್ಯತೆ

    May 31, 2025

    ನಾನು ಪ್ರೀತಿಯಿಂದ ಹೇಳಿದ್ದೇನೆ: ಕನ್ನಡ ಬಗ್ಗೆ ಹೇಳಿಕೆಗೆ ಕಮಲ್ ಹಾಸನ್ ವಿವರಣೆ

    May 29, 2025

    ಪುಟಿನ್ ಹುಚ್ಚ: ರಷ್ಯಾ ಅಧ್ಯಕ್ಷ ವಿರುದ್ಧ ಟ್ರಂಪ್ ಕಿಡಿ

    May 26, 2025
    Our Picks

    ಅಡುಗೆ ಎಣ್ಣೆ ದರ ಇಳಿಕೆ ಸಾಧ್ಯತೆ

    May 31, 2025

    ನಾನು ಪ್ರೀತಿಯಿಂದ ಹೇಳಿದ್ದೇನೆ: ಕನ್ನಡ ಬಗ್ಗೆ ಹೇಳಿಕೆಗೆ ಕಮಲ್ ಹಾಸನ್ ವಿವರಣೆ

    May 29, 2025

    ಪುಟಿನ್ ಹುಚ್ಚ: ರಷ್ಯಾ ಅಧ್ಯಕ್ಷ ವಿರುದ್ಧ ಟ್ರಂಪ್ ಕಿಡಿ

    May 26, 2025

    ಆ್ಯಪಲ್ ಗೆ ಟ್ರಂಪ್ ಅಡ್ಡಗಾಲು: ಇಂಡಿಯಾ ಫ್ರೆಂಡ್ ಅಂತ ಹೇಳುತ್ತಲೇ ಟ್ರಂಪ್ ಮಾಡ್ತಿರೋದೇನು?

    May 24, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ವನ್ಯಜೀವಿಗಳ ಚಲನೆ ಬಗ್ಗೆ ಎಚ್ಚರಿಕೆ ನೀಡಲು AI ಸೈರನ್ ಅಳವಡಿಕೆ!

    June 1, 2025

    ಮಡಿಕೇರಿ: ವನ್ಯಜೀವಿಗಳ ಸಂಚಾರಕ್ಕೆ ಸಂಬಂಧಿಸಿದ ಅಹಿತಕರ ಘಟನೆಗಳನ್ನು ತಡೆಗಟ್ಟುವ ಸಲುವಾಗಿ ಕೊಡಗಿನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಹೊಸ ಯೋಜನೆ ಕೈಗೊಳ್ಳಲಾಗುತ್ತಿದೆ.…

    ಜನರ ತೆರಿಗೆ ಹಣ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ಬಳಕೆ: ಬಿ.ವೈ.ವಿಜಯೇಂದ್ರ ಕಿಡಿ

    June 1, 2025

    ಒಂದೇ ವರ್ಷದಲ್ಲಿ 700 ಬಾಲ್ಯ ವಿವಾಹ: ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಸಿಎಂ ಸಿದ್ದರಾಮಯ್ಯ

    June 1, 2025

    ಶಿಕ್ಷಕನ ಅಮಾನತು ಪ್ರಕರಣ: ಸರ್ಕಾರಿ ನೌಕರರಿಗೆ ಪ್ರತಿಭಟನೆ ಅವಕಾಶವಿಲ್ಲ: ಸಚಿವ ಮಧು ಬಂಗಾರಪ್ಪ

    June 1, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.