ಪಾವಗಡ: ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ಪಟ್ಟಣದ ಸಾಯಿ ಲೇ ಔಟ್ ನಲ್ಲಿ ಗಿಡವನ್ನು ನೆಟ್ಟು ನೀರು ಹರಿಸುವುದರ ಮೂಲಕ ಅರಣ್ಯ ಬೆಳೆಸಿ ಉಳಿಸಿ ಎಂದು ದೈಹಿಕ ಶಿಕ್ಷರ ಸಂಘದ ರಾಜ್ಯಾಧ್ಯಕ್ಷ ಹನುಮಂತರಾಯಪ್ಪ ಕರೆ ನೀಡಿದರು.
ಹೆಲ್ಪ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಅರಣ್ಯ ದಿನಾಚರಣೆಯ ಅಂಗವಾಗಿ ಗಿಡ ವನ್ನು ನೆಡುವುದರ ಮೂಲಕ ಅರಣ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್, ಶಿಕ್ಷಕ ರಮೇಶ್, ಎಸ್ ಎಲ್ ಎನ್ ಗ್ರಾನೈಟ್ ಮಾಲೀಕ ರವಿ, ಶ್ರೀಕಾಂತ್, ನರೇಶ್ ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5