nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದಿಂದ ಪ್ರತಿಭಟನೆ

    March 7, 2026

    ನಿರ್ವಹಣೆ ಕೊರತೆ: ಕೇವಲ 15 ವರ್ಷದಲ್ಲೇ ಶಿಥಿಲಾವಸ್ಥೆ ತಲುಪಿದ ಕೊರಟಗೆರೆ ಮಿನಿ ವಿಧಾನಸೌಧ

    March 7, 2026

    ರಾಜ್ಯ ಬಜೆಟ್ 2026: ತುಮಕೂರು ಜಿಲ್ಲೆಗೆ ತೀವ್ರ ನಿರಾಸೆ; ‘ಗ್ರೇಟರ್ ತುಮಕೂರು’ ಕನಸು ಭಗ್ನ

    March 7, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದಿಂದ ಪ್ರತಿಭಟನೆ
    • ನಿರ್ವಹಣೆ ಕೊರತೆ: ಕೇವಲ 15 ವರ್ಷದಲ್ಲೇ ಶಿಥಿಲಾವಸ್ಥೆ ತಲುಪಿದ ಕೊರಟಗೆರೆ ಮಿನಿ ವಿಧಾನಸೌಧ
    • ರಾಜ್ಯ ಬಜೆಟ್ 2026: ತುಮಕೂರು ಜಿಲ್ಲೆಗೆ ತೀವ್ರ ನಿರಾಸೆ; ‘ಗ್ರೇಟರ್ ತುಮಕೂರು’ ಕನಸು ಭಗ್ನ
    • ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ತುಮಕೂರಿನಲ್ಲಿ ಮಾ.11ಕ್ಕೆ ಬೃಹತ್ ನೇರ ಸಂದರ್ಶನ
    • ಸಾರಿಗೆ ಕ್ಷೇತ್ರಕ್ಕೆ ಬಂಪರ್ ಕೊಡುಗೆ: 2,000 ಕೋಟಿ ರೂ. ವೆಚ್ಚದಲ್ಲಿ 4,000 ಎಲೆಕ್ಟ್ರಿಕ್ ಬಸ್‌ ಗಳ ಸೇರ್ಪಡೆ
    • ಸಾಲವಿಲ್ಲದೆ ಯಾವುದೇ ದೇಶ–ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ; ಟೀಕಿಸುವ ನೈತಿಕ ಹಕ್ಕು ಬಿಜೆಪಿಗಿಲ್ಲ: ಸಿಎಂ ಸಿದ್ದರಾಮಯ್ಯ ತಿರುಗೇಟು
    • ಸಾಗರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಅಧ್ಯಕ್ಷರಾಗಿ ರತ್ನಮ್ಮ ಶಿವರಾಜು, ಉಪಾಧ್ಯಕ್ಷರಾಗಿ ಪುಟ್ಟಸಿದ್ದಯ್ಯ ಅವಿರೋಧ ಆಯ್ಕೆ
    • ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಶಾಕ್: ಆಲ್ಕೋಹಾಲ್ ಅಂಶದ ಮೇಲೆ ತೆರಿಗೆ; 45,000 ಕೋಟಿ ಗುರಿ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಚಿವ ಉಮೇಶ್ ವಿ.ಕತ್ತಿ ಸೂಚನೆ
    ಜಿಲ್ಲಾ ಸುದ್ದಿ April 7, 2022

    ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಚಿವ ಉಮೇಶ್ ವಿ.ಕತ್ತಿ ಸೂಚನೆ

    By adminApril 7, 2022No Comments2 Mins Read
    umesh katti

    ಸರಗೂರು: ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಬಾರಿ ಬೆಂಕಿ ಅನಾಹುತವಾಗಿತ್ತು. ಹಾಗಾಗಿ ಈ ಬಾರಿ,  ಮುನ್ನೆಚ್ಚರಿಕೆ ಕ್ರಮವಹಿಸಿ ಯಾವುದೇ ಬೆಂಕಿ ಅನಾಹುತ ನಡೆಯದಂತೆ ತಡೆಗಟ್ಟಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು  ಅರಣ್ಯ ಮತ್ತು ಪರಿಸರ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಉಮೇಶ್ ವಿ.ಕತ್ತಿ ಸೂಚನೆ ನೀಡಿದರು.

    ಗುರುವಾರ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕಾಡನ್ನು ಬೆಂಕಿಯಿಂದ ರಕ್ಷಣೆ ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ಅವರು, ಬಳಿಕ ನುಗು ವನ್ಯಜೀವಿ ವಲಯ ಮತ್ತು ರಾಮಪುರ ಆನೆಶಿಬಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಸ್ಥಳೀಯ ಮನವಿಗಳನ್ನು ಆಲಿಸಿದರು.


    Provided by
    Provided by

    ಬಂಡೀಪುರ ಅರಣ್ಯವನ್ನು ರಕ್ಷಣೆ ಮಾಡುವ ದೃಷ್ಠಿಯಿಂದ ಈಗಾಗಲೇ ಸುಮಾರು 176 ಕಿ.ಮೀ.ನಷ್ಟು ಬ್ಯಾರಿಗೇಟ್ಸ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಅದರಲ್ಲಿ ಈಗಾಗಲೇ ಶೇ.50 ನಿರ್ಮಿಸಲಾಗಿದೆ. ಬಂಡೀಪುರ ವ್ಯಾಪ್ತಿಯಲ್ಲಿ ಕಳೆದ ಬಾರಿ ಬೆಂಕಿ ಅನಾಹುತವಾಗಿದ್ದರಿಂದ ಈ ಬಾರಿ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿತ್ತು. ಅದರಂತೆ ಇಲಾಖೆ ಯಾವ ರೀತಿ ಕ್ರಮವಹಿಸಿದೆ ಎಂಬುದರ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದರು.

    ನುಗು ಭಾಗಕ್ಕೂ ಸಹ 15 ಕಿ.ಮೀ. ನಷ್ಟು ಬ್ಯಾರಿಗೇಟ್ ನಿರ್ಮಾಣವಾಗಬೇಕು ಎಂಬ ಮನವಿ ಇದೆ. ಈಗಾಗಲೇ 5ಕಿ.ಮೀ ಬ್ಯಾರೀಗೆಟ್ ನಿರ್ಮಾಣವಾಗಿದೆ. ಉಳಿದ ಭಾಗವನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದರು.

    ಇದೇ ವೇಳೆ ನುಗು ಭಾಗದ ಕಾಡಂಚಿನ ರೈತರು ಸಚಿವರನ್ನು ಭೇಟಿ ಮಾಡಿ, ಕಾಡಂಚಿನ ಭಾಗಗಳಲ್ಲಿ ಕಾಡುಪ್ರಾಣಿಗಳ ಆವಳಿ ಹೆಚ್ಚಾಗಿದ್ದು, ರೈತರು ಸಾಕಷ್ಟು ಪ್ರಮಾಣದ ಬೆಳೆ ನಷ್ಟವನ್ನು ಹೊಂದುತ್ತಿದ್ದಾರೆ. ನಮಗೆ ನೀಡುತ್ತಿರುವ ಪರಿಹಾರ ಸಾಕಗುತ್ತಿಲ್ಲ ಅಲ್ಲದೇ ಪರಿಹಾರವು ಸಹ ತಡವಾಗಿ ಬರುತಿದೆ. ಆದ್ದರಿಂದ ಬೆಳೆ ನಷ್ಟವಾದರೆ ಪ್ರಸ್ತುತ ಮಾರುಕಟ್ಟೆಯ ಬೆಲೆಯಂತೆ ನಮಗೆ ನಷ್ಟವನ್ನು ಕಟ್ಟಿಕೊಡಬೇಕು. ಅಲ್ಲದೇ ನುಗು ಭಾಗದಲ್ಲಿ ಕಾಡಾನೆಗಳ ಆವಳಿಯನ್ನು ತಪ್ಪಿಸಲು ಹೆಚ್ಚುವರಿಯಾಗಿ ಬ್ಯಾರಿಗೇಟ್ ನಿರ್ಮಾಣ ಮಾಡಬೇಕು ಎಂದು ಹಾದನೂರು ಪ್ರಕಾಶ್ ಮನವಿ ಮಾಡಿದರು.

    ನುಗು ವ್ಯಾಪ್ತಿಯಲ್ಲಿ ಸಫಾರಿ ಆರಂಭಿಸಲು ಮನವಿ:

    ಅರಣ್ಯ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರು ನುಗು ಭಾಗದಲ್ಲಿ ಸಫಾರಿಯನ್ನು ಆರಂಭಿಸಬೇಕು .  ಈಗಾಗಲೇ ಅರಣ್ಯ ಇಲಾಖೆಯಿಂದ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ನುಗುವಿನಲ್ಲಿ ಸಫಾರಿ ಆರಂಭವಾದರೆ ಸುತ್ತಲಿನ ಗ್ರಾಮಗಳು ಆರ್ಥಿಕವಾಗಿ ಸುಧಾರಣೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಗ್ರಾಮೀಣ ಮಹೇಶ್ ಮನವಿ ಸಲ್ಲಿಸಿದರು

    ಅಕ್ರಮ ಕಟ್ಟಡಗಳ ನಿರ್ಮಾಣವಾಗಿದೆ :

    ಅರಣ್ಯದೊಳಗೆ ಅಕ್ರಮವೂ ಸಕ್ರಮವೊ ಗೊತ್ತಿಲ್ಲ ಸಾಕಷ್ಟು ಕಟ್ಟಡಗಳು ನಿರ್ಮಾಣವಾಗಿವೆ ಎಂದು ಸ್ಥಳೀಯರು ಆರೋಪಿಸಿದರು.  ಇಲ್ಲಿರುವ ಕಟ್ಟಡಗಳ ಪೈಕಿ ಮಾಜಿ ಸಚಿವರ ಕಟ್ಟಡವು ಇದೆ ಎಂಬ ಮಾಹಿತಿ ಇದೆ. ಪ್ರತಿನಿತ್ಯ 10-15 ವಾಹನಗಳು ಅರಣ್ಯದೊಳಗೆ ಹೋಗುತ್ತಿವೆ. ಇದರಿಂದ ಪ್ರಾಣಿಗಳಿಗೂ ತೊಂದರೆ ಉಂಟಾಗುತ್ತಿದ್ದು, ಈ ಬಗ್ಗೆ ಕ್ರಮವಹಿಸಿ ಅಕ್ರಮ ಕಟ್ಟಡವನ್ನು ತೆರವು ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.

    ಮನವಿ ಆಲಿಸಿದ ಬಳಿಕ ಮಾತನಾಡಿದ ಸಚಿವರು, ಸಫಾರಿ ವಿಚಾರವಾಗಿ ಬೋಟಿಂಗ್ ಮಾಡಲು ಸಾಧ್ಯವಿಲ್ಲ ಸಫಾರಿ ಆರಂಭಿಸುವ ಬಗ್ಗೆ ಯೋಜನೆ ರೂಪಿಸುತ್ತೇವೆ. ಇನ್ನೂ ಅಕ್ರಮ ಕಟ್ಟಡಗಳ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಕ್ರಮವಹಿಸುವುದಾಗಿ ತಿಳಿಸಿದರು.

    ಸ್ಥಳದಲ್ಲಿ ಮೈಸೂರು ಸಿಎಫ್ ಮಾಲತಿಪ್ರಿಯಾ, ಬಂಡೀಪುರ ಸಿಎಫ್ ರಮೇಶ್ ಕುಮಾರ್, ಎಸಿಎಫ್ಗಳಾದ ರವಿಕುಮಾರ್, ನವೀನ್, ವಲಯ ಅರಣ್ಯಾಧಿಕಾರಿಗಳಾದ ಗೀತಾ ನಾಯಕ್, ಮಂಜುನಾಥ್, ಪಿಎಸ್ಐ ಶ್ರವಣದಾಸ್ ರೆಡ್ಡಿ, ಮಹೇಶ್ ಜೀವಾ ಗ್ರಾ.ಪಂ. ಅಧ್ಯಕ್ಷ ಮುಳ್ಳೂರು ಗೊವಿಂದಚಾರಿ, ಗ್ರಾ.ಪಂ. ಸದಸ್ಯ ಸಿದ್ದರಾಜು, ಸರಗೂರು ಕೃಷ್ಣ,  ಹಾದನೂರು ಗ್ರಾ.ಪಂ. ಸದಸ್ಯರು ಪ್ರಕಾಶ್, ಕೇಂಪಸಿದ್ದ, ನಿಂಗರಾಜು,  ಸ್ಥಳೀಯ ರೈತರು ಮುಂತಾದವರು ಹಾಜರಿದ್ದರು.

    ವರದಿ: ಚಂದ್ರ ಹಾದನೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಸಾಗರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಅಧ್ಯಕ್ಷರಾಗಿ ರತ್ನಮ್ಮ ಶಿವರಾಜು, ಉಪಾಧ್ಯಕ್ಷರಾಗಿ ಪುಟ್ಟಸಿದ್ದಯ್ಯ ಅವಿರೋಧ ಆಯ್ಕೆ

    March 7, 2026

    ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ: ಡಿಎಲ್‌ ಆರ್‌ ಸಿ–ಡಿಸಿಸಿ ಸಭೆಯಲ್ಲಿ ಸಂಸದ ಈ.ತುಕಾರಾಮ್ ತಾಕೀತು

    March 6, 2026

    ಮಾಧ್ಯಮಗಳು ಅವಕಾಶ ವಂಚಿತ ಸಮುದಾಯಗಳ ಧ್ವನಿಯಾಗಬೇಕು: ಪ್ರೊ.ಬಿ.ಕೆ.ರವಿ

    March 6, 2026

    Leave A Reply Cancel Reply

    Our Picks

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದಿಂದ ಪ್ರತಿಭಟನೆ

    March 7, 2026

    ತುಮಕೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಒಳಮೀಸಲಾತಿ ಹೋರಾಟ ಸಮಿತಿ…

    ನಿರ್ವಹಣೆ ಕೊರತೆ: ಕೇವಲ 15 ವರ್ಷದಲ್ಲೇ ಶಿಥಿಲಾವಸ್ಥೆ ತಲುಪಿದ ಕೊರಟಗೆರೆ ಮಿನಿ ವಿಧಾನಸೌಧ

    March 7, 2026

    ರಾಜ್ಯ ಬಜೆಟ್ 2026: ತುಮಕೂರು ಜಿಲ್ಲೆಗೆ ತೀವ್ರ ನಿರಾಸೆ; ‘ಗ್ರೇಟರ್ ತುಮಕೂರು’ ಕನಸು ಭಗ್ನ

    March 7, 2026

    ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ತುಮಕೂರಿನಲ್ಲಿ ಮಾ.11ಕ್ಕೆ ಬೃಹತ್ ನೇರ ಸಂದರ್ಶನ

    March 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.