nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಿಜೃಂಭಣೆಯಿಂದ ನೆರವೇರಿದ ಗೊರವನಹಳ್ಳಿ ರಥೋತ್ಸವ

    November 15, 2025

    ಕೊಳ್ಳುರ: ಮಕ್ಕಳ ದಿನಾಚರಣೆ, ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

    November 15, 2025

    ಬೀದರ್: ತೇಗಂಪೂರ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ

    November 15, 2025
    Facebook Twitter Instagram
    ಟ್ರೆಂಡಿಂಗ್
    • ವಿಜೃಂಭಣೆಯಿಂದ ನೆರವೇರಿದ ಗೊರವನಹಳ್ಳಿ ರಥೋತ್ಸವ
    • ಕೊಳ್ಳುರ: ಮಕ್ಕಳ ದಿನಾಚರಣೆ, ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ
    • ಬೀದರ್: ತೇಗಂಪೂರ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ
    • ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರಪ್ಪ ಕುಟುಂಬಕ್ಕೆ ಧರ್ಮಸ್ಥಳ ಸಂಘದಿಂದ ಧನ ಸಹಾಯ
    • ನವೆಂಬರ್ 19:  ಚಿಕ್ಕಪೇಟೆ ಶ್ರೀ ಪ್ರಸನ್ನ ಗಂಗಾಧರೇಶ್ವರ ದೇಗುಲದಲ್ಲಿ ಲಕ್ಷ ದೀಪೋತ್ಸವ
    • ತುಮಕೂರು: ನಗರದ ವಿವಿಧೆಡೆ ಉಪಲೋಕಾಯುಕ್ತ ನ್ಯಾಯಮೂರ್ತಿ ದಿಢೀರ್ ಭೇಟಿ: ಅಧಿಕಾರಿಗಳು, ಅಂಗಡಿ ಮಾಲಿಕರಿಗೆ ತರಾಟೆ
    • ಗುಬ್ಬಿ: ತಾಲೂಕು ಯೋಜನಾ ಹುದ್ದೆಗೆ ಅರ್ಜಿ ಆಹ್ವಾನ
    • ನವೆಂಬರ್ 20: ಎಡೆಯೂರು ಲಕ್ಷದೀಪೋತ್ಸವ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಲಕ್ಕುಂಡಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಅಭಿಯಾನ
    ಜಿಲ್ಲಾ ಸುದ್ದಿ November 20, 2024

    ಲಕ್ಕುಂಡಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಅಭಿಯಾನ

    By adminNovember 20, 2024No Comments4 Mins Read
    lakkundi

    ಗದಗ: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮವು ಐತಿಹಾಸಿಕ ಪಾರಂಪರಿಕ ಪ್ರದೇಶವಾಗಿದ್ದು ಈ ಪಾರಂಪರಿಕ ಗ್ರಾಮದಲ್ಲಿ ಸಾಕಷ್ಟು ಶಿಲೆಗಳು, ಶಾಸನಗಳು ಮತ್ತು ಪ್ರಾಚ್ಯಾವಶೇಷಗಳು ಗ್ರಾಮದಲ್ಲಿ ಹಾಗೂ ಗ್ರಾಮಸ್ಥರ ಮನೆಗಳಲ್ಲಿ ಲಭ್ಯವಿರುತ್ತವೆ.

    ಐತಿಹಾಸಿಕ ಲಕ್ಕುಂಡಿಯನ್ನು ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಪಟ್ಟಿಗೆ ಸೇರಿಸಿ ಜಾಗತಿಕ ಮಟ್ಟದಲ್ಲಿ ಗುರುತಿಸುವ ಕಾರ್ಯ ಪರಿಣಾಮಕಾರಿಯಾಗಬೇಕು. ಈ ನಿಟ್ಟಿನಲ್ಲಿ ಪೂರಕ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


    Provided by
    Provided by

    ಇಂತಹ ಅವಶೇಷಗಳನ್ನು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿಪ್ರಾಧಿಕಾರ ಜೊತೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಲಕ್ಕುಂಡಿ ಗ್ರಾಮದಲ್ಲಿ 10 ತಂಡಗಳನ್ನು ಅಭಿಯಾನದ ರೂಪದಲ್ಲಿ ಗ್ರಾಮದ ಮನೆ, ಕಟ್ಟೆ, ತಿಪ್ಪಿ, ಒಳಗಟ್ಟಿ ಇತರೆಡೆಗಳಲ್ಲಿರುವ ಪ್ರಾಚ್ಯಾವೇಶಗಳನ್ನು ಸಂಗ್ರಹಿಸಲು ನಿರ್ದೇಶಿಸಲಾಗಿದೆ.

    ಈ ನಿಟ್ಟಿನಲ್ಲಿ ನವೆಂಬರ್ 22 ರಿಂದ 24 ರವರೆಗೆ ಮೂರು ದಿನಗಳ ಕಾಲ ಲಕ್ಕುಂಡಿ ಪಾರಂಪರಿಕ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪ್ರಾಚ್ಯಾವಶೇಷಗಳ (ಸಂಗ್ರಹಣಾ ಅಭಿಯಾನವನ್ನು) ಅನ್ವೇಷಣೆಯನ್ನು ಹಮ್ಮಿಕೊಳ್ಳಲಾಗಿದೆ.

    ತಂಡಗಳ ವಿವರ ಇಂತಿದೆ:

    ವಾರ್ಡ ಸಂಖ್ಯೆ 5 ಕರಿಯವರ ಓಣಿ, ತಹಶೀಲ್ದಾರರ ಓಣಿ ವ್ಯಾಪ್ತಿಯಲ್ಲಿ ರಾಜ್ಯದ ಕಾನೂನು, ನ್ಯಾಯ ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಮಟ್ಟದ ಸಲಹಾ ಸಮಿತಿ ಅಧ್ಯಕ್ಷರಾದ ಎಚ್.ಕೆ.ಪಾಟೀಲ ಅವರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಲಕ್ಕುಂಡಿ ಪಾರಂಪರಿಕ ಪ್ರದೇಶ. ಪ್ರಾಧಿಕಾರದ ರಾಜ್ಯ ಮಟ್ಟದ ಸಲಹಾ ಸಮಿತಿಯ ಸದಸ್ಯರಾದ ಸಿದ್ಧಲಿಂಗೇಶ್ವರ ಪಾಟೀಲ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ.ಶರಣು ಗೋಗೇರಿ, ಗದಗ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ.ವಿ.ನಡುವಿನಮನಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳಾದ ಪೀರಸಾಬ ನದಾಫ್ , ರಜಿಯಾಬೇಗಂ ಆರ್ ತಹಶೀಲ್ದಾರ, ಅನ್ನಪುರ್ಣ ರಿತ್ತಿ ಅವರನ್ನು ತಂಡವು ಒಳಗೊಂಡಿದೆ.

    ವಾರ್ಡ ಸಂಖ್ಯೆ 9 , ಕುಂಬಾರ ಓಣಿ ಕಮತರ ಓಣಿ ಮತ್ತು ಗೌರಿ ಓಣಿ ವ್ಯಾಪ್ತಿಯಲ್ಲಿ ನರಗುಂದ ಶಾಸಕರಾದ ಸಿ.ಸಿ.ಪಾಟೀಲ ಅವರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಸ್. ನೀಲಗುಂದ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಮಂಜುಳಾ ಮೆಣಸಿನಕಾಯಿ, ಲಲಿತಾ ಗದಗಿನ, ವೀರಣ್ಣ ಮಲ್ಲಪ್ಪ ಚಕ್ರಸಾಲಿ, ಮಹಾಂತೇಶ ಕಮತರ, ಶಿವಪ್ಪ ಬಳಿಗೇರ ಅವರನ್ನು ತಂಡವು ಒಳಗೊಂಡಿದೆ.

    ವಾರ್ಡ ಸಂಖ್ಯೆ 2 ರ ಅಂಬಕ್ಕಿಯವರ ಓಣಿ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಾಹೀನ್ ಅವರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ ಮೀನಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಗುಂಜೀಕರ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ ಸಿ ಭಾವಿ , ಅನಸವ್ವ ಅಂಬಕ್ಕಿ ಅವರನ್ನು ತಂಡವು ಒಳಗೊಂಡಿದೆ.

    ವಾರ್ಡ 8 ರ ಅನ್ನದಾನೇಶ್ವರ ನಗರ, ಕುರುಬರ ಓಣಿ ಮತ್ತು ಬಜಾರ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಕೆ.ವಿ.ರಾಜೇಂದ್ರ ಅವರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ , ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ವಿರುಪಾಕ್ಷಪ್ಪ ಬೆಟಗೇರಿ, ಶ್ರೀಮತಿ ನೀಲವ್ವ ಬಂಡಿ, ಶ್ರೀಮತಿ ಶಾಂತವ್ವ ಮಣಕವಾಡ ಅವರನ್ನು ತಂಡವು ಒಳಗೊಂಡಿದೆ.

    ವಾರ್ಡ ಸಂಖ್ಯೆ 3 ಗೊಲ್ಲರ ಓಣಿ ಕಲ್ಮೇಶ್ವರ ನಗರ, ಕೊರವರ ಓಣಿ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಉಪವಿಭಾಗಾಧಿಕಾರಿ ಎಂ. ಗಂಗಪ್ಪ, ತಹಶೀಲ್ದಾರರಾದ ಶ್ರೀನಿವಾಸ ಕುಲಕರ್ಣಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ರೋಷನಬಿ ನದಾಫ್ , ಬಸವರಾಜ ಹಟ್ಟಿ, ಕುಬೇರಪ್ಪ ಬೆಂತೂರ ಅವರನ್ನು ತಂಡವು ಒಳಗೊಂಡಿದೆ.

    ವಾರ್ಡ ಸಂಖ್ಯೆ 6 ಮಲ್ಲಿಕಾರ್ಜುನ ಗುಡಿ ಓಣಿ , ಯರಗುಡಿಯವರ ಓಣಿ ಮತ್ತು ಬಜಾರ್ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಅವರು ತಂಡದ ಮುಖ್ಯಸ್ಥರಾಗಿದ್ದು , ಸಂಚಾಲಕರಾಗಿ ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಅಮೀನಾ ಹುಬ್ಬಳ್ಳಿ ಹಾಗೂ ಬಸವರಾಜ ಯಲಿಶಿರುಂದ ಅವರನ್ನು ತಂಡವು ಒಳಗೊಂಡಿದೆ.

    ವಾರ್ಡ ಸಂಖ್ಯೆ 1 ಗೌಡ ಓಣಿ ವ್ಯಾಪ್ತಿಯಲ್ಲಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್. ನೇಮಗೌಡ ಅವರು ತಂಡದ ಮುಖ್ಯಸ್ಥರಾಗಿದ್ದು ಹೆಚ್ಚುವರಿ ಪೊಲೀಸ ವರಿಷ್ಟಾದಿಕಾರಿ ಎಂ.ಬಿ.ಸಂಕದ ಹಾಗೂ ಗ್ರಾ.ಪಂ. ಸದಸ್ಯರಾದ ಪುಷ್ಪಲತಾ ಪಾಟೀಲ, ಸುಮಿತ್ರವ್ವ ರೋಣದ , ರೇವಣಸಿದ್ಧಪ್ಪ ಮುಳಗುಂದ ಅವರನ್ನು ತಂಡವು ಒಳಗೊಂಡಿದೆ.

    ವಾರ್ಡ ಸಂಖ್ಯೆ 7 ಕುರುಬರ ಓಣಿ ವ್ಯಾಪ್ತಿಯಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ದೇವರಾಜು ಅವರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ , ಪುರಾತತ್ವ ಮತ್ತುಸಂಗ್ರಹಾಲಯ ಪರಂಪರೆ ಇಲಾಖೆಯ ಕ್ಯೂರೇಟರ್ ರಾಜಾರಾಮ್ ಹಾಗೂ ಗ್ರಾ.ಪಂ. ಸದಸ್ಯರಾದ ಶ್ರೇಯಾ ಕಟಿಗಾರ, ಹನುಮಂತಪ್ಪ ಬಂಗಾರಿಯವರ, ಲಕ್ಷ್ಮಣ ಗುಡಸಲವಾಸಿ ಅವರನ್ನು ತಂಡವು ಒಳಗೊಂಡಿದೆ.

    ವಾರ್ಡ ಸಂಖ್ಯೆ 4 ನದಾಫ್ ಗಲ್ಲಿ , ಬಿನ್ನಾಳ ಬಸವೇಶ್ವರ ಓಣಿ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಕುಲಪತಿ ಗಳು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಗ್ರಾ.ಪಂ.ರಾ. ವಿಶ್ವ ವಿದ್ಯಾಲಯದ ವಿಶೇಷಾಧಿಕಾರಿ ಉಮೆಶ ಬಾರಕೇರ ಹಾಗೂ ಗ್ರಾ.ಪಂ. ಸದಸ್ಯರಾದ ಫಕೀರವ್ವ ಬೇಲೇರಿ, ಚಂದ್ರವ್ವ ರಿತ್ತಿ ಅವರನ್ನು ತಂಡವು ಒಳಗೊಂಡಿದೆ.

    ವಾರ್ಡ ಸಂಖ್ಯೆ 10 ಕಟಗಿಯವರ ಓಣಿ ಹಿರೇಹಾಳರವರ ಓಣಿ, ಅನ್ನದಾನೇಶ್ವರ ನಗರ ವ್ಯಾಪ್ತಿಯಲ್ಲಿ ಲಕ್ಕುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಲಕ್ಕುಂಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಕುಮಾರ ಭಜಂತ್ರಿ, ಹಾಗೂ ಗ್ರಾ.ಪಂ. ಸದಸ್ಯರಾದ ಗಂಗವ್ವ ಪೂಜಾರ, ಈರವ್ವ ಛಬ್ಬರಭಾವಿ, ರುದ್ರಪ್ಪ ಮುಸ್ಕಿನಭಾವಿ ಅವರನ್ನು ತಂಡವು ಒಳಗೊಂಡಿದೆ.

    ಪ್ರತಿ ತಂಡಗಳಿಗೆ ಪ್ರತ್ಯೇಕವಾಗಿ ಇತಿಹಾಸ ಉಪನ್ಯಾಸಕರುಗಳನ್ನು ಹಾಗೂ ಪ್ರವಾಸಿ ಮಿತ್ರರನ್ನು ನಿಯೋಜಿಸಲಾಗಿದೆ.

    ನವೆಂಬರ್ 22 ರಿಂದ 24 ರವರೆಗೆ ಜರುಗುವ ಲಕ್ಕುಂಡಿ ಪಾರಂಪರಿಕ ಪ್ರದೇಶ ವ್ಯಾಪ್ತಿಯಲ್ಲಿ ಪ್ರಾಚ್ಯಾವಶೇಷಗಳ ಸಂಗ್ರಹಣಾ ಅಭಿಯಾನದ ವೇಳಾಪಟ್ಟಿ ಈ ಕೆಳಗಿನಂತಿದೆ:

    ನವೆಂಬರ್ 22 ರಂದು ಬೆ 9.30 ಗಂಟೆಗೆ ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸುವ ಕುರಿತು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ , ಸ್ವಯಂ ಸೇವಕರುಗಳಿಗೆ ಹಾಗೂ ತಂಡದ ಸದಸ್ಯರುಗಳು ತರಬೇತಿಯಲ್ಲಿ ಭಾಗವಹಿಸುವುದು.

    ನವೆಂಬರ್ 22 ರಂದು ಮಧ್ಯಾಹ್ನ 3 ಗಂಟೆಗೆ ಲಕ್ಕುಂಡಿ ಗ್ರಾಮದ ಕ್ಷೇತ್ರ ಕಾರ್ಯಕ್ಕೆ ತೆರಳಿ ತಮಗೆ ವಹಿಸಿರುವ ಸ್ಥಳ ಹಾಗೂ ಲಭ್ಯವಿರಬಹುದಾದ ಪ್ರಾಚ್ಯಾವಶೇಷಗಳನ್ನು ಗುರುತಿಸುವುದು.

    ನವೆಂಬರ್ 23 ರಂದು ಲಕ್ಕುಂಡಿ ಗ್ರಾಮದಲ್ಲಿ ಪ್ರಾಚ್ಯವಸ್ತುಗಳ ಸಂಗ್ರಹಣೆ ಮತ್ತು ಶೇಖರಣೆ ಕುರಿತು ಮನೆ-ಮನೆ ಸಮೀಕ್ಷೆ ಕೈಗೊಳ್ಳುವುದು ಹಾಗೂ ಸಮೀಕ್ಷೆಯ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಕ್ರೂಢೀಕರಿಸುವುದು.

    ನವೆಂಬರ್ 24 ರಂದು ಲಕ್ಕುಂಡಿ ಗ್ರಾಮದಲ್ಲಿ ಅಭಿಯಾನದ ತಂಡದವರೊಂದಿಗೆ ಹಿಂದಿನ ದಿನ ಸಮೀಕ್ಷೆಯಲ್ಲಿ ಗುರುತಿಸಲಾದ ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸುವುದು.

    ನವೆಂಬರ್ 22 ರಿಂದ 24 ರವರೆಗೆ ಜರುಗುವ ಪ್ರಾಚ್ಯಾವಶೇಷಗಳ ಅನ್ವೇಷಣೆ ಅಭಿಯಾನವನ್ನು ತಂಡದವರು ಪರಸ್ಪರ ಸಮನ್ವಯತೆ ಸಾಧಿಸಿ ಸಂಪೂರ್ಣ ಯಶಸ್ವಿಗೊಳಿಸಲು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಕೊಳ್ಳುರ: ಮಕ್ಕಳ ದಿನಾಚರಣೆ, ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

    November 15, 2025

    ಬೀದರ್: ತೇಗಂಪೂರ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ

    November 15, 2025

    ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರಪ್ಪ ಕುಟುಂಬಕ್ಕೆ ಧರ್ಮಸ್ಥಳ ಸಂಘದಿಂದ ಧನ ಸಹಾಯ

    November 15, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ವಿಜೃಂಭಣೆಯಿಂದ ನೆರವೇರಿದ ಗೊರವನಹಳ್ಳಿ ರಥೋತ್ಸವ

    November 15, 2025

    ಕೊರಟಗೆರೆ: ತಾಲ್ಲೂಕಿನ ಗೊರವನಹಳ್ಳಿ ಮಹಾಲಕ್ಷ್ಮೀ  ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಬ್ರಹ್ಮ ರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಲಕ್ಷದೀಪೋತ್ಸವ…

    ಕೊಳ್ಳುರ: ಮಕ್ಕಳ ದಿನಾಚರಣೆ, ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

    November 15, 2025

    ಬೀದರ್: ತೇಗಂಪೂರ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ

    November 15, 2025

    ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರಪ್ಪ ಕುಟುಂಬಕ್ಕೆ ಧರ್ಮಸ್ಥಳ ಸಂಘದಿಂದ ಧನ ಸಹಾಯ

    November 15, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.