ತುಮಕೂರು: ಜಿಲ್ಲೆಯ ಸುಪ್ರಸಿದ್ದ ಪುಣ್ಯಕ್ಷೇತ್ರ ಕ್ಯಾಮೇನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ನಿನ್ನೆ ಬೀಗ ಹಾಕಿರುವ ಘಟನೆ ನಡೆದಿದೆ.
ಇತಿಹಾಸದಲ್ಲೇ ಮೊದಲ ಸಲ ಈ ಘಟನೆ ನಡೆದಿದ್ದು, ಭಕ್ತರು ತೀವ್ರ ಬೇಸರ ವ್ಯಕ್ತಪಡಿಸಿದ್ಧಾರೆ. ಮುಜರಾಯಿ ಇಲಾಖೆ, ದೇವಾಲಯ ವ್ಯವಸ್ಥಾಪನ ಸಮಿತಿ ಮತ್ತು ಪರಿಚಾರಕನ ನಡುವಿನ ಗೊಂದಲ, ಸಮನ್ವಯ ಕೊರತೆಯಿಂದ ಭಕ್ತರಿಗೆ ಸಂಕಷ್ಟ ಸೃಷ್ಟಿಯಾಗಿದೆ. ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಫೆ.6ರಿಂದ ಫೆ.17ರ ವರೆಗೆ ದೇವಾಲಯ ಪ್ರಧಾನ ಅರ್ಚಕರ ಹುದ್ದೆಗೆ ದೇವರಾಯನ ದುರ್ಗದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಅರ್ಚಕ ಲಕ್ಷ್ಮೀನಾರಾಯಣ್ ತಾತ್ಕಾಲಿಕ ನಿಯೋಜಿಸಲು ಜಿಲ್ಲಾಧಿಕಾರಿ ಫೆ.3ರಂದು ಆದೇಶ ಮಾಡಿದ್ದಾರೆ.
ಕಳೆದ ಐದು ವರ್ಷದಿಂದ ಅರ್ಚಕರನ್ನು ನೇಮಕ ಮಾಡದೇ ಮೌನ ವಹಿಸಿದ್ದ ಮುಜರಾಯಿ ಇಲಾಖೆ, ಈಗ ಏಕಾಏಕಿ ನೇಮಕ ಮಾಡಿರುವುದೇ ಸಮಸ್ಯೆ ಸೃಷ್ಟಿಯಾಗಲು ಕಾರಣವಾಗಿದೆ. ಈ ನಡುವೆ ಜಿಲ್ಲಾಧಿಕಾರಿ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ತಾತ್ಕಾಲಿಕವಾಗಿ ಲಕ್ಷ್ಮೀನಾರಾಯಣರನ್ನು ಅರ್ಚಕರಾಗಿ ನೇಮಿಸಿದ್ರು ದೇವಾಲಯ ಪರಿಚಾರಕ ಕೃಷ್ಣಚಾರ್ ಕ್ಷೇತ್ರದ ಜವಾಬ್ದಾರಿ ನೀಡಲು ನಿರಾಕರಿಸಿ, ತುಮಕೂರು ಜಿಲ್ಲಾಧಿಕಾರಿ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ. ದೇವಸ್ಥಾನ ಈ ಗೊಂದಲಗಳ ನಡುವೆ ಕ್ಷೇತ್ರಕ್ಕೆ ಆಗಮಿಸಿದ ಭಕ್ತಾಧಿಗಳು ಸಂಕಷ್ಟ ಎದುರಿಸುವಂತಾಗಿದೆ ಎನ್ನಲಾಗಿದೆ.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB