ಮಧುಗಿರಿ: ಬಹುಭಾಷಾ ನಟ ಅರ್ಜುನ್ ಸರ್ಜಾ ರವರ ತಾಯಿ ವಿಧಿವಶರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿಯ ಜಕ್ಕೇನಳ್ಳಿಯ ಸ್ವಗ್ರಾಮದಲ್ಲಿ ಶಕ್ತಿಪ್ರಸಾದ್ ರವರ ಸಮಾಧಿಯ ಪಕ್ಕದಲ್ಲಿ ನೆರವೇರಿಸಿದರು.
ಕಳೆದ 22 ದಿನಗಳಿಂದ ಆಸ್ಪತ್ರೆಯಲ್ಲಿದ್ದ ಲಕ್ಷ್ಮಿ ದೇವಿ ಅಮ್ಮನವರು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಲಕ್ಷ್ಮೀದೇವಮ್ಮನವರಿಗೆ 85 ವರ್ಷ ವರ್ಷ ವಯಸ್ಸಾಗಿತ್ತು.
ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರು ಹಾಗೂ ಮಧುಗಿರಿ ಶಾಸಕರಾದ ವೀರಭದ್ರಯ್ಯ, ಮುರಳಿಧರ ಹಾಲಪ್ಪ, ಮಾಜಿ ಶಾಸಕರಾದ ಕೆ.ಎನ್. ರಾಜಣ್ಣ, ಎಲ್.ಸಿ.ನಾಗರಾಜ್ , ಮಧು ಗೌಡ ಮೊದಲಾದವರು ಇದ್ದರು.
ವರದಿ: ದೊಡ್ಡೇರಿ ಮಹಾಲಿಂಗಯ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz