ಪೊಲೀಸರ ಹೆಸರಿನಲ್ಲಿ ನಕಲಿ ‘ಎಕ್ಸ್ ಟ್ವಿಟರ್’ ಖಾತೆ ಸೃಷ್ಟಿಸಿ, ಅದರಲ್ಲಿ ಐಪಿಎಲ್ ಪಂದ್ಯಗಳ ಸ್ಕೋರ್ ಹಾಗೂ ಮತ್ತಿತರ ಮಾಹಿತಿ ಟ್ವಿಟ್ ಮಾಡಿ ಪೊಲೀಸರಂತೆ ಬಿಂಬಿಸುತ್ತಿದ್ದ ತಮಿಳುನಾಡಿನ ವ್ಯಕ್ತಿಯನ್ನು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ರಾಜ್ಯದ ಚೆಟಪೇಟ್ ನ ಮಗೇಶ್ ಕುಮಾರ್ ಬಂಧಿತ ಆರೋಪಿ, ಪ್ರಕರಣ ದಾಖಲಾದ ಮೇಲೆ ವಿಶೇಷ ತಂಡ ರಚಿಸಲಾಗಿತ್ತು. ವಿಶೇಷ ತಂತ್ರಜ್ಞಾನದ ನೆರವಿನಿಂದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.


