ಬೆಂಗಳೂರು: ಗೊಂಬೆ ಮಾಸ್ಕ್ ಧರಿಸಿಕೊಂಡು ರಸ್ತೆ ಬದಿ ಪಾರ್ಕ್ ಮಾಡಿದ್ದ ಕಾರು ಮತ್ತು ಬೈಕ್ಗಳನ್ನು ಧ್ವಂಸ ಮಾಡಿದ್ದ ಪ್ರಕರಣ ಸಂಬಂಧ ಆರು ಆರೋಪಿಗಳನ್ನು ರಾಜಗೋಪಾಲನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏರಿಯಾದಲ್ಲಿ ಹವಾ ಇಡಲು ಲಗ್ಗೆರೆ ಬಳಿ ಬೈಕ್ ನಲ್ಲಿ ಬಂದಿದ್ದ ಪುಂಡರ ಗ್ಯಾಂಗ್, 15 ಕಾರು ಹಾಗೂ ಬೈಕ್ ಗಳನ್ನು ಪುಡಿಗೈದಿದ್ದರು.
ಕಂಠ ಪೂರ್ತಿ ಕುಡಿದು ಬೈಕ್ ಗಳಲ್ಲಿ ಬಂದು ತೂರಾಡುತ್ತಾ ಮನಬಂದಂತೆ ರಾಡ್ ಮತ್ತು ಲಾಂಗ್ಗಳಿಂದ ಕಾರುಗಳ ಗ್ಲಾಸ್ ಪುಡಿ ಮಾಡಿ ಪರಾರಿಯಾಗಿದ್ದರು.


