ಬೆಂಗಳೂರು: ದುಬೈಯಿಂದ ಬೆಂಗಳೂರಿಗೆ ಇ-ಸಿಗರೇಟ್ ಗಳನ್ನು ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ಕೇಂದ್ರ ಸರ್ಕಾರ ನಿಷೇಧಿಸಿರುವ, ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಇ-ಸಿಗರೇಟ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕೇರಳ ಮೂಲದ ಶೋಹೇಬ್ ಬಂಧಿತ ಆರೋಪಿಯಾಗಿದ್ದಾರೆ. ಈತ ಬೆಂಗಳೂರಿನ ಹಲವಾರು ಸ್ಮೋಕಿ ಜೋಜ್ ಹಾಗೂ ರೀಟೆಲ್ ಮಾರಾಟ ಮಾಡುವವರಿಗೆ ಅನ್ಲೈನ್ ಮೂಲಕ ಆರ್ಡರ್ ಮಾಡಿಸಿಕೊಂಡು ಪೋರ್ಟರ್ ಮತ್ತು ಡ್ನಜೋ ಮೂಲಕ ಪೂರೈಕೆ ಮಾಡುತ್ತಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.
ಇ-ಸಿಗರೇಟ್ ಅನ್ನು ಬ್ಲೂ ಡಾರ್ಟ್ ಕೊರಿಯರ್ ಮೂಲಕ ದುಬೈಯಿಂದ ದೆಹಲಿಗೆ ತೆರಿಸಿ ಅಲ್ಲಿಂದ ಬೆಂಗಳೂರಿಗೆ ತರಿಸಲಾಗಿತ್ತು. ಬೆಂಗಳೂರಿನ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಇರಿಸಲಾಗಿತ್ತು ಹಾಗೂ ಇ-ಸಿಗರೇಟ್ ಒಂದು ಸಿಗರೇಟ್ ಗೆ ಐದರಿಂದ ಆರು ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಸಿಬಿ ಪೊಲೀಸರು ಅರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


