ಚಾಮರಾಜನಗರ: ಹದಿನಾರು ಕೆಜಿ ತಿಮಿಂಗಲ ವಾಂತಿ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಾಗಿರುವ ಆರೋಪಿಗಳಿಂದ 16 ಕೆ.ಜಿ. ತಿಮಿಂಗಲ ವಾಂತಿ, ಮೊಬೈಲ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಮೂಲದ ಇಮಿಯಾಜ್ ಅಬ್ದುಲ್, ರೆಹಮಾನ್, ಮಂಗಳೂರಿನ ಚಿತ್ರಾಂಜಲಿ ನಗರದ ಚೇತನ್ ಕುಮಾರ್ ಹಾಗೂ ಸುರತ್ಕಲ್‌ನ ವೆಂಕಟೇಶ್ ಅವರನ್ನು ಬಂಧಿತ ಆರೋಪಿಗಳಾಗಿದ್ದಾರೆ.
ಅಂಬರ್ ಗ್ರಿಸ್ ಎಂಬುವುದು ತಿಮಿಂಗಲದ ವಾಂತಿಯಾಗಿದ್ದು, ಹೊರ ಹಾಕಿದ ಆಹಾರ ದ್ರವ ರೂಪದಲ್ಲಿ ಗಟ್ಟಿಯಾಗಿರುತ್ತದೆ. ಈ ದ್ರವರೂಪದ ಗಟ್ಟಿ ಆಹಾರ ವಸ್ತು ಮೊದಲು ಸಮುದ್ರದ ಆಳದಲ್ಲಿ ಇದ್ದು, ನಂತರ ಕೆಲವು ರಾಸಾಯನಿಕ ಕ್ರಿಯೆಯ ಮೂಲಕ ಸಮುದ್ರದಲ್ಲಿ ತೇಲುತ್ತದೆ. ಇವುಗಳನ್ನು ಹೊರ ದೇಶಗಳಲ್ಲಿ ಸುಗಂಧದ್ರವ್ಯ ತಯಾರಿಸಲು ಬಳಸಲಾಗುತ್ತಿದ್ದು, ಹೀಗೆ ತೇಲಿದ ಆಯಂಬರ್ ಗ್ರೀಸ್ ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೆಲೆ ಇದೆ.


