ಜಾಮೀನು ಕೊಡಿಸುವಂತೆ ಹಲ್ಲೆ ಮಾಡಿ, ಹಣ ದೋಚಿದ್ದ ರೌಡಿಶೀಟರ್ ಸಹಿತ ಮೂವರು ಆರೋಪಿಗಳನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣಾ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ರಾಜೇಶ್, ಮಂಜ ಹಾಗೂ ನವೀನ ಬಂಧಿತ ಆರೋಪಿಗಳು.
ವಕೀಲ ಗಿರಿಧರ್ ಎಂಬುವವರು ನೀಡಿದ ದೂರಿನನ್ವಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ದೂರುದಾರ ಗಿರಿಧರ್ ತಮ್ಮ ಸ್ನೇಹಿತನಾಗಿದ್ದ ಹರ್ಷಿತ್ ಜೊತೆ ಜುಲೈ 24ರಂದು ಕಾರಿನಲ್ಲಿ ತೆರಳಿದ್ದರು. ಈ ವೇಳೆ ಸಮೀಪದಲ್ಲೇ ತನ್ನ ಸ್ನೇಹಿತ ರಾಜೇಶ್ ನ ಮನೆಯಿದೆ, ಭೇಟಿಯಾಗೋಣ’ ಎಂದು ಹೇಳಿದ್ದ ಹರ್ಷಿತ್ ನೊಂದಿಗೆ ಗಿರಿಧರ್ ತೆರಳಿದ್ದರು.
ಮನೆಯಲ್ಲಿ ರಾಜೇಶ್, ಜಾನ್, ಭರತ್ ಎಂಬಾತ ಸೇರಿದಂತೆ ಐವರು ಇದ್ದರು. ಮನೆಯಲ್ಲಿ ಏಕಾಏಕಿ ಗಿರಿಧರ್ ಗೆ ‘ನೀನು ಏನು ಮಾಡುತ್ತೀಯೋ ಗೊತ್ತಿಲ್ಲ. ತಕ್ಷಣ 5 ಲಕ್ಷ ರೂ. ತರಿಸಿಕೊಡಬೇಕು. ಹಾಗು ನಮ್ಮ ಕಡೆಯ ಎಂಟು ಜನರಿಗೆ ಜಾಮೀನು ಕೊಡಿಸಬೇಕು ಎಂದು ಬೆದರಿಕೆ ಹಾಕಿದ್ದರು ಎಂದು ದೂರು ದಾಖಲಾಗಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


