ತುಮಕೂರು: ಜಿಲ್ಲೆಯಲ್ಲಿ ಬರೋಬ್ಬರಿ 18 ಕಡೆ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ತುಮಕೂರು ಜಿಲ್ಲಾ ಪೊಲೀಸರು 29 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಜಿ.ಆರ್. ಚಿನ್ನ ಮತ್ತು ರಿಜ್ವಾನ್ ಭಾಷಾ ಎಂಬುವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸರಗಳ್ಳತನ ಆರೋಪಿಗಳು, ಜಿಲ್ಲೆಯ ಮಿಡಿಗೇಶಿ, ಕೊಡಿಗೇನಹಳ್ಳಿ, ಮಧುಗಿರಿ ಉಪವಿಭಾಗದ ಕೊರಟಗೆರೆ, ಪಟ್ಟನಾಯಕನಹಳ್ಳಿ ಬಡವನಹಳ್ಳಿ ಗೌರಿಬಿದನೂರು ಗ್ರಾಮಾಂತರ ಮಂಚೇನಹಳ್ಳಿ ಮಡಕಶಿರಾ ಠಾಣಾ ಸರಹದ್ದಿನಲ್ಲಿ ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಹೆಂಗಸಿರ ಕೊರಳಿನಲ್ಲಿದ್ದ ಚಿನ್ನದ ಸರ, ಕಿವಿ ಒಲೆ ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿ ಯಾಗುತ್ತಿದ್ದರು.
ಮಾರ್ಚ್ 12ರಂದು ಅಂಬಿಕಾ ಎಂಬುವರು ಮಿಡಿಗೇಶಿ– ಐಡಿಹಳ್ಳಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಅದೇ ಸಮಯಕ್ಕೆ ಮಿಡಿಗೇಶಿ ಕಡೆಯಿಂದ ಐ.ಡಿ. ಹಳ್ಳಿ ಕಡೆಗೆ ಸುಮಾರು 35–40 ವರ್ಷ ವಯಸ್ಸಿನ ಇಬ್ಬರು ಅಪರಿಚಿತ ವ್ಯಕ್ತಿಗಳು ಒಂದು ಸ್ಕೂಟಿಯಲ್ಲಿ ಬಂದು ಇಬ್ಬರೂ ಹಿಂಬದಿಯಿಂದ ಬಂದು, ಒಬ್ಬ ವ್ಯಕ್ತಿಯು ನನ್ನ ಬಾಯಿಯನ್ನು ಹಿಂದಿನಿಂದ ಮುಚ್ಚಿಕೊಂಡು ಇಬ್ಬರೂ ಸೇರಿಕೊಂಡು ಅವ್ರ ಕೊರಳಲ್ಲಿದ್ದ ಸುಮಾರು 30 ಗ್ರಾಂ ತೂಕದ ಸುಮಾರು 1.20.000 ರೂ ಬೆಲೆ ಬಾಳುವ ಬಂಗಾರದ ಮಾಂಗಲ್ಯ ಸರ ಕಿತ್ತುಕೊಂಡು ನಂತರ ನನ್ನ ಕಿವಿಯಲ್ಲಿ ಇದ್ದ ಸುಮಾರು 08 ಗ್ರಾಮ ತೂಕದ ಸುಮಾರು 32.000 ರೂ ಬೆಲೆ ಬಾಳು ಬಂಗಾರದ ಓಲೆ ಮತ್ತು ಕಿವಿ ಚೈನ್ ಅನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ಮಿಡಿಗೇಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆರೋಪಿಗಳ ಪತ್ತೆ ಬಗ್ಗೆ ಮಧುಗಿರಿ ವೃತ್ತ ವ್ಯಾಪ್ತಿಯಲ್ಲಿ ಮಧುಗಿರಿ ಸಿಪಿಐ ಎಸ್ ರವಿರವರ ನೇತೃತ್ವದಲ್ಲಿ ಪಿ ಎಂ ಅಮ್ಮಣಗಿ ಪಿ ಎಸ್ ಐ ಮಿಡಿಗೇಶಿ ಪೊಲೀಸ್ ಠಾಣೆ, ಮುತ್ತುರಾಜು ಪಿ ಎಸ್ ಐ ತನಿಖಾಧಿಕಾರಿ-2 ಮತ್ತು ರಮೇಶ್ ಕೊಡಿಗೇನಹಳ್ಳಿ ಪೊಲೀಸ್ ಠಾಣೆ, ಪ್ರಕಾಶ್ ಮಿಡಿಗೇಶಿ ಪೊಲೀಸ್ ಠಾಣಿ, ಗೋಪಾಲಕೃಷ್ಣರವರುಗಳನ್ನು ಒಳಗೊಂಡ ಅಪರಾಧ ಪತ್ತೆ ತಂಡವನ್ನು ರಚಿಸಲಾಗಿತ್ತು.
ತಂಡವು ಆರೋಪಿಯಾದ ಜಿ ಆರ್ ಚಿನ್ನಾ ಹಿಂದೂಪುರ , ಮತ್ತೊಬ್ಬ ಆರೋಪಿ ಚಿನ್ನಾನು ರಿಜ್ವಾನ್ ಭಾಷನನ್ನು ವಶಕ್ಕೆ ತೆಗೆದುಕೊಂಡಿದ್ದರು. ಪೊಲೀಸರ ವಿಚಾರಣೆ ವೇಳೆ ಈ ಇಬ್ಬರು ಆರೋಪಿಗಳು 18 ಕಡೆ ಸರಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಮಿಡಿಗೇಶಿ ಪೊಲೀಸ್ ಠಾಣಾ, ಕೊಡಿಗೇನಹಳ್ಳಿ ಪೊಲೀಸ್ ಠಾಣಾ, ಕೊರಟಗೆರೆ ಪೊಲೀಸ್ ಠಾಣಾ, ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ, ಮಂಚೇನಹಳ್ಳಿ ಪೊಲೀಸ್ ಠಾಣಾ, ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ, ಮಡಕಶಿರಾ ಪೊಲೀಸ್ ಠಾಣಾ, ಬಡವನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಒಟ್ಟು 18 ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಂದ TVS XL ದ್ವಿ ಚಕ್ರವಾಹನ, ದ್ವಿ ಚಕ್ರವಾಹನ ಮತ್ತು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA