ರಾಮಕೃಷ್ಣ ನಗರದ ಡಿ ಬ್ಲಾಕ್ ನಿವಾಸಿ ಸಮರ್ಥ್(25), ಗಿರಿದರ್ಶಿನಿ ಲೇಔಟ್ ನ ಉತ್ಸವ್ (19) ಬಂಧಿತರು. ಇವರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು 2ಲಾಂಗ್, ಕಾರು ವಶಕ್ಕೆ ಪಡೆದಿದ್ದಾರೆ. ಜತೆಗೆ 7 ಮಂದಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.
ಇವರ ಸ್ನೇಹಿತರಾದ ರಾಹುಲ್, ಮನೋಜ್, ದರ್ಶನ್, ಅಭಿ ಮತ್ತು ಮರ್ಡಿನ್ ಎಂಬ ಯುವಕನನ್ನು ಹೆದರಿಸಲು ಕಾರಿನಲ್ಲಿ ಲಾಂಗ್ ಗಳನ್ನಿಟ್ಟುಕೊಂಡು ಕಾಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಪ್ಲೆಕ್ಸ್ ಬಳಿ ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿದ್ದಾಗ ಕಾರನ್ನು ನಿಲ್ಲಿಸಿಕೊಂಡಿರುವ ಯುವಕರ ತಂಡ ಅನುಮಾನಾಸ್ಪದವಾಗಿ ವರ್ತಿಸುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ್ದಾರೆ. ಪೊಲೀಸರು ಬರುವುದನ್ನು ಕಂಡು ಕೆಲ ಯುವಕರು ಓಡಿ ಹೋಗಿದ್ದಾರೆ. ಇವರಲ್ಲಿ ಸಮರ್ಥ ಮತ್ತು ಉತ್ತಮ್ ಮಾತ್ರ ಪೊಲೀಸರಿಗೆ ಸಿಕ್ಕಿದ್ದಾರೆ. ಲಾಂಗ್ ಗಳನ್ನು ತೋರಿಸಿ ಬೆದರಿಸಲು ಈ ಯುವಕರು ನಿಂತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ತನಿಖೆ ಮುಂದುವರಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


