ಅಂಬಾನಿ ಕುಟುಂಬದ ಪುತ್ರ ಅನಂತ್ ಅಂಬಾನಿಯವರ ವಿವಾಹ ಸಮಾರಂಭದ ಪ್ರಯುಕ್ತ ಇಡೀ ಕುಟುಂಬ ವಿವಾಹ ಆಚರಣೆಯಲ್ಲಿ ಮುಳುಗಿತ್ತು. ಈ ನಡುವೆ ಈ ಸಮಾರಂಭದ ವೇಳೆ ಅನಂತ್ -ರಾಧಿಕಾ ಆರತಕ್ಷತೆಗೆ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸಿ ಅಡ್ಡಿಯನ್ನುಂಟುಮಾಡಿದ್ದಾರೆ.
ಜುಲೈ 14ರಂದು ನಡೆದ ಅಂಬಾನಿ ಕುಟುಂಬದ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದೆ ಪ್ರವೇಶಿಸಲು ಯತ್ನಸಿದ ಯೂಟ್ಯೂಬರ್ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ಯಕ್ರಮಕ್ಕೆ ಯೂಟ್ಯೂಬರ್ ವೆಂಕಟೇಶ್ ನರಸಯ್ಯ (26) ಮತ್ತು ಇನ್ನೊಬ್ಬ ವ್ಯಕ್ತಿ ಉದ್ಯಮಿ ಎಂದು ಹೇಳಿಕೊಂಡ ಲುಕಾಮ್ ಮೊಹಮ್ಮದ್ ಶಫಿ ಶೇಖ್ (28) ಆಂಧ್ರಪ್ರದೇಶದಿಂದ ಮುಂಬೈಗೆ ಬಂದಿದ್ದರು. ಇವರಿಗೆ ವಿವಾಹಕ್ಕೆ ಆಹ್ವಾನ ನೀಡದಿದ್ದರೂ ಕೂಡ ಗೇಟ್ ಕ್ರಾಸಿಂಗ್ ಮಾಡಿದ್ದಕ್ಕಾಗಿ ಪೊಲೀಸರು ಇಬ್ಬರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ವೆಂಕಟೇಶ್ ಮತ್ತು ಲುಕಮ್ ಇಬ್ಬರೂ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಗೆ ಆಗಮಿಸಿದ್ದರು. ಅನುಮಾನಗೊಂಡ ಭದ್ರತಾ ಅಧಿಕಾರಿಗಳು ಅವರನ್ನು ತಡೆದು ವಿಚಾರಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇವರಿಬ್ಬರನ್ನು ಬಿಕೆಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ವಿರುದ್ಧ ಅತಿಕ್ರಮಣ ಪ್ರಕರಣ ದಾಖಲಿಸಲಾಗಿದೆ. ನೋಟಿಸ್ ನೀಡಿದ ನಂತರ ಕಾನೂನು ಕ್ರಮ ಕೈಗೊಂಡ ಪೊಲೀಸರು ಇಬ್ಬರನ್ನು ಬಿಡುಗಡೆ ಮಾಡಿದರು ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA