ಬೆಂಗಳೂರು: ‘ಒಂದೇ ಸೂರಿನಡಿ 27 ಕಲಾವಿದರನ್ನು ಭೇಟಿ ಮಾಡಿ, ಅವರೊಂದಿಗೆ ಸಂವಾದ ನಡೆಸುವ ಅವಕಾಶವನ್ನು ನಗರದ ಜನರಿಗೆ ‘ಆರ್ಟ್ ಪಾರ್ಕ್ ಬೆಂಗಳೂರು’ ಕಲ್ಪಿಸಿದ್ದು, ಸೆ. 3ರಂದು ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಜೆ. ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದ ಬಳಿಯಿರುವ ಶಿಲ್ಪ ಉದ್ಯಾನದಲ್ಲಿ ‘ಮೀಟ್ ದಿ ಆರ್ಟಿಸ್ಟ್’ ಶೀರ್ಷಿಕೆಯಡಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದು ಕಲಾವಿದ ಎಸ್. ಜಿ. ವಾಸುದೇವ್ ಅವರ ಪರಿಕ್ಷನೆಯಾಗಿದ್ದು, ಪ್ರತಿ ತಿಂಗಳು ನಡೆಯಲಿದೆ. 2014ರಲ್ಲಿ ಮೊದಲ ಬಾರಿ ಈ ಕಾರ್ಯಕ್ರಮ ನಡೆಸಲಾಗಿತ್ತು.


