ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ ಅಂತಿಮವಾಗಿದ್ದು ಇದೀಗ ಸಂಪುಟ ರಚನೆ ಕಸರತ್ತು ಆರಂಭವಾಗಿದೆ.ಈವರೆಗೆ ರಾಜ್ಯದ ಸಿಎಂ ಅಭ್ಯರ್ಥಿಗಳ ಮನವೊಲಿಸಲು ಹೈಕಮಾಂಡ್ ನಾನಾ ಕಸರತ್ತುಗಳನ್ನು ಮಾಡಿತು. ಇದೀಗ ಶಾಸಕರು ಸಚಿವ ಸ್ಥಾನಕ್ಕೆ ಲಾಬಿ ಆರಂಭಿಸಲು ಮುಂದಾಗಿದ್ದು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆ ಸಂಪುಟ ರಚನೆ ಮುಂದಿರುವ ಹೊಸ ಸವಾಲಾಗಿದೆ.
ಸಿದ್ದರಾಮಯ್ಯ ಬಣದಿಂದ 3 ಡಿಸಿಎಂ ಹುದ್ದೆ ಸೃಷ್ಟಿಸುವ ಒತ್ತಡ ಕೇಳಿ ಬಂದಿತ್ತು. ಆದರೆ ಡಿಕೆ ಶಿವಕುಮಾರ್ ಇದನ್ನ ಒಪ್ಪದ ಹಿನ್ನೆಲೆ ಅವರನ್ನು ಹೊರತುಪಡಿಸಿ ಬೇರೆ ಯಾರು ಡಿಸಿಎಂ ಇರುವುದಿಲ್ಲ ಎಂಬ ಮಾಹಿತಿ ಇದೆ.
ಮೊದಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಿಎಂ ಹಾಗೂ ಡಿಸಿಎಂಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದು ಒಂದೆರಡು ದಿನಗಳ ಬಳಿಕ ಸಚಿವರ ಆಯ್ಕೆ ಆಗಲಿದೆ ಎನ್ನಲಾಗುತ್ತಿದೆ.
25 ರಿಂದ 30 ಸಚಿವರಿಗೆ ಅವಕಾಶ 4 ರಿಂದ 5 ಸ್ಥಾನ ಖಾಲಿ ಬಿಟ್ಟುಕೊಳ್ಳಲು ನಿರ್ಧಾರ ಮಾಡಲಾಗಿದೆ. ಹೈಕಮಾಂಡ್ ನಿಂದ ತಮ್ಮದೇ ಆದ ಸೂತ್ರದಲ್ಲಿ ಸಂಪುಟ ಸಿದ್ದವಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


