ದಾವಣಗೆರೆ : ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಾವಣಗೆರೆ ಜಿಲ್ಲಾ ರೋಗವಾಹಕ ಆಶಿತಾ ರೋಗಗಳ ನಿಯಂತ್ರಣ ಕಾರ್ಯಕ್ರಮ ನಡೆಯಿತು.
ಮಲೇರಿಯಾ ರೋಗವು ಒಬ್ಬರಿಂದೊಬ್ಬರಿಗೆ ಹರಡುವ ಕಾಯಿಲೆ ಆದ್ದರಿಂದ ಶೂನ್ಯ ಮಲೇರಿಯಾ ಗುರಿಯನ್ನು ತಲುಪೋಣ ಎನ್ನುವ ಗುರಿ ಇಟ್ಟುಕೊಂಡು ದಾವಣಗೆರೆ ಜಿಲ್ಲೆಯಿಂದ ಕೊಟ್ರೇಶ್ ಹಾಗೂ ಅಂಜನೇಯ ಆಗಮಿಸಿ ಮಲೇರಿಯಾ ವಿರೋಧಿ ಮಾಸಾಚರಣೆ ತರಬೇತಿ ಜಗಳೂರು ತಾಲೂಕು ಆಶಾ ಕಾರ್ಯಕರ್ತೆಯರಿಗೆ ನೀಡಿದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕುಆರೋಗ್ಯ ಅಧಿಕಾರಿಗಳಾದ ನಾಗರಾಜ್ , ಪ್ರಾಸ್ತಾವಿಕ ನುಡಿಗಳನ್ನಾಡಿ , ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರು ಲಾರ್ವ ಸರ್ವೆ ಮಾಡಿ ಜನಗಳಿಗೆ ಆರೋಗ್ಯ ಶಿಕ್ಷಣ ನೀಡಿ, ಮಲೇರಿಯಾ, ಚಿಕನ್ ಗ್ಯೂನ್ಯ, ಡೆಂಗ್ಯೂ ಜ್ವರ ಈ ಎಲ್ಲಾ ಕಾಯಿಲೆ ಸೊಳ್ಳೆಯಿಂದ ಬರುತ್ತಿವೆ ಎನ್ನುವುದರ ಬಗ್ಗೆ ಜಾಗೃತಿ ಮೂಡಿಸಬೇಕು. ಇದೇ ತಿಂಗಳ 29ನೇ ತಾರೀಖಿನಂದು ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಸರ್ ರವರು ಜಗಳೂರು ತಾಲ್ಲೂಕಿಗೆ ರಂದು ಆಗಮಿಸಲಿದ್ದಾರೆ . ಅದ್ದರಿಂದ ಆಶಾ ಕಾರ್ಯಕರ್ತೆಯರು (ತಪ್ಪದೆ)ಖಡ್ಡಾಯವಾಗಿ ಭಾಗವಹಿಸಿ ಎಂದು ಮನವಿ ಮಾಡಿಕೊಂಡರು.
ಆಂಜನೇಯ ಅವರು ಮಾತನಾಡಿ, ಮಲೇರಿಯಾ ಹರಡುವ ಹಂತಗಳು ಹಾಗೂ ಜಾಗೃತಿ ಕ್ರಮಗಳ ಕುರಿತು ಬೆಳಕು ಚೆಲ್ಲಿ, ಶೂನ್ಯ ಮಲೇರಿಯಾ ಗುರಿಯನ್ನು ತಲುಪೋಣ ಎಂದು ಕರೆ ನೀಡಿದರು.
ನಂತರ ಸಿದ್ದೇಶ ಅವರು ಕ್ಷಯ ರೋಗದ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಇ ಓ ಲಕ್ಷ್ಮೀಪತಿ , ಜಿಲ್ಲಾ ಕಛೇರಿ ಯಿಂದ ಅಂಜಿನೇಯ ಹಾಗೂ ಕೊಟ್ರೇಶ ತಾಲ್ಲೂಕು ಆರೋಗ್ಯಾಧಿಗಳಾದ ನಾಗರಾಜ , ಆಶಾ ಮೆಲ್ಪೀಚಾರಕರಾದ ರೇಷ್ಮಾ , ಆಶಾ ಕಾರ್ಯಕರ್ತೆಯರಾದ ಎಸ್.ಆರ್. ಇಂದಿರಾ ಗುರುಸ್ವಾಮಿ ಸೇರಿದಂತೆ ಎಲ್ಲ ಆಶಾ ಕಾರ್ಯಕರ್ತೆಯರು ಸಹ ಉಪಸ್ಥಿತರಿದ್ದರು..
ವರದಿ: ಮುರುಳಿಧರನ್ ಆರ್. ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


