ಹಾವೇರಿ ಜಿಲ್ಲೆ, ರಾಣೆಬೆನ್ನೂರು ತಾಲ್ಲೂಕು ಯರೇಕುಪ್ಪಿ ಗ್ರಾಮದಲ್ಲಿ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಅಷ್ಟಮಿ ಎಳೆ ಗೌರಿ ಪೂಜೆ ನೆರವೇರಿಸಲಾಯಿತು.
ದಿವಂಗತ ಕಾಳಪ್ಪಜ್ಜ ಅಕ್ಕಾಚಾರಿ ಇವರು ಪೂಜಿಸುತ್ತಿದ್ದ ಅಷ್ಟಮಿ ಎಳೆ ಗೌರಿ ಪೂಜೆಯನ್ನು ಮಕ್ಕಳು ಮುಂದುವರಿಸಿದ್ದಾರೆ. ಈ ಹಬ್ಬದ ವಿಶೇಷವಾಗಿ ಪೂಜೆಯ ಜೊತೆಗೆ ಗೊಂಬೆಯಾಟದ ಗೊಂಬೆಯನ್ನು ಸಹ ಕೂರಿಸುತ್ತಾರೆ. ಈ ಗೊಂಬೆಗಳು, ಗೊಂಬೆಯಾಟದಲ್ಲಿ ದೇಶ ವಿದೇಶದಲ್ಲಿ ಪ್ರದರ್ಶನ ನೀಡಿ ಬಹುಮಾನ ಪಡೆದಿವೆ.
ಈ ಬಾರಿ ಗೊಂಬೆ ಆಟ ಆಡಿಸುವರು ಇಲ್ಲದ ಕಾರಣ ಗೊಂಬೆಗಳನ್ನು ಇಟ್ಟು ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಪೂಜೆಯಲ್ಲಿ ಶ್ರೀ ಮಾರುತಿ ಭಜನಾ ಸಂಘ ಇವರ ಭಜನಾ ಸೇವೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಶಿವಕುಮಾರ್ ಅಕ್ಕಾಚಾರಿ, ಚನ್ನವೀರಪ್ಪ ಅಕ್ಕಾಚಾರಿ, ನಾಗಪ್ಪ ಅಂಗಡಿ, ದ್ಯಾವಣ್ಣ ತೊಳಲಿ, ಹನುಮಪ್ಪ ಹೂರಕೇರಿ, ಮುಕುಂದಪ್ಪ ಯೋಗಿ, ಜನಾರ್ಧನ್ ಗೌಡ ಪಾಟೀಲ್ ಮತ್ತು ಊರಿನ ಎಲ್ಲಾ ಗ್ರಾಮಸ್ಥರು ಹಾಜರಿದ್ದರು.
ವರದಿ: ಮಂಜು ಶ್ರವಣೂರು


