ಬೆಂಗಳೂರು: ಆಸ್ತಿ ವ್ಯಾಜ್ಯದಲ್ಲಿ ಮಧ್ಯ ಪ್ರವೇಶಿಸಿ ಮಹಿಳೆಯರಿಬ್ಬರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಮಂಜುನಾಥ್ ಅಲಿಯಾಸ್ ದಾಸನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿ ದಾಸ, ಇನ್ ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ವಿಡಿಯೊ ಮಾಡುತ್ತಿದ್ದ. ಈತನ ವಿಡಿಯೊವನ್ನು ಹಲವರು ಲೈಕ್ ಮಾಡುತ್ತಿದ್ದರು. ಅಲ್ಲಾಳಸಂದ್ರದ ನಿವಾಸಿಯಾಗಿರುವ 45 ವರ್ಷದ ಮಹಿಳೆ ನೀಡಿರುವ ದೂರು ಆಧರಿಸಿ ದಾಸನನ್ನು ಸೆರೆ ಹಿಡಿಯಲಾಗಿದೆ.
ಜಾಗದ ವಿಚಾರಕ್ಕೆ ದಲಿತ ಕುಟುಂಬಕ್ಕೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹವಾ ಇಟ್ಟ ದಾಸ ನನ್ನಹ ಅರೆಸ್ಟ್ ಮಾಡಲಾಗಿದೆ.
ಜಾಗದ ವಿಚಾರಕ್ಕೆ ರಾಮಮೂರ್ತಿ ಎಂಬಾತ ರೌಡಿ ಆಕ್ಟಿವಿಟಿಯಲ್ಲಿರೋ ದಾಸನ ಸಹಾಯ ಪಡೆದಿದ್ದ. ದಲಿತ ಕುಟುಂಬಕ್ಕೆ ಬೆದರಿಕೆ ಹಾಕಲು ದಾಸನ ಹುಡುಗರನ್ನ ಕರೆಸಿಕೊಂಡಿದ್ದ. ಸದ್ಯ ದಾಸ ಎಂಬಾತನನ್ನು ಅರೆಸ್ಟ್ ಮಾಡಿದ್ದೇವೆ. ಆತನ ವಿರುದ್ಧ ರೌಡಿಶೀಟರ್ ಹಾಕುವ ಪ್ರಕ್ರಿಯೆ ನಡೀತಿದೆ ಎಂದು ಡಿಸಿಪಿ ಲಕ್ಷ್ಮೀ ಪ್ರಸಾದ್ ಹೇಳಿದ್ದಾರೆ.


