ತುಮಕೂರು: ನವಂಬರ್ ನಲ್ಲಿ ಸೃಷ್ಟಿಯಾಗಿದ್ದ ಪೆಂಗಲ್ ಚಂಡಮಾರುತದಿಂದ ತಮಿಳುನಾಡಿನ ಭಾಗಶಃ ಸಮುದ್ರ ತೀರದ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿದ್ದವು, ಪ್ರತಿ ವರ್ಷದಂತೆ ಈ ವರ್ಷವೂ ಸಹ ತಮಿಳುನಾಡಿನ ಜನರ ನೆರವಿಗೆ ಪಾವಗಡದ ಸ್ವಾಮೀಜಿ ಜಪಾನಂದ ನಿಂತಿದ್ದು, ಹತ್ತು ಸಾವಿರ ಜನರಿಗೆ ಸುಮಾರು 2500 ಮೌಲ್ಯದ ಕಿಟ್ ವಿತರಣಾ ಕಾರ್ಯಕ್ಕೆ ಬರದಿಂದ ಸಿದ್ಧತೆಗಳನ್ನ ಕೈಗೊಳ್ಳುತ್ತಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮಿ ಜಪಾನಂದ ಜಿ., ಕಳೆದ 35 ವರ್ಷಗಳಿಂದ ಸೇವೆ ನಿರಂತರವಾಗಿ ನಡೆಸಲಾಗುತ್ತಿದ್ದು, ಕಳೆದ ನವೆಂಬರ್ ನಲ್ಲಿ ಆಂಧ್ರಪ್ರದೇಶದ ಅನಂತಪುರಂನಲ್ಲಿ ಪ್ರವಾಹ ಪೀಡಿತರಿಗೆ ನೆರವು ನೀಡಲಾಗಿತ್ತು. ನಂತರ ಇದೀಗ ತಮಿಳುನಾಡಿನ ಜನರು ಕರೆ ಮಾಡಿ ನೆರವಿಗೆ ಧಾವಿಸುವಂತೆ ವಿನಂತಿಸಿಕೊಂಡಿದ್ದು ಈ ಹಿನ್ನಲೆ 10,000 ಜನರಿಗೆ ನೆರವು ನೀಡುತ್ತಿದ್ದು, ಅದರಂತೆ ಪಾವಗಡದ ಸ್ವಯಂಸೇವಕರಿಂದ ಕೀಟಗಳನ್ನು ತಯಾರಿಸಲಾಗುತ್ತಿದೆ ಎಂದು ಮಾಹಿತಿಯನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಆಶ್ರಮದ ಭಕ್ತರಾದ ಜೆ.ಎಸ್.ಅನಿಲ್ ಕುಮಾರ್, ಕಮಲ್ ಬಾಬು, ಮತ್ತಿತರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx