ತುಮಕೂರು: ಸವಿತಾ ಸಮಾಜ ಸಹಕಾರ ಸಂಘಗಳು ಸವಿತಾ ಬಂಧುಗಳ ಭವಿಷ್ಯ ರೂಪಿಸುವ ಸಂಘಗಳಾಗಿ ರೂಪಗೊಳಬೇಕು, ಮಧುಗಿರಿ ಸವಿತಾ ಸಹಕಾರ ಸಂಘ ರಾಜ್ಯಕ್ಕೆ ಮಾದರಿ ಆಗಬೇಕೆಂದು ಸವಿತಾ ವಿವಿಧೋದ್ದೇಶ ಸಹಕಾರ ಸಂಘದ ಸದಸ್ಯರಿಗೆ ಏರ್ಪಡಿಸಿದ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ನಾಯಕರಾದ ಹಾಗೂ ವಕೀಲರಾದ ಕೃಷ್ಣಪ್ಪ ಕರೆ ನೀಡಿದರು.
ಮಧುದುಗಿರಿ ಸವಿತಾ ಸಹಕಾರ ಸಂಘದಲ್ಲಿ ಯಾವುದೇ ಚುನಾವಣೆ ಇಲ್ಲದೆ ಸರ್ವಾನುಮತದಿಂದ ಆಯ್ಕೆ ಆಗಿರುವುದು ಸವಿತಾ ಸಮಾಜಕ್ಕೆ ಮಾದರಿ ಆಗಿದೆ ಈ ರೀತಿ ರಾಜ್ಯದ ಎಲ್ಲ ಸಹಕಾರ ಸಂಘಗಳಲ್ಲಿ ಭಿನ್ನಾಭಿಪ್ರಾಯವಿಲ್ಲದೆ, ಆಯ್ಕೆಯಾದ ಪಕ್ಷದಲ್ಲಿ ಚುನಾವಣೆಗೆ ಆಗುತ್ತಿದ್ದ ಹಣ ಉಳಿಯುತ್ತದೆ ಎಂದು ಕ್ಷೌರಿಕ ಹಿತ ರಕ್ಷಣಾ ವೇದಿಕೆ ಕಾರ್ಯದರ್ಶಿಯವರಾದ ಜಯನಗರ ಬಾಲಕೃಷ್ಣ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಮಧುಗಿರಿ ಶಿವಕುಮಾರ್ ರವರು ಮಧುಗಿರಿ ಸವಿತಾ ಬಂಧುಗಳ ಅಭಿಮಾನಗಳಿಸಿ ಸವಿತಾ ಸಹಕಾರ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆ ಆಗಿರುವುದು ಅಭಿನಂದನೆ ಸಲ್ಲಿಸಲು ಈ ರಾಜ್ಯದ ನಾಯಕರು ಸೇರಿ ಅಭಿನಂದನ ಸಲ್ಲಿಸುವ ಕಾರ್ಯಕ್ರಮ ಆಗಿದೆ ಎಂದೂ ತುಮಕೂರು ಸವಿತಾ ಸಮಾಜ ಜಿಲ್ಲಾ ಅಧ್ಯಕ್ಷರಾದ ಮಂಜೇಶ್ ಗಾಂಧಿಯವರು ಎಲ್ಲರಿಗೂ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಅಭಿನಂದನಾ ಕಾರ್ಯಕ್ರಮದ ಸ್ವಾಗತವನ್ನು ಮಾರುತಿ ಕೈಮರ ನಡೆಸಿಕೊಟ್ಟರು, ಲಕ್ಷ್ಮಿಪತಿ ರವರು ವಂದಾನಾರ್ಪಣೆಯನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ನಾಯಕರಾದ ರಾಘವೇಂದ್ರ, ಶಬರೀಶ್, ಕ.ರ.ವೇ, ನಾಗರಾಜ್, ತ್ಯಾಗರಾಜ್, ಡಾ.ರಮೇಶ, ರಾಮಚಂದ್ರಪ್ಪ, ಮಣಿ, ವೇಣುಗೋಪಾಲ್, ಕೃಷ್ಣಮೂರ್ತಿ, ಮಂಜುನಾಥ್, ಮುರಳಿಧರ, ಲಕ್ಷ್ಮಿ ಪ್ರಸನ್ನ, ಡಾಲಿ ವಿಶ್ವನಾಥ, ನಾಗರಾಜು, ನರಸಿಂಹಮೂರ್ತಿ, ರಾಮಾಂಜೀನಪ್ಪ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಎಲ್ಲಾ ಸಹಕಾರ ಸಂಘದ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx