ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ಗಂಡ ಮತ್ತು ಮಗ ಬೇಡವೆಂದು ದೂರವಿದ್ದವಳು ಆತನ ಮೂರೂವರೆ ಎಕರೆ ಆಸ್ತಿಯ ವ್ಯಾಮೋಹಕ್ಕೆ ಗಂಡನ ಹತ್ಯೆ ಮಾಡಿದ್ದಾಳೆ. ನವೆಂಬರ್ 29ರಂದು ನಡೆದಿದ್ದ ರೈತ ರವೀಶ್ ಅನುಮಾನಾಸ್ಪದ ಸಾವಿನ ನಿಜ ಕತೆ ಇದು.
28 ವರ್ಷದ ಹಿಂದೆ ಯಡವನಹಳ್ಳೀ ಗ್ರಾಮದ ರವೀಶ್ ಜೊತೆಗೆ ಮದುವೆಯಾಗಿದ್ದ ತಿಪಟೂರು ಹೊನ್ನೇನಹಳ್ಳಿ ಗ್ರಾಮದ ಶಿವಗಂಗಮ್ಮ ಮದುವೆಯಾದ ಎಂಟೇ ವರ್ಷಕ್ಕೆ ಗಂಡನಿಂದ ದೂರವಾಗಿದ್ದಳು. ಗಂಡನ ಜೊತೆಗಿದ್ದಾಗ ಬಗರ್ ಹುಕಂ ಯೋಜನೆಯಡಿ ಈಕೆಯ ಹೆಸರಿಗೆ 3 ಎಕರೆ 20 ಗುಂಟೆ ಜಮೀನು ಮಂಜೂರಾಗಿತ್ತು.
ಈ ಜಮೀನನನು ರವೀಶ್ ಕೊಡಲು ಒಪ್ಪದಿದ್ದಾಗ ಒಪ್ಪದಿದ್ದಾಗ ಅವನನ್ನೇ ಮುಗಿಸೋ ಪ್ಲಾನ್ ಮಾಡಿ ಅಣ್ಣನ ಮಗ ಗುರುಪ್ರಸಾದ್ ಜೊತೆಗೆ ಜಮೀನಿನ ಬಳಿ ಬಂದಿದ್ದಾಳೆ. ಆಸ್ತಿ ಕೊಡದ ನಿನ್ನನ್ನ ಉಳಿಸೋದಿಲ್ಲ ಎಂದು ಗುರುಪ್ರಸಾದ್ ಜೊತೆ ಸೇರಿ ಕಲ್ಲು ದೊಣ್ಣೆಯಿಂದ ಹಲ್ಲೆ ಮಾಡಿ ಕೊಂದಿದ್ದಾಳೆ.
ರೈತ ಮುಖಂಡನೆಂದು ಹೇಳಿಕೊಂಡು ಓಡಾಡುತ್ತಿದ್ದ ದಯಾನಂದ್ ಸಹಾಯ ಪಡೆದು ಜಮೀನಿನ ಬಳಿ ರವೀಶ್ ಜಾನುವಾರು ಮೇಯಿಸುತ್ತಿದ್ದಾಗ ಹಸುಗಳು ಮೈ ಮೇಲೆ ಬಿದ್ದಿವೆ, ಹಗ್ಗ ಸುತ್ತಿಕೊಂಡು ಎಳೆದಾಡಿದ್ದರಿಂದ ಪ್ರಾಣ ಹೋಗಿದೆ ಎಂದು ಆಸ್ಪತ್ರೆಯಲ್ಲಿ ಮೃತದೇಹ ಇಟ್ಟು ನೋಟ್ ಬರೆಸಿದ್ದಾರೆ. ಊರ ಜನರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದು, ಅನುಮಾನಾಸ್ಪದ ಸಾವು ಎಂದು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಇದು ಕೊಲೆಯೆಂಬುದು ದೃಢಪಟ್ಟಿದೆ.
ಇರುವ ಆಸ್ತಿಯಲ್ಲಿ ಅರ್ಧ ನಿನಗೆ, ಇನ್ನರ್ಧ ನನಗೆ ಎಂದು ಅರ್ಧ ಆಸ್ತಿ ಬಿಟ್ಟುಕೊಟ್ಟು ಉಳಿದ ಅರ್ಧದಲ್ಲಿ ರವೀಶ್ ತಾನು ರಾಗಿ ಬೆಳೆದುಕೊಂಡಿದ್ದ. ಪೂರ್ತಿ ಆಸ್ತಿ ತನಗೇ ಸೇರಬೇಕು ಎಂದು ಹಠಕ್ಕೆ ಬಿದ್ದಿದ್ದ ಶಿವಗಂಗಮ್ಮ ನವೆಂಬರ್ 29ರಂದು ಆತನನ್ನೇ ಮುಗಿಸಿ ಕತೆ ಕಟ್ಟಿದ್ದಾಳೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


