ಪತ್ನಿ ಕಿರುಕುಳ ಕಾಟ ತಡೆಯಲಾರದೇ ಪತಿ ಹಾಗೂ ಸೊಸೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ರಾಜಗೋಪಾಲನಗರದ ಶ್ರೀಗಂಧ ನಗರದ ನಿವಾಸಿ ಅತ್ತೆ ಭಾಗ್ಯಮ್ಮ (57) ಮತ್ತು ಶ್ರೀನಿವಾಸ್ (33) ಮೃತಪಟ್ಟ ದುರ್ದೈವಿಗಳು.
ಮೃತ ಶ್ರೀನಿವಾಸ್ ಪೋಷಕರಿಗೆ ವಯಸ್ಸಾಗಿದ್ದು, ತಿಂಗಳ ಹಿಂದೆಯಷ್ಟೇ ಮಡಿಕೇರಿಯಲ್ಲಿದ್ದ ತನ್ನ ತಂದೆ, ತಾಯಿಯನ್ನು ಬೆಂಗಳೂರಿನ ಮನೆಗೆ ಕರೆದುಕೊಂಡು ಬಂದಿದ್ದರು.
ಶ್ರೀನಿವಾಸ್ ಪತ್ನಿ ಸಂಧ್ಯಾಳಿಗೆ ಇದು ಇಷ್ಟವಿರಲಿಲ್ಲ. ವಯಸ್ಸಾದ ಅತ್ತೆ – ಮಾವನನ್ನು ನೋಡಿಕೊಳ್ಳೋರು ಯಾರು? ನನಗೆ ಅತ್ತೆ, ಮಾವ ನೋಡಿಕೊಳ್ಳೋಕೆ ಕಷ್ಟ ಎಂದು ಸಂಧ್ಯಾ ಗಲಾಟೆ ತೆಗೆದಿದ್ದಳು. ಮಧ್ಯರಾತ್ರಿ ಮೂರು ಗಂಟೆಗೆ ಗಲಾಟೆ ನಡೆದಿತ್ತು ಎಂಬ ಆರೋಪ ಬಂದಿದೆ.
ಸಂಧ್ಯಾಳ ಜಗಳದಿಂದ ಬೇಸತ್ತ ತಾಯಿ ಭಾಗ್ಯಮ್ಮ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಂತರ ಶ್ರೀನಿವಾಸ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಧ್ಯಾಹ್ನದ ತನಕ ಬಾಗಿಲು ತೆಗೆಯದಿದ್ದಾಗ ಅನುಮಾನಗೊಂಡು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಗಲಾಟೆಯಿಂದ ಬೇಸತ್ತು ತಾಯಿ- ಮಗ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿ ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


